ಪತ್ನಿಯ ಪ್ರಿಯಕರ ಮತ್ತು ಇತರರು ನೀಡಿದ ಕಿರುಕುಳದಿಂದ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಶಾಂತಿಗ್ರಾಮದಲ್ಲಿ ನಡೆದಿದೆ.
ಹರೀಶ್ ಆತ್ಮಹತ್ಯೆಗೆ ಯತ್ನಿಸಿದವರು. ಕಳೆನಾಶಕ ಸೇವಿಸಿರುವ ಹರೀಶ್ ಸ್ಥಿತಿ ಚಿಂತಾಜನಕವಾಗಿದೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಮಕ್ಕಳಿದ್ದಾರೆ. ಆದರೂ ಈತನ ಪತ್ನಿ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಕೊಂಡಿದ್ದಾಳೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹರೀಶ್ ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಪತ್ನಿಯ ಪ್ರಿಯಕರ ಮತ್ತು ಕೆಲವು ವಕೀಲರು ವಿಚ್ಛೇದನ ನೀಡುವಂತೆ, ಇಲ್ಲದಿದ್ದರೆ ಸುಳ್ಳು ಕೇಸು ದಾಖಲಿಸುವುದಾಗಿ ಹರೀಶ್ ಗೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಹರೀಶ್ 5 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ವರ್ಷದ ಹಿಂದೆ ಚಾಲಕನಾಗಿ ಸೇರಿಕೊಂಡ ಮಲ್ಲಿಕಾರ್ಜುನ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಹೇಳಲಾಗ್ತಿದೆ.
ಮಲ್ಲಿಕಾರ್ಜುನ್ ಆಕೆಯೊಡನೆ ನಡೆಸಿದ ಸಂಭಾಷಣೆಯನ್ನು ಹರೀಶ್ ಗೆ ಕಳುಹಿಸಿ ಡೈವೋರ್ಸ್ ಗೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೆ ಧಮ್ಕಿ ಸಹ ಹಾಕಿದ್ದಾನೆ ಎಂಬ ಆರೋಪವಿದೆ.
ನಿನ್ನ ಪತ್ನಿಗೆ ಡೈವೋರ್ಸ್ ಕೊಡು, ನಾನು ಮದ್ವೆ ಆಗುತ್ತೇನೆ. ನೀನು ಅಡ್ಡ ಬಂದರೆ ಸುಳ್ಳು ಕೇಸ್ ದಾಖಲು ಮಾಡ್ತೀನಿ. ನಿನ್ನ ಪತ್ನಿಗೆ ಹುಟ್ಟುವ ಮೂರನೇ ಮಗುವಿಗೆ ನಾನೇ ಅಪ್ಪ ಎಂದು ಮಲ್ಲಿಕಾರ್ಜುನ್ ಹರೀಶ್ ಗೆ ಮನನೋಯಿಸುವ ಮಾತುಗಳನ್ನಾಡಿದ್ದಾನೆ ಎನ್ನಲಾಗಿದೆ.