ಕುತೂಹಲ ಕೆರಳಿಸಿದ್ದ ಬೆಂಗಳೂರು ರಾಜರಾಜೇಶ್ವರಿ ನಗಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
1,08, 064 ಮತಗಳನ್ನು ಪಡೆದಿರುವ ಅವರು 25, 492 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಬಿಜೆಪಿಯ ತುಳಸಿ ಮುನಿರಾಜು 82,572 ಮತ್ತು ಜೆಡಿಎಸ್ ನ ರಾಮಚಂದ್ರ 60, 360 ಮತಗಳನ್ನು ಪಡೆದಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹುಚ್ಚವೆಂಕಟ್ ಸುಮಾರು 600ಮತಗಳನ್ನು ಪಡೆದಿದ್ದಾರೆ.