ಅವರಿಬ್ಬರ ಪ್ರೀತಿಗೆ ಅವಳ ಪೋಷಕರ ವಿರೋಧವಿತ್ತು. ಅವಳನ್ನು ಹಾಸನದ ಮಹಿಳಾ ರಕ್ಷಣಾ ಕೇಂದ್ರದಲ್ಲಿಟ್ಟಿದ್ದರು. ಆಕೆ ಅಲ್ಲಿಂದಲೇ ಎಸ್ಕೇಪ್ ಆಗಿ ಪ್ರಿಯಕರನ ಜೊತೆ ಮದ್ವೆ ಆಗಿ, ಇದೀಗ ರಕ್ಷಣೆಗೆ ಮನವಿ ಮಾಡಿದ್ದಾಳೆ.
ಆಲೂರು ತಾಲೂಕಿನ ಕರಡೀ ಬೈಲು ಗ್ರಾಮದಲ್ಲಿ ರ ನವೆಂಬರ್ 13 ರಂದು ಮಹಮ್ಮದ್ ಅಲಿ ಎಂಬುವವರ ಪುತ್ರಿ ರಂಸೀನಾ ರಾತ್ರೋರಾತ್ರಿ ಕಾಣೆ ಆಗಿದ್ದಳು. ಆಕೆಯ ಪ್ರಿಯಕರ ರಘು ಆಕೆಯನ್ನು ಕಿಡ್ನಾಪ್ ಮಾಡಿದ್ದಾನೆ ಅಂತ ಮಹಮ್ಮದ್ ಅಲಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಪತ್ತೆಯಾದ ರಂಸೀನಾ ಹಾಸನಸ ಬಾಲ ಭವನದಲ್ಲಿ ಆಶ್ರಯ ಪಡೆದಿದ್ದಳು.
ಇದೇ ತಿಂಗಳು (ಸೆಪ್ಟೆಂಬರ್) 25 ರಂದು ರಘು ಬಾಲ ಭವನದ ಬಳಿ ಬಂದು ರಂಸೀನಾಳನ್ನು ಕಳುಹಿಸಿ ಕೊಡುವಂತೆ ಪಟ್ಟು ಹಿಡಿದಿದ್ದ. ವಿಷಯ ತಿಳಿದ ಮೇಲೆ ರಂಸೀನಾಳ ಪೋಷಕರು ಹಾಸನದ ಕೆ.ಆರ್ ಪುರಂನ ಶ್ವೇತಾ ಉಜ್ವಲ ಕೇಂದ್ರದಲ್ಲಿರಿಸಿದ್ದರು. ನಿನ್ನೆ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ರಂಸೀನಾ ರಘುವಿನ ಜೊತೆ ಮದುವೆ ಆಗಿದ್ದಾಳೆ. ಅರಸೀಕೆರೆ ರಸ್ತೆಯ ದೇವಾಲಯದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.
ನಾವು ಎರಡು ವರ್ಷದಿಂದ ಪ್ರೀತಿಸುತ್ತಿದ್ದೇವೆ. ನಮ್ಮ ಪ್ರೀತಿಗೆ ಮನೆಯವರ ವಿರೋಧವಿತ್ತು. ಇದೀಗ ನಂಗೆ 18 ವರ್ಷವಾಗಿದೆ. ರಘುನ ಮದ್ವೆ ಆಗಿದ್ದೇನೆ. ನಾವು ಚೆನ್ನಾಗಿ ಇರ್ತೀವಿ. ಆದರೆ, ಪ್ರಾಣ ಭಯ ಇದೆ ರಕ್ಷಣೆ ಬೇಕು ಅಂತ ರಂಸೀನಾ ಮನವಿ ಮಾಡಿದ್ದಾಳೆ.