ಸಾಮಾನ್ಯವಾಗಿ ಹೆಣ್ಮಕ್ಳು ತನ್ನ ಗಂಡ ಜೊತೆಯಲ್ಲಿರದೇ ದುಃಖದಲ್ಲಿದ್ದಾಗ ಅವರು ನನ್ನ ಜೊತೆಯಲ್ಲಿಯೇ ಇದ್ದಾರೆ ಅನ್ನೋ ರೀತಿಯಲ್ಲಿ ಸೆಲ್ಫಿಯನ್ನು ತೆಗೆದುಕೊಂಡು ಸುದ್ದಿಯಾಗುವ ಅದೆಷ್ಟೋ ಜನ ಮಹಿಳೆಯರು ಇದಾರೆ.. ಆದರೆ ಇಲ್ಲೋಬ್ಬ ಪುಣ್ಯಾತ್ಮ ತಾನೊಬ್ಬನೇ ಹನಿಮೂನ್‍ಗೆಂದು ಯೂರೋಪ್‍ಗೆ ಪ್ರಯಾಣ ಬೆಳೆಸಿ ಅಲ್ಲಿ ತನ್ನ ಪತ್ನಿಯ ಬರವುವಿಕೆಯನ್ನು ಕಾಯ್ತಾ ಇದಾನಂತೆ…
ವಿಚಿತ್ರ ಅಂದ್ರೆ ಇವರಿಬ್ಬರು ಕೆಲವು ದಿನಗಳ ಹಿಂದೆಯಷ್ಟೇ ಮದುವೆಯಾಗಿ ಹನಿಮೂನ್‍ಗೆ ಯೂರೋಪ್‍ನ್ನು ಆಯ್ಕೆ ಮಾಡಿಕೊಂಡು ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದ್ರು. ಆದರೆ ದುರಾದೃಷ್ಟಕ್ಕೆ ಕೊನೇ ಗಳಿಗೆಯಲ್ಲಿ ಪತ್ನಿ ಸನಾಳ ಪಾಸ್‍ಪೋರ್ಟ್ ಕಳೆದು ಹೋಗಿದೆ. ಬೇರೆ ಯಾರಾದರೂ ಆಗಿದ್ದರೆ ಪ್ರವಾಸವನ್ನೇ ರದ್ದು ಮಾಡುತ್ತಿದ್ರೋ ಏನೋ, ಆದರೆ ಪೈಜಾನ್ ಪಟೇಲ್ ತನ್ನ ಪತ್ನಿಯನ್ನು ಬಿಟ್ಟು ತಾನೊಬ್ಬನೇ ಹನಿಮೂನ್‍ಗೆ ತೆರಳಿದ್ದಾನೆ.. ವಿಮಾನದಲ್ಲಿ ಪ್ರಯಾಣಿಸುವ ವೇಳೆ ತನ್ನ ಪಕ್ಕದ ಸೀಟು ಖಾಲಿ ಉಳಿದಿದ್ದು ಅಲ್ಲಿ ತನ್ನ ಪತ್ನಿಯ ಫೋಟೋ ಇಟ್ಟು ಸೆಲ್ಫಿ ತೆಗೆದು, ನಾನೀಗ ಪತ್ನಿಯ ಜೊತೆ ಹನಿಮೂನ್‍ಗೆ ತೆರಳುತ್ತಿದ್ದೇನೆ ಎಂದು ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದಾನೆ.
ಟ್ವೀಟ್ ನೋಡುತ್ತಿದ್ದಂತೆ ಸುಷ್ಮಾ ಸ್ವರಾಜ್ ಅವರು ಸ್ಪಂಧಿಸಿದ್ದು ಪತ್ನಿಗೆ ಡುಪ್ಲಿಕೇಟ್ ಪಾಸ್‍ಪೋರ್ಟ್ ನೀಡಿ ವಿದೇಶಕ್ಕೆ ಕಳುಹಿಸುವ ಆಶ್ವಾಸನೆ ನೀಡಿದ್ದಾರೆ. ಇದೀಗ ವಿರಹ ವೇಧನೆಯಲ್ಲಿರುವ ನವದಂಪತಿಗಳಿಗೆ ಒಂದು ಮಾಡುವ ಜವಬ್ದಾರಿ ಸುಷ್ಮಾ ಸ್ವರಾಜ್ ವಹಿಸಿಕೊಂಡಿದ್ದಾರೆ..!
POPULAR STORIES :
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!