ಯುವ ಕರ್ನಾಟಕದ ಹೆಮ್ಮೆ ವಿಜಯ ಕರ್ನಾಟಕ ದಿನಪತ್ರಿಕೆಯ ಸೀನಿಯರ್ ಅಸಿಟೆಂಟ್ ಎಡಿಟರ್ ಆಗಿ ಹರಿಪ್ರಕಾಶ್ ಕೋಣೆಮನೆ ಅವರು ಅಧಿಕಾರವಹಿಸಿಕೊಂಡಿದ್ದಾರೆ.
ವಿಜಯವಾಣಿ ದಿನಪತ್ರಿಕೆಯ ಮಾಜಿ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರೀಗ ವಿಜಯ ಕರ್ನಾಟಕ ಬಳಗ ಸೇರಿದ್ದು ಹಿರಿಯ ಸಹಾಯಕ ಸಂಪಾದಕರಾಗಿದ್ದಾರೆ.
ಕಳೆದ ನವೆಂಬರ್ ನಲ್ಲಿ ವಿಜಯವಾಣಿ ದಿನಪತ್ರಿಕೆಯನ್ನು ಬಿಟ್ಟು ಹೊರಬಂದಿದ್ದ ಹರಿಪ್ರಕಾಶ್ ಕೋಣೆಮನೆಯವರು ವಿಧಾನಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯಲ್ಲಾಪುರ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಅಂತೆಕಂತೆ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಕೋಣೆಮನೆಯವರು ಪತ್ರಿಕೋದ್ಯಮ ಬಿಟ್ಟು ರಾಜಕೀಯ ಅಖಾಡಕ್ಕೆ ಇಳಿಯುವ ಯೋಚನೆ ಮಾಡಿರಲಿಲ್ಲ.
ಆರೇಳು ತಿಂಗಳ ಬಳಿಕ ಇವರೀಗ ಮತ್ತೆ ವಾಪಸ್ಸಾಗಿದ್ದಾರೆ. ಪ್ರತಿಷ್ಠಿತ ಟೈಮ್ಸ್ ಗ್ರೂಪ್ ನ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಮುಖ ಜವಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾಗಿರುವ ತಿಮ್ಮಪ್ಪ ಭಟ್ ಅವರು ಸದ್ಯದಲ್ಲೇ ನಿವೃತ್ತಿ ಹೊಂದಲಿದ್ದು , ಬಳಿಕ ಕೋಣೆಮನೆಯವರು ಪ್ರಧಾನ ಸಂಪಾದಕರಾಗಿ ಅಧಿಕಾರವಹಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
ಸರಳ, ಸಹೃದಯಿ, ಸಜ್ಜನ ,ಮೃದು ಭಾಷಿ ಸಂಪಾದಕರಾಗಿರುವ ತಿಮ್ಮಪ್ಪ ಭಟ್ ಅವರು ಹಿಂದೆ ವಿಜಯವಾಣಿ ಪತ್ರಿಕೆಯ ಸಂಪಾದಕರಾಗಿದ್ದರು. ನಂತರ ವಿಜಯ ಕರ್ನಾಟಕದ ಸಂಪಾದಕರಾದರು. ತಿಮ್ಮಪ್ಪ ಭಟ್ ಅವರು ವಿಜಯವಾಣಿ ಬಿಟ್ಟಾಗ ಅದರ ಸಂಪಾದಕರಾಗಿದ್ದು ಇದೇ ಹರಿಪ್ರಕಾಶ್ ಕೋಣೆಮನೆ. ಶೀಘ್ರದಲ್ಲೇ ತಿಮ್ಮಪ್ಪ ಭಟ್ ಅವರು ನಿವೃತ್ತರಾದಲ್ಲಿ ಕೋಣೆಮನೆಯವರು ಸಂಪಾದಕರಾಗುವರು ಎನ್ನಲಾಗುತ್ತಿದೆ.