ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಇಬ್ಬರು ಪುರುಷರು ಯುವತಿ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಘಟನೆ ನಡೆದಿರೋದು ಗ್ರೇಟರ್ ನೋಯ್ಡಾದಲ್ಲಿ. ಇದರ ವೀಡಿಯೋ ಜನವರಿ 30ರಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಯುವತಿ ಅಸಭ್ಯ ವರ್ತನೆ ತೋರಿಸಿದ್ದಕ್ಕೆ ಥಳಿಸಿದ್ದಾಗಿ ಆರೋಪಿಗಳು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
ಯುವತಿ ಇಬ್ಬರು ಪುರುಷರ ಜೊತೆ ಕಾಣಿಸಿಕೊಂಡು ಅಸಭ್ಯ ವರ್ತನೆ ತೋರಿದ್ದಳು ಅನ್ನೋದು ನೈತಿಕ ಪೊಲೀಸ್ ಗಿರಿ ಮೆರೆದವರ ಆರೋಪ.
ಆರೋಪಿಗಳು ಸ್ಥಳಿಯರು. ಯುವತಿ ಮತ್ತು ಇನ್ನಿಬ್ಬರು ವ್ಯಕ್ತಿಗಳನ್ನು ನಿಂದಿಸಿ ಬೆದರಿಕೆ ಹಾಕುತ್ತಿರೋದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ನಿಮ್ಮ ದುರ್ವತನೆ ಬಯಲು ಮಾಡ್ತೀವಿ ಎಂದಿದ್ದಾರಲ್ಲದೆ ನಿರ್ಜನ ಪ್ರದೇಶದಲ್ಲಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.