ಜೆಡಿಎಸ್ನಲ್ಲೇ ಉಳಿದ ಬಳಿಕ ರಾಜಕೀಯ ವಿರೋಧಿ ತವರಿನಲ್ಲಿ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಅಬ್ಬರಿಸುತ್ತಿದ್ದಾರೆ. ಬಹಿರಂಗವಾಗಿ ಸಿಡಿದೆದ್ದಿದ್ದ ಮಾವಿನಹಳ್ಳಿ ಸಿದ್ದೇಗೌಡ ತವರಿನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಾದೇಗೌಡ ತವರು ಕ್ಷೇತ್ರ ಯರಗನಹಳ್ಳಿಯಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿದ್ದಾರೆ.
ಮಾವಿನಹಳ್ಳಿ ಗ್ರಾಮಸ್ಥರ ರೀತಿ ಜಿಟಿಡಿಗೆ ಬಹೃತ್ ಸೇಬಿನ ಹಾರ ಹಾಕಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಬಹಿರಂಗವಾಗಿ ಸಮರ ಸಾರಿದ್ದ ರಾಜಕೀಯ ವಿರೋಧಿಗಳ ಕ್ಷೇತ್ರದಲ್ಲೇ ಮರಿ ದೇವೇಗೌಡ ಶಕ್ತಿ ಪ್ರದರ್ಶಿಸಿದ್ದಾರೆ.