ಸರಿಗಮಪ ಸೀಸನ್ 14 ರ ಸ್ಪರ್ಧಿ ನೇಹಾಗೆ ಹಂಸಲೇಖ ದಂಪತಿ ಚಿನ್ನದ ಉಂಗುರ ಉಡುಗೊರೆ ನೀಡಿದ್ದಾರೆ.
ಈ ಬಾರಿಯ ಸರಿಗಮಪ ಸ್ಪರ್ಧಿಗಳಲ್ಲಿ ಅತಿ ಸಣ್ಣ ವಯಸ್ಸಿನ ಸ್ಪರ್ಧಿ ನೇಹಾ. ಬೇಲೂರಿನ ಈಕೆ ಕನ್ನಡಿಗರ ಮನಗೆದ್ದಿದ್ದಾಳೆ.

ನೇಹಾಳ ಹಾಡನ್ನು ಹಂಸಲೇಖ ಅವರ ಪತ್ನಿ ಲತಾ ಅವರು ತುಂಬಾ ಇಷ್ಟಪಟ್ಟಿದ್ದರು. ನೇಹಾಳ ಹುಟ್ಟುಹಬ್ಬ ಏಪ್ರಿಲ್ 27 ಕ್ಕೆ ಇತ್ತಾದರೂ ನಿನ್ನೆ ಆಚರಿಸಲಾಯಿತು. ಈ ವೇಳೆ ಹಂಸಲೇಖ ಮತ್ತು ಅವರ ಪತ್ನಿ ಲತಾ ಅವರು ನೇಹಾಳ ಪುಟ್ಟ ಬೆರಳಿಗೆ ಉಂಗುರ ತೊಡಿಸಿ ಸಿಹಿ ಮುತ್ತು ನೀಡಿದರು.







