ಹಾವೇರಿ ವಿದ್ಯಾರ್ಥಿನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಆಕೆಯನ್ನು ಕೊಂದು ಶವದ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂಬ ಆಘಾತಕಾರಿ ಅಂಶ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಣ್ಣೂರು ಗ್ರಾಮದ ನಿವಾಸಿ ರೇಣುಕಾ ಪಾಟೀಲ (17) ಹೆಣವಾಗಿ ಸಿಕ್ಕ ನತದೃಷ್ಟೆ. ಹಾವೇರಿಯ ಜಿಎಚ್ ಕಾಲೇಜಿನಲ್ಲಿ ಈಕೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡ್ತಿದ್ದಳು.ಆಗಸ್ಟ್ 6ರಂದು ಎಂದಿನಂತೆ ಕಾಲೇಜಿಗೆ ಹೋದ ಇವಳು ಸಂಜೆಯಾದರೂ ಮನೆಗೆ ಬರದಿದ್ದರಿಂದ ಸಹಜ ಆತಂಕಕ್ಕೆ ಒಳಗಾದ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಬಳಿಕ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೇಣುಕಾಗೆ ಹುಡುಕಾಟ ನಡೆಸಿದ್ದರು ವರದಹಳ್ಳಿ ಗ್ರಾಮದ ಸೇತುವೆ ಬಳಿ ಗುರುವಾರ ರೇಣುಕಾ ಶವ ಅರೆ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಗ್ರಾಮದ ಸಹೋದರ ಸಂಬಂಧಿಯೇ ಈ ಕೃತ್ಯ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ. ಶಶಿ ಅಲಿಯಾಸ್ ಮಂಜನಗೌಡ ಪಾಟೀಲ(28) ಆರೋಪಿ.
ರೇಣುಕಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ವಿರೋಧ ವ್ಯಕ್ತಪಡಿಸಿದಾಗ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಶವದ ಮೇಲೆ ಅತ್ಯಾಚಾರ ಎಸಗಿದ್ದಾನೆ…!
ಶವದ ಮೇಲೆ ಕಾಮತೃಷೆ ತೀರಿಸಿಕೊಂಡ ನಂತರ ವರದ ಹಳ್ಳಿ ಸೇತುವೆ ಬಳಿ ಸುಟ್ಟು ಹಾಕಲು ಯತ್ನಿಸಿದ್ದಾನೆ. ಅರ್ಧಬಂರ್ಧ ಸುಟ್ಟು ಅಲ್ಲಿಂದ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.