Gruha Lakshmi: ಗೃಹಲಕ್ಷ್ಮಿ ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ- ಸೊಸೆ!
ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿಯಿಂದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ಹಣವನ್ನು ನೀಡಲಾಗುತ್ತಿದೆ. ಇದರಿಂದ ಹಲವಾರು ಮಹಿಳೆಯರಿಗೆ ಅನುಕೂಲವಾಗಿರುವ ಬಗ್ಗೆ ಹಲವು ಉದಾಹರಣೆಗಳು ಇವೆ. ಇದೀಗ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿ ಯಶಸ್ಸು ಕಂಡಿದ್ದಾರೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಅತ್ತೆ ಮಾಬುಬಿ ಹಾಗೂ ಸೊಸೆ ರೋಷನ್ ಬೇಗಂ ಸೇರಿ ಬೋರ್‌ವೆಲ್ ಕೊರೆಸಿದ್ದಾರೆ. ಇನ್ನು ಬೋರ್‌ವೆಲ್ ಕೊರೆಸಿದ ನಂತರ ಉತ್ತಮ ನೀರು ಕೂಡ ಸಿಕ್ಕಿದೆ. ಇದರಿಂದ ಗೃಹಲಕ್ಷ್ಮಿ ಈ ಕುಟುಂಬ ಧನ್ಯವಾದಗಳನ್ನು ಅರ್ಪಿಸಿ, ಸಂತಸ ವ್ಯಕ್ತಪಡಿಸಿದ್ದಾರೆ
ಇನ್ನು ಅತ್ತೆ ಹಾಗೂ ಸೊಸೆ ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಬಂದಿದ್ದ 44000 ರೂಪಾಯಿ ಹಣ ಕೂಡಿಟ್ಟಿದ್ದರು ಎನ್ನಲಾಗಿದೆ. ಈ ಹಣವನ್ನು ಅವರು ಕೊಳವೆ ಬಾವಿ ಕೊರೆಸಲು ನೀಡಿದ್ದರು. ಒಟ್ಟಾರೆ ಬೋರ್‌ವೆಲ್ ಕೊರೆಸಲು 60000 ರೂಪಾಯಿವರೆಗೆ ಖರ್ಚಾಗಿದೆ. ಇದಕ್ಕೆ ಪ್ರಧಾನವಾಗಿ ಗೃಹಲಕ್ಷ್ಮಿ ಹಣವೇ ಬಳಕೆಯಾಗಿದ್ದು, ಬಾಕಿ ಹಣವನ್ನು ಪುತ್ರ ನೀಡಿರುವುದಾಗಿ ತಿಳಿಸಿದ್ದಾರೆ.