ಆಯುರ್ವೇದದ ಪ್ರಕಾರ ದೇಹಕ್ಕೆ ಭಾದಿಸುವಂತಹ ಕಫ, ಪಿತ್ತ ಹಾಗೂ ವಾತ ದೋಷವು ನಾವು ಯಾವುದರಲ್ಲಿ ಆಹಾರ ಸೇವಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿಸಿರುವುದು. ಈ ಮೂರು ದೋಷಗಳು ನಮ್ಮ ದೇಹದಲ್ಲಿ ಪ್ರಮುಖ ಪಾತ್ರ ವಹಿಸುವುದು. ಯಾವುದೇ ಒಂದರಲ್ಲೂ ಅಸಮತೋಲವಾದರೆ ಅದರಿಂದ ಆರೋಗ್ಯದ ಮೇಲೆ ಪರಿಣಾಮವಾಗುವುದು. ಈ ಲೇಖನದಲ್ಲಿ ವಿವಿಧ ಲೋಹಗಳ ತಟ್ಟೆ ಅಥವಾ ಲೋಟಗಳಿಂದ ನಮಗೆ ಯಾವ ರೀತಿಯ ಲಾಭವಾಗಲಿದೆ ಎಂದು ತಿಳಿಯಲಿದ್ದೇವೆ.
ತಾಮ್ರ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯಲು ಸಂಗ್ರಹಿಸಿಡುವುದನ್ನು ನಾವು ನೋಡಿದ್ದೇವೆ. ಹೀಗೆ ಮಾಡುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಲಾಭಗಳು. ತಾಮ್ರವು ಬ್ಯಾಕ್ಟೀರಿಯಾ ವಿರೋಧಿ ಲೋಹವಾಗಿದೆ. 2012ರಲ್ಲಿ ಜರ್ನಲ್ ಆಫ್ ಹೆಲ್ತ್, ಪೊಪ್ಯುಲೇಷನ್ ಆ್ಯಂಡ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ, ಸುಮಾರು 16 ಗಂಟೆಗಳ ತಾಮ್ರದ ಪಾತ್ರೆಯಲ್ಲಿ ಕಲುಷಿತ ನೀರನ್ನು ಸಂಗ್ರಹಿಸಿಟ್ಟರೆ ಆಗ ಎಲ್ಲಾ ಹಾನಿಕಾರ ಸೂಕ್ಷ್ಮಜೀವಿಗಳು ಸಾಯುವುದು ಮತ್ತು ನೀರು ಶುದ್ಧವಾಗುವುದು.
ರಕ್ತವನ್ನು ನಿರ್ವಿಷಗೊಳಿಸುವುದು. ·ಜೀರ್ಣಕ್ರಿಯೆ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುವುದು. ·ತೂಕ ಇಳಿಸಲು ಸಹಕಾರಿ. ·ಆ್ಯಂಟಿಆಕ್ಸಿಡೆಂಟ್ ಒದಗಿಸುವುದು. ·ಕ್ಯಾನ್ಸರ್ ವಿರುದ್ಧ ಹೋರಾಡುವುದು. ·ಮೆದುಳಿನ ಕಾರ್ಯ ಉತ್ತೇಜಿಸುವುದು.