ತಂಪು ಪಾನಿಯಾ ಪ್ರೀಯರಿಗಿದೆ ಇಲ್ಲೊಂದು ಅಘಾತಕಾರಿ ಸುದ್ದಿ..! ಬಿಸಿಲ ಬೇಗೆ ತಡೆಯಲಾರದೆ ನೀವು ತಂಪು ಪಾನಿಯಾದ ಮೊರೆ ಹೋಗುತ್ತೀರ.. ಆದ್ರೆ ಗೊತ್ತಿರ್ಲಿ ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..! ಹೌದು.. ಹೀಗೆಂದು ಅಧ್ಯಯನ ಸಂಸ್ಥೆಯು ವರದಿ ಮಾಡಿದೆ ನೋಡಿ..
ನಾವು ಕುಡಿಯುವ ತಂಪು ಪಾನಿಯಗಳಲ್ಲಿ ಆಂಟಿಮೊನಿ, ಸತು, ಹಾಗೂ ಕ್ಯಾಡ್ಮಿಯಂನಂತಹ ವಿಷಕಾರಿ ಅಂಶಗಳಿರುವುದಾಗಿ ಸರಕಾರಿ ಅಧ್ಯಯನವೊಂದು ತಿಳಿಸಿದೆ. ವಿಶ್ವದ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳಲ್ಲೊಂದಾದ ಪೆಪ್ಸಿಕೊ ಹಾಗೂ ಕೋಕೋ ಕೋಲಾ ಕಂಪನಿಯ ಪಾನಿಯಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಇವೆರೆಡು ಕಂಪನಿಗಳಲ್ಲಿ ತಯಾರಾಗುವ ಐದು ಪಾನಿಯಾಗಳಲ್ಲಿ ವಿಷಕಾರಿ ಅಂಶವಿರುವುದು ಬಯಲಾಗಿದೆ. ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ ನಡೆಸಿರುವ ಈ ಅಧ್ಯಯನದಲ್ಲಿ ಪೆಪ್ ಬಾಟಲಿಗಳಲ್ಲಿ ಸಂಗ್ರಹಿಸುವ ಪೆಪ್ಸಿ, ಕೋಲಾ, 7ಅಪ್, ಸ್ಪ್ರೈಟ್ ಹಾಗೂ ಮೌಂಟೇನ್ ಡೀವ್‍ಗಳಂತಹ ಬಹು ಬೇಡಿಕೆ ತಂಪುಪಾನಿಯಾಗಳಲ್ಲಿ ವಿಷಕಾರಿ ಅಂಶವಿರುವುದು ಬಯಲಾಗಿದೆ. ಇನ್ನು ಕಳೆದ ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ನಡೆಸಲಾದ ಫಲಿತಾಂಶ ಈಗ ಲಭ್ಯವಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಡಿಟಿಎಬಿ ಸೂಚನೆಯಂತೆ ಕೊಲ್ಕತ್ತಾ ಮೂಲದ ಭಾರತೀಯ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಯಿತು. ಈ ವರದಿಯನ್ನು ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಹಾಗೂ ಡಿಟಿಎಬಿ ಅಧ್ಯಕ್ಷ ಜಗದೀಶ್ ಪ್ರಸಾದ್ ಅವರಿಗೆ ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ವರದಿ ನಮ್ಮ ಕೈ ಸೇರಿಲ್ಲ ಎಂದು ಪೆಪ್ಸಿಕೋ ವಕ್ತಾರ ತಿಳಿಸಿದ್ದಾರೆ.
Like us on Facebook The New India Times
POPULAR STORIES :
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!
ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?
ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ