ಪ್ರತಿದಿನ ಅರಿಶಿನ ಹಾಲು ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?

Date:

ಪ್ರತಿದಿನ ಅರಿಶಿನ ಹಾಲು ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?

ಅರಿಶಿನವನ್ನು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಔಷಧವೆಂದು ಗುರುತಿಸಲಾಗಿದೆ. ಅರಿಶಿನದ ಔಷಧೀಯ ಗುಣಗಳನ್ನು ವಿವಿಧ ಚಿಕಿತ್ಸೆಗಳಲ್ಲಿ ರಾಮಬಾಣವಾಗಿ ಬಳಸಲಾಗುತ್ತದೆ. ಅದಕ್ಕಾಗಿಯೇ ಅನೇಕರು ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.
ಹೃದಯಕ್ಕೆ ಒಳ್ಳೆಯದು: ಹೆಲ್ತ್‌ಲೈನ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಹಾಲಿನ ಜೊತೆಗೆ ಅರಿಶಿನವನ್ನು ಬೆರೆಸಿ ಕುಡಿಯುವುದು ಹೃದಯಕ್ಕೆ ತುಂಬಾ ಒಳ್ಳೆಯದು. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೇ ದೇಹವನ್ನು ಸದೃಢಗೊಳಿಸುತ್ತದೆ.
ಕೀಲು ನೋವುಗಳನ್ನು ಕಡಿಮೆ ಮಾಡುತ್ತದೆ: ಅರಿಶಿನ ಹಾಲು ಕುಡಿಯುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ. ಅರಿಶಿನವು ಕೀಲು ನೋವನ್ನು ಕಡಿಮೆ ಮಾಡುವ ಅನೇಕ ಗುಣಗಳನ್ನು ಹೊಂದಿದೆ.
ಮೆದುಳನ್ನು ಬಲಪಡಿಸುತ್ತೆ: ಅರಿಶಿನದ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಮೆದುಳು ಬಲಗೊಳ್ಳುತ್ತದೆ. ಇದು ನೆನಪಿನ ಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮೆದುಳು ಫಿಟ್ ಮತ್ತು ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ಪೋಷಕಾಂಶಗಳು ಮೆದುಳಿಗೆ ತುಂಬಾ ಒಳ್ಳೆಯದು.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೂಲ: ಅರಿಶಿನ ಹಾಲು ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಒದಗಿಸುತ್ತದೆ. ಮೂಳೆಗಳನ್ನು ಬಲವಾಗಿಡಲು ಇದು ತುಂಬಾ ಪ್ರಯೋಜನಕಾರಿ ಆಗಿದೆ. ಇದರ ಸೇವನೆಯು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ರಾತ್ರಿ ಮಲಗುವಾಗ ಇದನ್ನು ಕುಡಿಯುವುದರಿಂದ ಆಯಾಸ ನಿವಾರಣೆಯಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ: ಅರಿಶಿನ ಹಾಲಿನ ನಿಯಮಿತ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅರಿಶಿನವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಅನೇಕ ಗುಣಗಳನ್ನು ಹೊಂದಿದೆ.

Share post:

Subscribe

spot_imgspot_img

Popular

More like this
Related

ಗುತ್ತಿಗೆದಾರರ ಬಾಕಿ- ಸಂಬಂಧಪಟ್ಟ ಸಚಿವರಿಂದ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಗುತ್ತಿಗೆದಾರರ ಬಾಕಿ- ಸಂಬಂಧಪಟ್ಟ ಸಚಿವರಿಂದ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು: ಯಾವುದೇ ಸಂಘಸಂಸ್ಥೆಗಳ...

ಬಿ ಖಾತಾ ಇದ್ದವರಿಗೆ ಹಾಗೂ ಇಲ್ಲದವರಿಗೂ ಎ ಖಾತಾ ವಿತರಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬಿ ಖಾತಾ ಇದ್ದವರಿಗೆ ಹಾಗೂ ಇಲ್ಲದವರಿಗೂ ಎ ಖಾತಾ ವಿತರಣೆ: ಡಿಸಿಎಂ...

ಗ್ರಾಹಕರಿಗೆ ಖುಷಿಯ ಸುದ್ದಿ: ದೀಪಾವಳಿಗೆ ಮುನ್ನ ಚಿನ್ನದ ಬೆಲೆಯಲ್ಲಿ ಇಳಿಕೆ!

ಗ್ರಾಹಕರಿಗೆ ಖುಷಿಯ ಸುದ್ದಿ: ದೀಪಾವಳಿಗೆ ಮುನ್ನ ಚಿನ್ನದ ಬೆಲೆಯಲ್ಲಿ ಇಳಿಕೆ! ಚಿನ್ನದ ಬೆಲೆಯಲ್ಲಿ...

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್...