ಒಂದು ದೇಶದ ಶಕ್ತಿ ಅಂದ್ರೆ ಅದು ಆ ದೇಶದ ಪ್ರಧಾನಿ.. ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿಯಾದರೂ ದೇಶವನ್ನು ಆಳುವ ಅಧಿಕಾರ ಇರೋದು ಮಾತ್ರ ಪ್ರಧಾನಿ ಅವರಿಗೆ.. ಒಂದು ದೇಶ ಸಮೃದ್ದಿ ಹೊಂದುತ್ತಿದೆ ಅಂದ್ರೆ ಅದಕ್ಕೆ ಆ ದೇಶದ ಪ್ರಧಾನಿಯೇ ಮುಖ್ಯ ಕಾರಣ. ಅಷ್ಟೇ ಅಲ್ಲ ದೇಶ ಅವಸಾನದ ಅಂಚಿಗೆ ಹೋಗ್ಲಿಕ್ಕು ಅಲ್ಲಿನ ಪ್ರಧಾನಿಯ ಆಳ್ವಿಕೆಯಲ್ಲಿನ ದೋಷಗಳೇ ಕಾರಣ ಅನ್ಬೋದು.. ಹೀಗೆ ದೇಶದ ಟಾಪ್ ಮೋಸ್ಟ್ ಪ್ಲೇಸ್‍ನಲ್ಲಿರೋ ಇವರು ವಾರ್ಷಿಕವಾಗಿ ಎಷ್ಟು ಸಂಬಳ ಪಡೀಬೋದು..? ಈ ಕುತೂಹಲ ನಿಮ್ಗೂ ಇದೀಯಾ..? ಹಾಗಾದ್ರೆ ಇಲ್ಲಿದೆ ನೋಡಿ ಡೀಟೇಲ್ಸ್.. ನಿಮಗೆಲ್ಲಾ ಗೊತ್ತಿರೋ ಹಾಗೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಖತ್ ಪವರ್ ಫೂಲ್ ಮ್ಯಾನ್.. ದೇಶದ ಅಭಿವೃದ್ದಿಯೇ ಅವರ ಪ್ರಮುಖ ಗುರಿ.. ಸ್ವಚ್ ಭಾರತ್, ಮೇಕ್ ಇನ್ ಇಂಡಿಯಾಗಳ ಮೂಲಕ ಭಾರತವನ್ನು ಇತರೆ ಮುಂದುವರೆದ ರಾಷ್ಟ್ರಗಳ ಪಟ್ಟಿಗೆ ಸೇರಿಸಬೇಕೆಂಬ ಹಂಬಲವಿರುವ ಪ್ರಧಾನಿ.. ಇವರು ವಾರ್ಷಿಕವಾಗಿ ಎಷ್ಟು ಸಂಬಳ ಪಡೀತಾರೆ ಅನ್ನೋದು ನಿಮ್ಗೆ ಗೊತ್ತಾ..? ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರು ಪಡೆಯುವ ವೇತನದ ಬಗ್ಗೆ ಏನಾದ್ರೂ ಮಾಹಿತಿ ಇದೀಯಾ..? ವಿಶ್ವದ ದೊಡ್ಡಣ್ಣ ಅಂದ್ಮೇಲೆ ಅವರ ವೇತನವೂ ದೊಡ್ಡದಾಗಿರತ್ತೆ ಅಲ್ವಾ..? 8 ಗಂಟೆಗಳ ಕಾಲ ಕೆಲಸ ಮಾಡೋ ಓರ್ವ ಉನ್ನತ ಹುದ್ದೆಯ ಸರ್ಕಾರಿ ನೌಕರನೇ ಇಂದಿನ ಕಾಲಘಟ್ಟದಲ್ಲಿ ಭಾರೀ ಮೊತ್ತದ ಸಂಬಳವನ್ನೇ ಪಡೆಯುತ್ತಿರುವಾಗ ಇನ್ನು ಇಡೀ ರಾಷ್ಟ್ರವನ್ನೇ ಸಂಭಾಳಿಸುವ ಪ್ರಧಾನಿಗಳ ಸಂಬಳ ಎಷ್ಟಿರಬೇಡ ಅಲ್ವಾ..! ವಿಚಿತ್ರ ಅಂದ್ರೆ ನಮ್ಮ ದೇಶದ ಪ್ರಧಾನಿ ಮೋದಿ ಅವರು ಪಡೆಯುತ್ತಿರೋ ಸಂಬಳ ನೆರೆಯ ರಾಷ್ಟ್ರ ಚೀನಾ ಅಧ್ಯಕ್ಷನಿಗಿಂತ ಹೆಚ್ಚು ರೀ.! ವಿಶ್ವದಲ್ಲೇ ಪವರ್‍ಫುಲ್ ದೇಶ ಎಂದು ಗುರುತಿಸಿಕೊಂಡಿರೋ ಅಮೇರಿಕಾ.. ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೀಡುತ್ತಿರೋ ಸಂಬಳ ಖಾಸಗೀ ಕಂಪನಿಯಲ್ಲಿ ಸಿಇಓ ಆಗಿ ಕಾರ್ಯ ನಿರ್ವಹಿಸುವವನಿಗಿಂತ ಕಡಿಮೆ ಅಂದ್ರೆ ನೀವು ನಂಬ್ತೀರಾ..? ಅದಕ್ಕಿಂತ ಮುಖ್ಯವಾಗಿ ಬರಾಕ್ ಒಬಾಮಾ ಅವರ ಸಂಬಳ ಇಡೀ ವಿಶ್ವದಲ್ಲೇ ಅತೀ ಚಿಕ್ಕ ರಾಷ್ಟ್ರದ ಪ್ರಧಾನಿ ಸಂಬಳಕ್ಕಿಂತ ತುಂಬಾ ಕಡಿಮೆ ನೋಡಿ.. ಭಾರತ ಮತ್ತು ಚೀನಾ ದೇಶಗಳು ಭವಿಷ್ಯದಲ್ಲಿ ಅಮೇರಿಕಾಗೆ ಸೆಡ್ಡು ಹೊಡೆಯೋ ದೇಶಗಳು ಅಂದ್ರೆ ತಪ್ಪಾಗೊಲ್ಲ.. ಯಾಕಂದ್ರೆ ಈ ಎರಡೂ ದೇಶಗಳ ಜಿಡಿಪಿಯ ವೇಗ ಅಷ್ಟಿದೆ. ಆದರೆ ನಮ್ಮ ದೇಶದ ಪ್ರಧಾನಿ ಪಡೆಯೋ ಸಂಬಳ ವಾರ್ಷಿಕ 19 ಲಕ್ಷ.. ಖುಷಿಯ ಸಂಗತಿ ಅಂದ್ರೆ ಚೀನಾ ಅಧ್ಯಕ್ಷ ಕ್ಸಿ ಜಿಂನ್‍ಪಿಂಗ್ ಪಡೆಯುತ್ತಿರೋ ಸಂಬಳಕ್ಕಿಂತ ಹೆಚ್ಚು ನೋಡಿ.. ಅವರ ಸಂಬಳ 13.8 ಲಕ್ಷ..
ಇನ್ನು ಬಿಗ್‍ಬಾಸ್ ಅಮೇರಿಕಾದ ಅಧ್ಯಕ್ಷ ಅಂದ್ಮೆಲೆ ಅವರ ವೇತನವೂ ಅಷ್ಟೇ ದೊಡ್ಡದಾಗಿರತ್ತೆ ಅನ್ನೋ ಭಾವನೆ ನಿಮ್ಮಲ್ಲೇನಾದ್ರೂ ಇದ್ರೆ ಖಂಡಿತ ಅದು ತಪ್ಪು.. ಯಾಕಂದ್ರೆ ಅಮೇರಿಕಾದ ಅಧ್ಯಕ್ಷ ಬರಾಕ್ ಓಬಾಮಾ ಅವರ ವೇತನ ಒಂದು ಖಾಸಗೀ ಸಂಸ್ಥೆಯ ಮುಖ್ಯಸ್ಥನಿಗಿಂತಲೂ ಕಡಿಮೆ..! ಬರಾಕ್ ಓಬಾಮ ಅವರು ಲಕ್ಸುರಿ ಜೀವನ ನಡೆಸುತ್ತಿದ್ದರೂ ಅವರ ವೇತನ ಮಾತ್ರ ಕೋಟಿಗಳಲ್ಲಿದೆ ಅಷ್ಟೇ.. ಅವರ ವೇತನ ಒಂದು ಪುಟ್ಟ ದೇಶದ ಪ್ರಧಾನಿಗಿಂತಲೂ ಕಡಿಮೆ.. ಹಾಗಾದ್ರೆ ಓಬಾಮಾ ಪಡೆಯೋ ವೇತನ ಎಷ್ಟು..? ಜಸ್ಟ್.. 2.65 ಕೋಟಿ ಅಷ್ಟೆ ನೋಡಿ.. ಇಂಗ್ಲೆಂಡ್ ಪ್ರಧಾನಿ ಪಡೆಯೋದು ವಾರ್ಷಿಕ 1.20 ಕೋಟಿ..
ನಿಮಗೆ ಆಶ್ಚರ್ಯವಾದ್ರೂ ಆಗ್ಬೋದೇನೋ ಇಡೀ ವಿಶ್ವದಲ್ಲೇ ಅತೀ ಚಿಕ್ಕ ರಾಷ್ಟ್ರದ ಪ್ರಧಾನಿ ಪಡೆಯೋ ವಾರ್ಷಿಕ ವೇತನ ಕೇಳುದ್ರೆ ಧಂಗಾಗಿ ಹೋಗ್ತೀರಾ.. ಈ ವೇತನ ಒಬಾಮಾ ಅವರಿಗೂ ಇಲ್ಲ ನೋಡಿ.. ಆ ದೇಶ ಯಾವುದು ಗೊತ್ತಾ.. ವರ್ಲ್ಡ್ ಕ್ಲೀನ್ ಸಿಟಿ ಖ್ಯಾತಿಯ ಸಿಂಗಾಪುರ.. ಈ ಚಿಕ್ಕ ದೇಶದ ಪ್ರಧಾನಿ ಲೀ ಸೀನ್ ಲೂಂಗ್ ಜಗತ್ತಿನಲ್ಲೇ ಅತೀ ಹೆಚ್ಚು ವೇತನ ಪಡೆಯೋ ಪ್ರಧಾನಿ.. ಅವರಿಗಿರುವ ವಾರ್ಷಿಕ ವೇತನ 1.7 ಮಿಲಿಯನ್ ಡಾಲರ್.. ಅಂದ್ರೆ ಬರೋಬ್ಬರಿ 11.3 ಕೋಟಿ ರೂಪಾಯಿ..!

ಈತನೊಬ್ಬ ತೆಗೆದುಕೊಳ್ಳೋ ವೇತನ ಫ್ರಾನ್ಸ್, ಜಪಾನ್, ಜರ್ಮನಿ, ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳ ಮುಖ್ಯಸ್ಥರಿಗೆ ನೀಡುವ ವೇತನಕ್ಕೆ ಸಮ ನೋಡಿ.. ಈಗ ಗೊತಾಯ್ತಲ್ವ ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯೋ ದೊಡ್ಡಣ್ಣ ಯಾರು ಅಂತ…!
Like us on Facebook The New India Times
POPULAR STORIES :
ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!
ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!
ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!
ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!
ಪುಣೆಯಲ್ಲಿ ಭುಗಿಲೆದ್ದ ದಲಿತರು-ಮರಾಠರ ಸಂಘರ್ಷ..!
ವಿಷ ಕುಡಿದು ಆತ್ಮಹತ್ಯೆ ಯತ್ನಿಸುವ ನಾಟಕವಾಡಿದ ರೈತನ ವಿಡಿಯೋ ವೈರಲ್..!
ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್.. ಸ್ಪೀಡ್ ಕಳೆದುಕೊಳ್ಳುತ್ತಿದೆ ಜಿಯೋ ಸಿಮ್..!






