ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಬೇಕು, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಯನ್ನು ಮುಚ್ಚೋಕೆ ಅವಕಾಶ ಕೊಡ್ಬಾರ್ದು. ಖಾಸಗೀ ಶಾಲೆಗಳ ಬದಲಿಗೆ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಸೇರಿಸಿದ್ರೆ ಜ್ಞಾನದ ಶಕ್ತಿ ಹೆಚ್ಚುತ್ತೆ ಹಾಗೆ ಹೀಗೆ ಅಂತ ಮಾರುದ್ದ ಭಾಷಣ ಮಾಡೊ ಧೀಮಂತ ನಾಯಕರೇ.. ಕನ್ನಡಾಭಿಮಾನಿಗಳೇ..! ಒಂದ್ಸರಿ ಈ ಕನ್ನಡ ಶಾಲೆಯ ದುಸ್ತಿತಿ ಹೇಗಿದೆ ಅಂತ ನೋಡಿ..! ನಿಮ್ಮ ಭಾಷಣಗಳೆಲ್ಲಾ ಕೇವಲ ಕನ್ನಡ ರಾಜ್ಯೋತ್ಸವದಂದು ಮಾತ್ರ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ನೋಡಿ..! ಹಾಸನ ಜಿಲ್ಲೆ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಬೇಲೂರಿನ ಮಲದೇವಿ ಹಳ್ಳಿಯ ಸರ್ಕಾರಿ ಶಾಲೆಯನ್ನು ನೋಡಿದ್ರೆ ನಿಜಕ್ಕೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸ್ಬೇಕಾ ಅಂತ ಪೋಷಕರಿಗೆ ಚಿಂತೆ ಶುರುವಾಗುತ್ತೆ..! ಯಾಕಂದ್ರೆ ಈ ಸರ್ಕಾರಿ ಶಾಲೆಗೆ ಮೇಲ್ಛಾವಣಿಯೇ ಇಲ್ಲ..! ಅದ್ರಲ್ಲೆ ಪಾಠ ಕೇಳೋ ದುಸ್ಥಿತಿ ಅಲ್ಲಿನ ವಿದ್ಯಾರ್ಥಿಗಳಿಗೆ ಬಂದಿದೆ ನೋಡಿ..! ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕಳೆದ ವರ್ಷ ಮೇನಲ್ಲಿ ಭಾರಿ ಬಿರುಗಾಳಿಗೆ ಶಾಲೆಯ ಎರಡು ಕೊಠಡಿಗಳ ಮೇಲ್ಛಾವಣಿ ಹಾರಿ ಹೋಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಬಯಲಿನಲ್ಲಿಯೇ ವಿದ್ಯಾರ್ಥಿಗಳಿಗೆ ಬೋಧನೆ..! ಸುಮಾರು 60 ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಈಗ ಕೇವಲ 26 ಮಕ್ಕಳಿದ್ದಾರೆ..! ಕಾರಣ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದೆ ಇರೋದು. ವಿದ್ಯಾರ್ಥಿಗಳ ಕುರಿತು ಮಾರುದ್ದ ಭಾಷಣ ಮಾಡೋ ಪ್ರತಿನಿಧಿಗಳು ಈ ಮಕ್ಕಳ ಪಾಡು ನೋಡಿ ಮನ ಕರುಗೊಲ್ವಾ..? ಮಾಜಿ ಪ್ರಧಾನಿಗಳ ತವರು ಜಿಲ್ಲೆಯಲ್ಲೆ ಇಂತಹ ಸ್ಥಿತಿ ಇರೋದು ತುಂಬಾ ಬೇಸರದ ಸಂಗತಿ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಭಾರಿ ಗಿಫ್ಟ್ ನೀಡೋಕೆ ಮುಂದಾಗಿದೆ ಜಿಯೋ..!
ರಯೀಸ್ ಚಿತ್ರ ಬಿಡುಗಡೆ ಮಾಡ್ಬೇಡಿ: ಶಿವಸೇನೆ ಧಮ್ಕಿ..!
ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!
ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!
ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ
195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!