ಹುಚ್ಚವೆಂಕಟ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಯೂ ಟ್ಯೂಬ್ ಸ್ಟಾರ್, ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟ , ಲಿರಿಕ್ಸ್ ರೈಟರ್, ಗಾಯಕ….
ನಟಿ ರಮ್ಯಾ ತನ್ನ ಹೆಂಡ್ತಿ ಅಂತ ಹೇಳ್ಕೊಂಡು ವಿವಾದದ ಮೂಲಕ ಸುದ್ದಿಯಾದವರು. ಬರೀ ಒಂದಲ್ಲೊಂದು ವಿವಾದವನ್ನು ಮೈಮೇಲೆಳೆದುಕೊಂಡು ಸುದ್ದಿಯಾಗುವ ಇವರೀಗ ನಿಮ್ಗೆ ಗೊತ್ತಿರುವಂತೆ ಚುನಾವಣಾ ಕಣದಲ್ಲಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಇವರ ಗುರುತು ಚಪ್ಪಲಿ…!
ಯಾವಾಗಲೂ ಮಾತೆತ್ತಿದರೆ ನನ್ ಮಗಂದ್, ನನ್ ಯಕ್ಕಡ ಅನ್ನೋ ವೆಂಕಟ್ ಚಪ್ಪಲಿ ಗುರುತನ್ನೇ ನೀಡುವಂತೆ ವೆಂಕಟ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ರಂತೆ. ಅದರಂತೆ ಇದೀಗ ಅವರಿಗೆ ಚಪ್ಪಲಿ ಚಿಹ್ನೆಯೇ ದೊರೆತಿದೆ.