ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ವಾಮಿ ಅವರ ಮನೆ ಮಾರಾಟಕ್ಕಿದೆ. ಕುಮಾರ ಸ್ವಾಮಿ ಅವರ ಪಾಲಿನ ಅದೃಷ್ಟದ ಮನೆಯಂದೇ ಬಿಂಬಿಸಲ್ಪಟ್ಟಿರುವ ಹುಬ್ಬಳ್ಳಿಯ ಬೈರಿದೇವರಕೊಪ್ಪ ಮನೆ ಮತ್ತು ಎದುರಿಗಿರುವ ಕಚೇರಿಯನ್ನು ಮಾಲೀಕರು ಮಾರಾಟ ಮಾಡಲಿದ್ದಾರೆ.
ಪತ್ರಿಕಾ ಜಾಹಿರಾತನ್ನು ಮಾಲೀಕರು ನೀಡಿದ್ದಾರೆ. ಅದನ್ನು ಮುಖ್ಯಮಂತ್ರಿಗಳೇ ಖರೀದಿಸುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅನ್ನು ಸಂಘಟಿಸುವ ಉದ್ದೇಶದಿಂದ ಕುಮಾರ ಸ್ವಾಮಿ ಅವರು 2015ರಲ್ಲಿ ಹುಬ್ಬಳ್ಳಿಯಲ್ಲಿ ಮನೆ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಅವರಿಗೆ ಯಾವ ಮನೆಯೂ ಹಿಡಿಸಿರಲಿಲ್ಲ.ನಂತರ ಬೈರಿದೇವರಕೊಪ್ಪದ ಮಾಯ್ಕರ ಕಾಲನಿಯಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಸಹೋದರ ಸುರೇಶ ರಾಯರೆಡ್ಡಿ ಅವರ ಮನೆ ಇಷ್ಟವಾಗಿತ್ತು. 10 ಸಾವಿರ ಚದುರ ಅಡಿ ಯ 4ಬೆಡ್ ರೂಂ ,ಪೂಜಾ ಕೋಣೆ ಜಿಮ್ ಮೊದಲಾದ ಸಕಲ ಸೌಕರ್ಯ ಇರುವ ಈ ಮನೆಯನ್ನು ಬಾಡಿಗೆಗೆ ಪಡೆಯಲು ಒಪ್ಪಿದ್ದರು. ಸುರೇಶ್ ಅವರು ಬಾಡಿಗೆ ಸ್ವೀಕರಿಸಲು ನಿರಾಕರಿಸಿದ್ದರು.






