ಕಣ್ಣೆದುರೊಂದು ಸ್ಪಷ್ಟ ಗುರಿ, ಗುರಿ ಮುಟ್ಟುವ ಛಲ, ಆ ನಿಟ್ಟಿನಲ್ಲಿ ಎಡ ಬಿಡದ ಪ್ರಯತ್ನ ಇರಬೇಕು..! ಹೀಗಿದ್ದರೆ ಒಂದಲ್ಲ ಒಂದು ದಿನ ಅಂದು ಕೊಂಡಿದ್ದನ್ನು ಸಾಧಿಸೇ ಸಾಧಿಸ್ತೀವಿ..! ಆಗಲ್ಲ ಅಂತ ಸುಮ್ನೆ ಕುಳಿತರೆ ಏನೂ ಮಾಡಲಾಗಲ್ಲ..! `ಭೂಮಿಗೆ ಭಾರ, ಕೂಳು ದಂಡ’ ಎಂಬಂತೆ ಬದುಕುವುದರಲ್ಲಿ ಅರ್ಥವಿಲ್ಲ..! ಇವತ್ತು ಎತ್ತರೆತ್ತರಕ್ಕೆ ಬೆಳೆದವರೆಲ್ಲಾ ಒಂದಾನೊಂದು ಕಾಲದಲ್ಲಿ ಕಷ್ಟದಲ್ಲಿ ಬೆಂದವರೇ ಆಗಿದ್ದಾರೆ..! ಬೆಳೆದು ಬಂದವರ ಬಗ್ಗೆ ಓದುತ್ತಲೇ ಇರ್ತೀವಿ. ಆದರೆ ಗುರಿ ಮುಟ್ಟಲು ಮುಳ್ಳಿನ ಹಾದಿಯಲ್ಲಿ ಎಡಬಿಡದೆ ನಡೆದು ಹೋಗುತ್ತಿರುವವರ ಬಗ್ಗೆ ಓದುವುದು ತೀರಾ ಅಪರೂಪ..! ಅಂಥವರಲ್ಲಿ ಯಲ್ಲಮ್ಮ ಕೂಡ ಒಬ್ಬರು..!
ಯಲ್ಲಮ್ಮ ನಮ್ಮ ಬೆಂಗಳೂರಿಗರು. ಇವರಿಗಿನ್ನೂ 22 ವರ್ಷ. 18ನೇ ವರ್ಷದಲ್ಲೇ ಇವರಿಗೆ ಮದುವೆಯನ್ನೂ ಮಾಡ್ತಾರೆ. ಮದುವೆಯಾದರೇನು ಬಂತು ಗಂಡನೆನಿಸಿಕೊಂಡ ಪುಣ್ಯಾತ್ಮ ಇವರಿಂದ ದೂರಾಗಿದ್ದಾನೆ..! ದೂರಾಗುವ ಮೊದಲು ಕೈಗೊಂದು ಹೆಣ್ಣು ಪಾಪುವನ್ನೂ ಕೊಟ್ಟಿದ್ದಾನೆ..! ಈಗ ಯಲ್ಲಮ್ಮಳ ಮಗಳಿಗಿನ್ನೂ ಎರಡು ವರ್ಷ. ಗಂಡ ಜೊತೆಗಿಲ್ಲ, ಕಂಕಳಲ್ಲಿ ಪುಟ್ಟ ಮಗು, ಮನೆಯಲ್ಲಿ ಬಡತನ..! ಇಷ್ಟಾದರೂ ಯಲ್ಲಮ್ಮನ ಕಣ್ಣೆದರೊಂದು ದೊಡ್ಡ ಗುರಿ ಇದೆ..! ಆ ಗುರಿ ಮುಟ್ಟಲು ಬಹಳಷ್ಟು ಕಷ್ಟಪಡ್ತಾ ಇದ್ದಾರೆ. ದುಡಿಮೆಗೆ ಬೇರೆ ದಾರಿ ಕಾಣದೆ ನಮ್ಮ ಬೆಂಗಳೂರಲ್ಲೇ ಆಟೋ ಓಡಿಸಿಕೊಂಡಿದ್ದಾರೆ..! ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8ಗಂಟೆಯವರಗೆ ಆಟೋ ಓಡಿಸ್ತಾರೆ..! ಬಿಡುವಿನ ವೇಳೆಯಲ್ಲಿ ನಿಯತಕಾಲಿಕೆಗಳು, ದಿನಪತ್ರಿಕೆಗಳ ಮೇಲೆ ಕಣ್ಣಾಡಿಸ್ತಾರೆ..! ಓದುವುದನ್ನು ಮುಂದುವರೆಸಿರುವ ಇವರು ಪಿಯುಸಿ ಮಾಡ್ತಾ ಇದ್ದಾರೆ..! ಇವರ ದೊಡ್ಡ ಗುರಿ ಐಎಎಸ್ ಮಾಡೋದು.! ನಾನು ಕಷ್ಟಪಟ್ಟು ಓದಿ ಐಎಎಸ್ ಮಾಡಿ ನನ್ನಂತೆ ನೊಂದ ಮಹಿಳೆಯರಿಗೆ ಸಹಾಯ ಮಾಡ್ಬೇಕು ಅಂತ ಕನಸಿನ ಮೂಟೆಯನ್ನು ಹೊತ್ತಿದ್ದಾರೆ..! ದಿನ 700-800 ರೂ ದುಡಿಯುತ್ತಿದ್ದಾರಂತೆ..! ಇವರ ಛಲ, ಶ್ರಮವನ್ನು ಮೆಚ್ಚಿ ಬಹುತೇಕ ಪ್ಯಾಸೆಂಜರ್ಗಳು ಮೀಟರ್ ಮೇಲೆ 10-20 ರೂಪಾಯಿ ಹೆಚ್ಚಿಗೆ ಕೊಟ್ಟು ಇವರನ್ನು ಪ್ರೋತ್ಸಾಹಿಸ್ತಾರೆಂದೂ ಕೂಡ ಯಲ್ಲಮ್ಮ ಹೇಳ್ತಾರೆ..! ಏನೇ ಆಗಲಿ ನಮ್ಮ ಕನ್ನಡತಿ ಯಲ್ಲಮ್ಮಗೆ ಒಳ್ಳೇದಾಗಲಿ, ಐಎಎಸ್ ಮಾಡೋ ಅವರ ಕನಸು ನನಸಾಗಲೆಂದು ಆಶಿಸೋಣ.
- ಶಶಿಧರ ಡಿ ಎಸ್ ದೋಣಿಹಕ್ಲು
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಈತ ಬರೋಬ್ಬರಿ 800ಕ್ಕೂ ಹೆಚ್ಚು ಮಕ್ಕಳ ತಂದೆ..! ಈತನ ದಾಖಲೆ ಕಂಡು ಕೌರವರೇ ಬೆಚ್ಚಿಬಿದ್ದರು..!
ಐಎಎಸ್ ಅಧಿಕಾರಿ ಏಕೆ ಕೆಲಸ ಬಿಟ್ಟರು ಗೊತ್ತಾ..? ಐಎಎಸ್ ಕೆಲಸ ಬಿಡುವಂತೆ ಮಾಡಿದ ಕೆಲಸ ಯಾವುದು..?
ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?
ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!