ಚಿಕ್ಕಮಗಳೂರು ಜಿಲ್ಲೆಯ ಹೆಬ್ಬಾಳ ಸೇತುವೆ ದುರಸ್ತಿ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದರೂ ಪಿಡಬ್ಲ್ಯುಡಿ ತಲೆಕೆಡಿಸಿಕೊಂಡಿಲ್ಲ. ತಮಗೇನು ಸಂಬಂಧ ಇಲ್ಲದಂತೆ ಅಧಿಕಾರಿಗಳು ನಿದ್ರೆಗೆ ಜಾರಿದ್ದಾರೆ. ಲೋಕೋಪಯೋಗಿ ಇಲಾಖೆ ಮಾಡಬೇಕಾದ ಕೆಲಸವನ್ನು ಹೊರನಾಡು ದೇವಾಲಯ ಆಡಳಿತ ಮಂಡಳಿ ಮಾಡುತ್ತಿದೆ.
ಭಾರಿ ಮಳೆಯಿಂದಾಗಿ ಒಂದೇ ತಿಂಗಳಲ್ಲಿ ಈ ಸೇತುವೆ 7ಬಾರಿ ಮುಳುಗಿತ್ತು. ಇದರಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಶಿಥಿಲಾವಸ್ಥೆಗೆ ಬಂದಿತ್ತು. ಇದನ್ನು ಸರಿಪಡಿಸಬೇಕಾಗಿದ್ದ ಲೋಕೋಪಯೋಗಿ ಇಲಾಖೆ ನಿದ್ರೆಯಿಂದ ಎಚ್ಚೆತ್ತುಕೊಂಡಿಲ್ಲ. ಭಕ್ತರಿಗೆ ಪ್ರವಾಸಿಗರಿಗೆ ತೊಂದರೆ ಆಗಬಾರದೆಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿಯೇ ಸೇತುವೆ ದುರಸ್ತಿ ಮಾಡಿದೆ.