ನಿರ್ದೇಶಕ ಗುರುಪ್ರಸಾದ್ ತಮ್ಮ ಮೇಲಿನ #MeToo ಆರೋಪದಿಂದ ಸಿನಿಮಾ ನಟಿಯರ ವಿರುದ್ಧ ಬಾಯಿಗೆ ಬಂದಂತೆ ಮಾತಾಡಿದ್ದರು.
ತಮ್ಮ ಕುಟುಂಬದಲ್ಲಿ ತಾವು ಪತಿವ್ರತೆ ಅಂತ ತೋರಿಸಿಕೊಳ್ಳೋಕೆ ಈ ಮೀ ಟೂ ಅಭಿಯಾನವನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪ ಗುರುಪ್ರಸಾದ್ ಅವರದ್ದಾಗಿತ್ತು.
ಗುರುಪ್ರಸಾದ್ ಅವರ ಮಾತಿಗೆ ನಟ , ನಿರ್ದೇಶಕ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ತಮ್ಮದೇ ದಾಟಿಯಲ್ಲಿ ಛಾಟಿ ಬೀಸಿದ್ದಾರೆ.
ಹೆಣ್ಣುಮಕ್ಕಳ ಬಗ್ಗೆ ಮಾತಾಡೋಕೆ ನೀನಾರು ಅಂತ ಗುರುಪ್ರಸಾದ್ ಅವರನ್ನು ವೆಂಕಟ್ ಪ್ರಶ್ನಿಸಿದ್ದಾರೆ.
ನಿಮ್ಮ ಮನೆಯಲ್ಲಿ ಹೆಣ್ಮಕ್ಕಳು ಇಲ್ವಾ? ತಾಯಿ ಇಲ್ವಾ? ಹೆಣ್ಣು ಮಕ್ಕಳ ಬಗ್ಗೆ ಹೇಗೆ ಕೆಟ್ಟದಾಗಿ ಮಾತಾಡ್ತೀಯ. ಕ್ಷಮೆ ಕೇಳಲೇ ಬೇಕು ಅಂತ ವೆಂಕಟ್ ಆಗ್ರಹಿಸಿದ್ದಾರೆ.
ನಿನ್ನ ಸಿನಿಮಾವನ್ನು ನಿನ್ನ ಅಮ್ಮನಿಗೂ ತೋರಿಸಿದ್ಯಾ? ಅವರು ನಿನ್ನ ಸಿನಿಮಾ ನೋಡಿ ಒಳ್ಳೆಯ ಸಿನಿಮಾ ಎಂದು ಹೇಳಿದರೆ ನಾನು ಅವರ ಕಾಲಿಗೆ ಬೀಳುತ್ತೇನೆ ಎಂದು ವೆಂಕಟ್ ಗುರುಪ್ರಸಾದ್ ಅವರನ್ನು ಕುರಿತು ಹೇಳಿದ್ದಾರೆ.
ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಕ್ಷಮೆ ಕೇಳ್ಬೇಕು.ಇಲ್ಲವಾದ್ರೆ ನಾನು ಹಾಫ್ ಮರ್ಡರ್ ಮಾಡ್ತೀನಿ ಅಂತ ವೆಂಕಟ್ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ ತನ್ನ ಸೇನೆ ಹುಡುಗರು ನಿನ್ನನ್ನು ಬಿಡಲ್ಲ ಅಂತಲೂ ವೆಂಕಟ್ ಹೇಳಿದ್ದಾರೆ.