ಫೆಬ್ರವರಿ 1ರಿಂದ ದ್ವಿಚಕ್ರವಾಹನ ಸವಾರರು , ಹಿಂಬದಿ ಸವಾರರು ಹಾಫ್ ಹೆಲ್ಮೆಟ್ ಧರಿಸುವಂತಿಲ್ಲ ಎಂಬ ಸುದ್ದಿ ಇತ್ತು. ಇದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿತ್ತು. ಇರೋ ಹಾಫ್ ಹೆಲ್ಮೆಟ್ ಬಿಟ್ಟು ಮತ್ತೆ ಹೆಲ್ಮೆಟ್ ಗೆ ದುಡ್ಡು ಹಾಕ್ಬೇಕಲ್ಲ ಅಂತ ತಲೆ ಕೆಡಿಸಿಕೊಂಡಿದ್ರು.
ಈ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ.
ಮೈಸೂರು ನಗರದಲ್ಲಿ ಸಂಚಾರಿ ಪೊಲೀಸರು ಕಾರ್ಯಚರಣೆ ನಡೆಸಿ ಐಎಸ್ ಐ ಮಾರ್ಕ್ ಇಲ್ಲದ ಹೆಲ್ಮೆಟ್ , ಹಾಫ್ ಹೆಲ್ಮೆಟ್ ಗಳನ್ನು ವಶಕ್ಕೆ ಪಡೆದಿದ್ದರು. ಐಎಸ್ ಐ ಮಾರ್ಕ್ ಇರೋ ಹೆಲ್ಮೆಟ್ ಗಳನ್ನೇ ಧರಿಸಬೇಕು. ಹಾಫ್ ಹೆಲ್ಮೆಟ್ ಹಾಕುವಂತಿಲ್ಲ ಅಂತ ಸೂಚಿಸಿದ್ರು.
ಇದು ಗೃಹಸಚಿವ ರಾಮಲಿಂಗ ರೆಡ್ಡಿ ಅವರ ಗಮನಕ್ಕೆ ಬಂದಿದ್ದು, ಅವರು ಮೈಸೂರು ಪೊಲೀಸರ ಕಾರ್ಯವನ್ನು ಶ್ಲಾಘಿಸಿ ಎಲ್ಲಾ ಕಡೆಯೂ ಐಎಸ್ ಐ ಮಾರ್ಕ್ ಇರೋ ಹೆಲ್ಮೆಟ್ ಕಡ್ಡಾಯಕ್ಕೆ ಆದೇಶಿಸಿದ್ರು. ಫೆಬ್ರವರಿ 1ರಿಂದ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತೆ.
ಆದರೆ, ಈ ನಡುವೆ ಹಾಫ್ ಹೆಲ್ಮೆಟ್ ಹಾಕುವಂತಿಲ್ಲ ಎಂಬ ಸುದ್ದಿಯೂ ಹಬ್ಬಿತ್ತು.
ಇದರ ಬಗ್ಗೆ ಸ್ಪಷ್ಟಪಡಿಸಿರೋ ಸಾರಿಗೆ ಇಲಾಖೆ, ಹಾಫ್ ಅಥವಾ ಫುಲ್ ಹೆಲ್ಮೆಟ್ ಎಂಬ ವ್ಯಾಖ್ಯಾನವಿಲ್ಲ. ಐಎಸ್ ಐ ಮಾರ್ಕ್ ಇರಬೇಕಾಗಿರೋದು ಕಡ್ಡಾಯವಷ್ಟೇ ಎಂದು ಸುತ್ತೋಲೆ ಹೊರಡಿಸಿದೆ.