ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

Date:

ಈ ವರ್ಷ ನಡೆದ ಬ್ರೆಜಿಲ್ ನ ರಿಯೋ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಚೀನಾ ಅತ್ಯುತ್ತಮ ಪ್ರದರ್ಶನ ತೋರಿದೆ. ಇಡೀ ಸ್ಪರ್ಧೆಯಲ್ಲಿ 70 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದೆ. ಹೌದು , ಈ ವರ್ಷದ ಒಲಿಂಪಿಕ್ಸ್ ನಲ್ಲಿ ಚೀನಾ ಗೆದ್ದಿರುವುದು 26 ಚಿನ್ನ, 18 ಬೆಳ್ಳಿ , 26 ಕಂಚುಗಳನ್ನು ಗೆಲ್ಲುವ ಮೂಲಕ ಪದಕ ಪತಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಈ ಸಂಖ್ಯಾಬಲವು ಯಾರನ್ನಾದರೂ ಹೆಮ್ಮೆ ಪಡಿಸುತ್ತೆ ಆದರೆ ಇದನ್ನು ಗಳಿಸುವುದಕ್ಕೆ ಅವರು ತೆತ್ತ ಬೆಲೆ ಏನು ?

girl-crying-gymnastics
ಸೂಸನ್ ಬ್ರೌನೆಲ್, ಮಿಸ್ಸೌರಿ-ಸೆಂಟ್ ಲೂಯಿಸ್ ಯುನಿವೆರ್ಸಿಟಿಯಾ ಮಾನವಶಾಸ್ತ್ರಜ್ಞ , ಬೀಜಿಂಗ್ ನಲ್ಲಿರುವ ಶಾಂಘೈ ಯಾಂಗ್ ಪು ಯೂಥ್ ಅಥ್ಲೆಟಿಕ್ ಶಾಲೆಯನ್ನು ಬೇಟಿ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಒಂದು ಸಂದರ್ಶನದಲ್ಲಿ ಆಕೆ ಹೀಗೆ ಹೇಳಿದರು

article-0-145294bb000005dc-973_634x465
“ನಿಮಗೆ ಚಿಕ್ಕ ಮಕ್ಕಳು, ಸಾಮಾನ್ಯವಾಗಿ ಡೈಪರ್ಸ್ಅನ್ನು ಹೊಂದಿರುತ್ತಾರೆ ಹಾಗು ಅವರು ಆ ವಯಸ್ಸಿನಲ್ಲಿ ಅವರ ಸಾಮರ್ಥ್ಯ ಅತ್ಯಧ್ಬುತವಾಗಿರುತ್ತದೆ.

ಮಕ್ಕಳು ಆರು ವರ್ಷ ತಲುಪ್ಪುತ್ತಲೇ, ಆ ಮಕ್ಕಳಿಗೆ ವರ್ಷಗಟ್ಟಲೆ ತರಭೇತಿ ಕೊಟ್ಟು ಭವಿಷ್ಯದಲ್ಲಿ ಒಲಿಂಪಿಕ್ಸ್ ನ ವಿಜೇತರನ್ನಾಗಿ ಮಾಡುವ ಕ್ರೀಡೆಯಾಧಾರಿತ ವಸತಿಯುಳ್ಳ ಶಾಲೆಯು ಚೀನಾದಾದ್ಯಂತ ಬಹಳ ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದು.
ಮಕ್ಕಳಿಗೆ ಕೊಡುತ್ತಿರುವ ಕಠಿಣ ತರಬೇತಿ

4-5

 

article-0-145294d5000005dc-52_634x460

ಬ್ರೌನೆಲ್ ನ ಪ್ರಕಾರ, ಬಹಳ ವಿದ್ಯಾರ್ಥಿಗಳು ಬಡತನದ ಕುಟುಂಬದಿಂದ ತಮ್ಮ ಬಡತನವನ್ನು ಮೆಟ್ಟಿ ನಿಲ್ಲುವುದಕ್ಕೆ ಬರುತ್ತಾರೆ . ಇದರ ಜೊತೆ
ವಿದ್ಯಾವಂತ ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆಯ ಕಡೆ ಗಮನ ಹರಿಸುವುದನ್ನು ಬೆಂಬಲಿಸುವುದಿಲ್ಲ ಏಕೆಂದರೆ ಈ ರೀತಿಯ ಶಾಲೆಗಳಲ್ಲಿ ವಿದ್ಯಾಭ್ಯಾಸವು ಅಷ್ಟು ಉತ್ತಮವಾಗಿರುವುದಿಲ್ಲ.
ಮಕ್ಕಳು ತಮ್ಮ ಸಾಮಾನ್ಯ ಶಾಲೆಯಲ್ಲಿ ಇರಬೇಕಾದರೆ ಮಕ್ಕಳನ್ನು ತಮ್ಮ ತಮ್ಮ ಪ್ರತಿಭೆಯ ಅನುಸಾರ ಐದು ವರ್ಗಗಳಾಗಿ ವಿಂಗಡಿಸುತ್ತಾರೆ. ಆ ವರ್ಗಗಳು ಹೀಗಿವೆ – ಅಂತರಾಷ್ಟ್ರೀಯ ಮಟ್ಟದ ಕ್ರೀಡಾಳು, ರಾಷ್ಟ್ರ ಮಟ್ಟದ ಕ್ರೀಡಾಳು, ಗ್ರೇಡ್ 1 , ಗ್ರೇಡ್ 2 , ಗ್ರೇಡ್ 3 ಎಂದು ವಿಂಗಡಿಸುತ್ತಾರೆ. ಗ್ರೇಡ್ 1 ಹಾಗು ಅದಕ್ಕಿಂತ ಮೇಲ್ವರ್ಗದ ಮಕ್ಕಳನ್ನು ಕ್ರೀಡಾ ವಸತಿ ಶಾಲೆಗೆ ಸೇರಿಸುತ್ತಾರೆ.

china-chinese-gymnastics-kids-training-02

ಹೇಗಿದ್ದರು, ಬಿಡುವಿಲ್ಲದೆ ಒತ್ತಡವನ್ನು ಹೇರುವ ತರಬೇತಿಗಳು ಹಾಗು ಕ್ರೀಡೆಯ ಮೇಲೆ ಬಲವಂತದ ಪ್ರೀತಿಯನ್ನು ತೋರಿಸುವುದು ಈ ಮಕ್ಕಳ ದುರ್ಧೈವ. ಆಟವನ್ನು ಆನಂದಿಸುವುದನ್ನು ಬಿಟ್ಟು ಈ ಮಕ್ಕಳನ್ನು ಮುಂದಿನ ಒಲಿಂಪಿಕ್ಸ್ ಕ್ರೀಡಾಳು ಮಾಡಬೇಕೆಂಬ ಗುರಿ ಹೊಂದಿ ಬಲವಂತದ ಕಟ್ಟುನಿಟ್ಟಿನ ತರಬೇತಿಯನ್ನು ಕೊಡುತ್ತಾರೆ.
ಬ್ರೌನೆಲ್ ಈ ಶಾಲೆಗಳ ಕೆಟ್ಟ ಹಾಗು ನೈಜ ಚಿತ್ರಣವನ್ನು ಬಿಚ್ಚಿಟ್ಟರು.

how-china-trains-its-kids-to-become-olympic-champions-69173

hqdefault
ಅವರು ಸಾಮಾನ್ಯವಾಗಿ ಆಹಾರ ಸೇವನೆ, ತರಬೇತಿ ಹಾಗು ಶಾಲೆಗೆ ಹೋಗುತ್ತಾರೆ. ಅಲ್ಲಿರುವ ಬಹಳಷ್ಟು ಮಕ್ಕಳು ತಮ್ಮ ಹಾಗು ತಮ್ಮ ಕುಟುಂಬದ ಮುಂದಿನ ಸುಂದರ ಜೀವನದ ಆಸೆಯಿಂದ ಈ ಕಷ್ಟದ ವಿಧಾನವನ್ನು ಅನುಸರಿಸುತ್ತಾರೆ.

ಇಂತವರಲ್ಲಿ ಕೆಲವು ಮಕ್ಕಳು ತಮ್ಮ ಒಲಿಂಪಿಕ್ಸ್ ಕನಸ್ಸನ್ನು ನನಸಾಗಿಸಿದರೆ, ಇನ್ನು ಕೆಲವರಿಗೆ ಹಲವು ವರ್ಷಗಳ ತರಬೇತಿಯಿದ್ದರು ಕನಸು ನನಸಾಗದೇ ಕಠಿಣ ಸ್ಥಾನ ತಲುಪ್ಪುತ್ತಾರೆ. ಈ ತರಬೇತಿಯ ವಿಧಾನ ಕ್ರೌರ್ಯದಿಂದ ತುಂಬಿದರು ಒಳ್ಳೆಯ ಪಲಿತಾಂಶ ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ.
ಬರಿ ಪದಕದ ಆಸೆಗಾಗಿ ಇಷ್ಟೆಲ್ಲಾ ಕ್ರೌರ್ಯ ಬೇಕೇ? ಎಂದು ಅಚ್ಚರಿಯಾಗುತ್ತದೆ. ರಾಷ್ಟ್ರದ ಪತಾಕೆಯನ್ನು ಹಾರಿಸುವುದಕ್ಕೆ ಈ ಮಕ್ಕಳಿಗೆ ಈ ಪರಿಶ್ರಮ ಅವಶ್ಯವೆ? ಈ ಸಾಧನೆಗೆ ಇದಕ್ಕಿಂತ ಬೇರೆ ವಿಧಾನ ಇಲ್ಲವೇ?

ಹೀಗೆ ಉತ್ತರವಿಲ್ಲದ ಹಲವು ಪ್ರಶ್ನೆಗಳು ನಮ್ಮನ್ನು ಕಾಡುವುದು ಸತ್ಯ.

  • ಸುಪ್ರೀತ್ ವಸಿಷ್ಟ

POPULAR  STORIES :

ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!

ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.

ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!

ಬಂದ್ ಎಫೆಕ್ಟ್: ರಾಜ್ಯಕ್ಕೆ ಇಪ್ಪತ್ತೈದು ಸಾವಿರ ಕೋಟಿ ಲಾಸ್..!

ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..

ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...