ರಾಜ್ ನ್ಯೂಸ್ ಸಂಪಾದಕರಾದ ಹಮೀದ್ ಪಾಳ್ಯ ಅವರಿಗೆ ಗೌರವ ಡಾಕ್ಟರೇಟ್..
ಕನ್ನಡ ಟೆಲಿವಿಷನ್ ಮಾಧ್ಯಮದಲ್ಲಿ ನ್ಯೂಸ್ ಚಾನಲ್ ಗಳು ತಮ್ಮದೇ ಸ್ಥಾನವನ್ನ ಪಡೆದುಕೊಂಡಿವೆ.. ಈಗ ಸದ್ಯ ಹಲವು ನ್ಯೂಸ್ ಚಾನೆಲ್ ಗಳು ನಮ್ಮ ಮಧ್ಯೆ ಇವೆ.. ಇವುಗಳಲ್ಲಿ ನೂರಾರು ಜನ ನಿರೂಪಕರು ಬಂದು ಹೋಗಿದ್ದಾರೆ, ಬಂದು ನೆಲೆಸುವ ಪ್ರಯತ್ನದಲ್ಲು ಇದ್ದಾರೆ.. ಆದರೆ ಜನರ ಮನಸಿನಲ್ಲಿ ಉಳಿದುಕೊಂಡವರು ಕೆಲವೇ ಕೆಲವು ಮಂದಿಯಷ್ಟೆ.. ಅವರಲ್ಲಿ ಹಮೀದ್ ಪಾಳ್ಯ ಅವರು ಕೂಡ ಒಬ್ಬರು…
ಕಳೆದ ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲೇ ತಮ್ಮ ಕೃಷಿ ನಡೆಸಿರುವ ಹಮೀದ್ ಪಾಳ್ಯ ಅವರ ಸಾಧನೆಗೆ ‘ಯೋಗ ಸಂಸ್ಕೃತಂ ಯುನಿವರ್ಸಿಟಿ ಫ್ಲೋರಿಡಾ ಯುಎಸ್ಎ‘ ವತಿಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ..

ಸದ್ಯ ರಾಜ್ ನ್ಯೂಸ್ ಸಂಪಾದಕರಾಗಿರುವ ಅಮೀದ್ ಪಾಳ್ಯ ಅವರು, ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದವರು.. ಈ ಟಿವಿ ವಾಹಿನಿಯ ಸುದ್ದಿ ವಿಭಾಗದಲ್ಲಿ 6 ವರ್ಷ, ಟಿವಿ9 ನಲ್ಲಿ 5 ವರ್ಷ, ನಂತರ ಸುವರ್ಣ ವಾಹಿನಿಯಲ್ಲಿ 3 ವರ್ಷ ಕೆಲಸ ಮಾಡಿದ್ರು.. ಆನಂತರ ರಾಜ್ ನ್ಯೂಸ್ ಕನ್ನಡ ವಾಹಿನಿಯ ಸಂಪಾದಕರಾಗಿ ಸೇರಿ ಅಲ್ಲೆ ಕಾರ್ಯ ನಿರ್ವಹಿಸುತ್ತಿದ್ದಾರೆ..

ರಾಜಕೀಯ ವಿಶ್ಲೇಷಣೆ ಸೇರಿದಂತೆ, ಬಿಗ್ ಫೈಟ್, ಟಾರ್ಗೆಟ್, “ಅಂಡರ್ ವರ್ಲ್ಡ್ ಫ್ಲ್ಯಾಷ್ ಬ್ಯಾಕ್” ನಂತಹ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಮನೆಮಾತಾದ ಹಮೀದ್ ಪಾಳ್ಯ ಅವರಿಗೆ ಈ ಹಿಂದೆಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡಮಿ ಪ್ರಶಸ್ತಿ ಕೂಡ ಲಭಿಸಿದ್ದು, ಇಂದು ಡಾಕ್ಟರೇಟ್ ನಂತರ ಉನ್ನತ ಪ್ರಶಸ್ತಿಯು ಲಭಿಸಿದ್ದು, ದಿ ನ್ಯೂ ಇಂಡಿಯನ್ ಟೈಮ್ಸ್ ವತಿಯಿಂದ ಹಮೀದ್ ಪಾಳ್ಯ ಅವರಿಗೆ ಶುಭಾಶಯಗಳನ್ನ ತಿಳಿಸುತ್ತ, ನಿಮ್ಮ ಸೇವೆ ಕರುನಾಡಿನ ಪತ್ರಿಕೋದ್ಯಮಕ್ಕೆ ಮತ್ತಷ್ಟು ಸಿಗುವಂತಾಗಲಿ ಎಂದು ಹಾರೈಸುತ್ತೇವೆ..







