ಇಂತಹ ಶಾಸಕರು ನಿಮ್ಮಲ್ಲಿದ್ದಾರೆಯೇ…?

Date:

ಇಂದಿನ ಕಾಲಘಟ್ಟದಲ್ಲಿ ರಾಜಕಾರಣಿಗಳು ಹೇಗಿರುತ್ತಾರೆ ಅಂದರೆ ಗ್ರಾಮ ಪಂಚಾಯಿತಿ ಅಧ್ಯಕ್ಷನೂ ಕೂಡ ಇಂದು ಇನ್ನೋವಾ, ಸ್ಕಾರ್ಪಿಯೋದಂತಹ ಕಾರುಗಳಲ್ಲೇ ಓಡಾಡುವುದು. ಇನ್ನು ಎಂಎಲ್‍ಎ, ಎಂಪಿಗಳು ಹಾಗೂ ಮಂತ್ರಿಗಳು ಹೇಗಿರುತ್ತಾರೆ ಅನ್ನೋದು ನಿಮಗೆ ಗೊತ್ತಿರುವ ವಿಷಯವೇ ಅಲ್ಲವೇ..! ಆಡಿ, ಬೆಂಜ್ ಕಾರುಗಳೇ ಅವರಿಗೆ ಬೇಕು. ಕಾರಿನ ಮೇಲೆ ಕಾಗೆ ಕೂತರೆ ಸಾಕು ಮಾರನೆಯ ದಿನವೇ ಆ ಕಾರು ಗುಜುರಿ ಪಾಲು ಅಂತಹ ಭೋಗ ವಿಲಾಸಿ ನಮ್ಮ ರಾಜಕಾರಣಿಗಳು. ಆದರೆ ಇಲ್ಲಿಬ್ಬರು ಶಾಸಕರಿದ್ದಾರೆ ನೋಡಿ.. ಇವರ ಕಾರ್ಯ ಚಟುವಟಿಕೆ ಎಂತವರನ್ನೂ ನಿಬ್ಬೆರಗಾಗಿಸುತ್ತದೆ.
ಇದು ಕೇರಳ ರಾಜ್ಯದ ಇಬ್ಬರು ಶಾಸಕರ ಸರಳ ಸಭ್ಯರ ಸ್ಟೋರಿ. ಒಬ್ಬರು ಕುಂ ರಾಮನ್. ಕರ್ನಾಟಕ ಕೇರಳಾದ ಗಡಿ ಕಾಸರಗೋಡು ಜಿಲ್ಲಿಯಲ್ಲಿ ಎರಡನೇ ಬಾರಿಗೆ ಜನಮತದೊಂದಿಗೆ ಗೆದ್ದು ಶಾಸಕರಾದವರು. ಇವರು ತಮ್ಮ ಜೀವನ ನಿರ್ವಹಣೆಗಾಗಿ ತನ್ನದೇ ಆದ ಸಣ್ಣ ಗದ್ದೆಯಲ್ಲಿ ಸ್ವತಃ ದುಡಿಯುತ್ತಾರೆ. ಇನ್ನೋಬ್ಬರು ಸಸೀಂದ್ರನ್. ಆದಿವಾಸಿಗಳು ಹೆಚ್ಚಿರುವ ವಯನಾಡ್ ಜಿಲ್ಲೆಯಿಂದ ಪ್ರಥಮಬಾರಿಗೆ ಶಾಸಕರಾಗಿರುವ ಈ ಹಿರಿಯ ವ್ಯಕ್ತಿ ತಮ್ಮ ಕುಟುಂಬ ನಿರ್ವಹಣೆಗಾಗಿ ಹೈನುಗಾರಿಕೆ ಮಾಡಿಕೊಂಡು ಸ್ವತಃ ತಾವೇ ಡೈರಿಗಳಿಗೆ ಹಾಲು ಹಾಕಿ ಬರುತ್ತಾರೆ. ವಿಪರ್ಯಾಸವೆಂದರೆ ಇವರಿಬ್ಬರೂ ಕೇರಳಾದ ಸಿಪಿಐಎಂ ಪಕ್ಷದ ಶಾಸಕರು ನೋಡಿ.
ಆಡಿ, ಬೆಂಜ್ ಕಾರುಗಳಲ್ಲಿ ಸುತ್ತಾಡುವ ರಾಜ್ಯಸಭಾ ಚುನಾವಣೆಗೆ ಮತಹಾಕಲು ಕೋಟಿಗಟ್ಟಲೇ ಹಣ ಹೊಡೆಯುವ ಈ ಕಾಲದ ರಾಜಕಾರಣಿಗಳಲ್ಲಿ ಇಂತಹ ಸರಳ ಜೀವಿಗಳು ನೀವು ನೋಡಿದ್ದೀರಾ.? ತಮಗೆ ಸರ್ಕಾರದಿಂದ ವೇತನ ನೀಡಿದರೂ ಅದನ್ನು ತಮ್ಮ ಪಕ್ಷಕ್ಕೆ ನೀಡುವ ಇಂತಹ ನಾಯಕರು ಇಂದಿಗೂ ಇದ್ದಾರೆ ಎಂಬುದು ಸೋಜಿಗವಾದರೂ, ಕೆಲವರಿಗೆ ಇದು ನಂಬಲೂ ಅಸಾಧ್ಯವಾಬಹುದು. ಆದರೆ ವಾಸ್ತವದಲ್ಲಿ ಇದೇ ಸತ್ಯ.

POPULAR  STORIES :

ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video

ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!

ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!

ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ

ಇವಳ ಅಂದವೇ ಈಕೆಗೆ ಶಾಪವಾದಾಗ !!!

ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.

ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...