ಈ ಬಾರಿ JDSಗೆ 30-40 ಸ್ಥಾನ ಬಂದ್ರೆ ನಾನು ಅಧಿಕಾರದಿಂದ ದೂರವಿರುತ್ತೇನೆ. ನಮ್ಮಲ್ಲೇ ಒಬ್ಬರನ್ನ ಆ ಸ್ಥಾನದಲ್ಲಿ ಕೂರಿಸಿ ನಾನು ಮಾರ್ಗದರ್ಶನ ಮಾಡುತ್ತೇನೆ. ಇದೇ ನನ್ನ ನಿರ್ಧಾರ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.
ಮೈಸೂರಿನಲ್ಲಿ ಮಾತ್ನಾಡಿದ ಅವರು, 30-40 ಸ್ಥಾನ ಬಂದ್ರೆ ನಾನು ಸಿಎಂ ಆಗ್ತೇನೆಂದು ನಮ್ಮವರು ಅಂದುಕೊಳ್ಳೋದು ಬೇಡ. ಈ ಬಾರಿ ಬಹುಮತ ಕೊಡಿ, ಪಂಚರತ್ನದ 5 ಯೋಜನೆಗಳನ್ನು 5 ವರ್ಷಗಳಲ್ಲಿ ಅನುಷ್ಠಾನಗೊಳಿಸುತ್ತೇನೆ. ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಿಂತು ಈ ಮಾತನ್ನು ಹೇಳುತ್ತಿದ್ದೇನೆ. ಕಾರ್ಯಕ್ರಮ ಅನುಷ್ಠಾನ ಮಾಡದಿದ್ರೆ ನಾನು ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಘೋಷಿಸಿದ್ರು. ಸಮ್ಮಿಶ್ರ ಸರ್ಕಾರದಿಂದ ಪಂಚರತ್ನ ಯೋಜನೆ ಅನುಷ್ಠಾನ ಸಾಧ್ಯವಾಗುವುದಿಲ್ಲ. ಸಂಪೂರ್ಣ ಬಹುಮತದಿಂದ ಮಾತ್ರ ಪಂಚರತ್ನ ಯೋಜನೆ ಅನುಷ್ಠಾನ ಸಾಧ್ಯ. ಈ ಕಾರಣ ಸಮ್ಮಿಶ್ರ ಸರ್ಕಾರವಾದ್ರೆ ನಾನು ಸಿಎಂ ಆಗಲ್ಲ ಎಂದು ಹೇಳುತ್ತಿದ್ದೇನೆ ಎಂದರು. AICCಗೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕನ್ನಡಿಗರೊಬ್ಬರು AICC ಅಧ್ಯಕ್ಷರಾದರು ಎಂಬ ಸಂತೋಷವಿದೆ. ಖರ್ಗೆ ಅವರಿಗೆ ಕೆಲಸ ಮಾಡಲು ಎಷ್ಟು ಸ್ವಾತಂತ್ರ್ಯವಿದೆ ಎಂಬುದು ಬಹಳ ಮುಖ್ಯ. ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿಕೆಶಿರ 2 ಪವರ್ ಸೆಂಟರ್ಗಳಿತ್ತು. ಖರ್ಗೆ ಅಧ್ಯಕ್ಷರಾಗುವ ಮೂಲಕ 3ನೇ ಪವರ್ ಸೆಂಟರ್ ಸೃಷ್ಟಿಯಾಗಿದೆ ಅಷ್ಟೇ ಎಂದು ತಿಳಿಸಿದ್ದಾರ .