ತೋಟ ಗದ್ದೆ ಇರೋರರನ್ನ ಕೇಳಿ ನೋಡಿ, ಅವರ ಬಹಳ ದೊಡ್ಡ ಶತ್ರು ಮಂಗಗಳು..! ತೋಟಕ್ಕೆ ಮಂಗ ನುಗ್ಗಿದೆ ಅಂದ್ರೆ ಅದು ಅವರ ನಿದ್ದೆಗೆಡಿಸುತ್ತೆ..! ಬಾಳೆಗೊನೆ ಖಾಲಿ ಮಾಡುತ್ತೆ, ತೆಂಗಿನಕಾಯಿ ಕಿತ್ತು ಬಿಸಾಕುತ್ತೆ, ಅಡಿಕೆ ಗೊನೆ ಜೊತೆ ಮಂಗನಾಟ ಆಡುತ್ತೆ..! ಹೀಗೆ ಕೋತಿ ಚೇಷ್ಟೆ ಸಿಕಾಪಟ್ಟೆ..! ಇಂತಹ ಮಂಗ ಓಡಿಸೋದಿದ್ಯಲ್ಲಾ, ಅದೊಂತರಾ ಸರ್ಕಸ್..! ಕಲ್ಲಲ್ಲಿ ಹೊಡುದ್ರೆ ಹೋಗಲ್ಲ, ನಮಗೇ ಗುರಾಯಿಸುತ್ತೆ..! ಪಟಾಕಿ ಹೊಡುದ್ರೆ ಹೋಗುತ್ತೆ, ಮತ್ತೆ ಬರುತ್ತೆ..! ಏರ್ ಗನ್ನಲ್ಲಿ ಶೂಟ್ ಮಾಡುದ್ರೆ, ಪಾಪ ಅದಕ್ಕೆಲ್ಲಿ ಪೆಟ್ಟು ಬೀಳುತ್ತೋ ಅನ್ನೋ ಬೇಜಾರು..! ಸೋ ಗನ್ ಥರಾ ಕಾಣಿಸ್ಬೇಕು, ಪಟಾಕಿ ತರ ಸೌಂಡ್ ಬರಬೇಕು. ಅದನ್ನು ಅವಿಷ್ಕಾರ ಮಾಡಿದ್ದಾರೆ ನಮ್ಮ ಕರ್ನಾಟಕದ ಹುಡುಗ ಗಣಪತಿ..! ನಮ್ಮ ಕುಂದಾಪುರದ ಗಣಪತಿ..
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಗ್ರಾಮದ ಗಣಪತಿ ಈ ಆವಿಷ್ಕಾರ ಮಾಡಿ ಅದನ್ನು ವೀಡಿಯೋ ಮಾಡಿದ್ದಾರೆ..! ಅದೀಗ ಫೇಸ್ ಬುಕ್, ವಾಟ್ಸಾಪಲ್ಲಿ ಓಡಾಡ್ತಾ ಇದೆ..! ಸುಕುಮಾರ್ ಶೆಟ್ಟಿ ಅನ್ನೋರ ಪ್ರೊಫೈಲಲ್ಲಿದ್ದ ಈ ವೀಡಿಯೋನ ಸಾವಿರಾರು ಜನ ಶೇರ್ ಮಾಡಿದ್ದಾರೆ..! 4 ಇಂಚು ಪೈಪು, ಮತ್ತೊಂದು ಒಂದೂವರೆ ಇಂಚು ಪೈಪು, ಒಂದು ಗ್ಯಾಸ್ ಲೈಟರ್. ಒಂದು ರೆಡ್ಯೂಸರ್, ಎಂ ಸೀಲ್ ಗಮ್ ಮತ್ತು ಡಿಯೋಟ್ರೆಂಟ್ ಇದ್ರೆ ಈ ಸಾಧನ ರೆಡಿ.. ಸಖತ್ ಸೌಂಡು, ಸಿಕ್ಕಾಪಟ್ಟೆ ಫೋರ್ಸ್..! ಅದ್ರಲ್ಲೂ ಗಣಪತಿಯವರು ಅದರ ವಿವರಣೆ ಕೊಡೋ ಸ್ಟೈಲು ಇನ್ನೂ ಸೂಪರ್..! ನೀವು ನೋಡಿ, ನಮ್ಮ ಟ್ಯಾಲೆಂಟ್ ಹೆಂಗಿದೆ ಅಂತ ಹೆಮ್ಮೆ ಪಡಿ.. ಸಾಧ್ಯವಾದ್ರೆ ಶೇರ್ ಮಾಡಿ..! ಗಣಪತಿಯವರ ಫೋನ್ ನಂಬರ್ ಸಿಕ್ಕಿಲ್ಲ, ಅವರೇನಾದ್ರೂ ಇದನ್ನು ನೋಡಿದ್ರೆ ಕೆಳಗಿರೋ ನಂಬರ್ ಗೆ ಮೆಸೇಜ್ ಮಾಡಿ..!
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333