8 ವರ್ಷದ ಬಾಲಕಿಯೊಬ್ಬಳು ಶಾಲಾ ಬಸ್ ನಿಂದ ಬಿದ್ದು ಮೃತಪಟ್ಟ ಘಟನೆ ಹೈದರಾಬಾದನ ಹೊರವಲಯ ಸಾಹೇಬ್ ನಗರದಲ್ಲಿ ನಡೆದಿದೆ. ಚಾಲಕ ಬ್ರೇಕ್ ಹಾಕಿದ ಪರಿಣಾಮವಾಗಿ ಬಾಗಿಲ ಬಳಿ ಕುಳಿತಿದ್ದ ಬಾಲಕಿ ಅಂಜಲಿ ಬಸ್ ನಿಂದ ಹೊರಗೆ ಬಿದ್ದಿದ್ದಾಳೆ.
ರಸ್ತೆಯ ಮೇಲೆ ಬಿದ್ದ ಬಾಲಕಿ ಬಸ್ಸಿನ ಹಿಂಬದಿಯ ಚಕ್ರಕ್ಕೆ ಸಿಕ್ಕು ಮೃತಪಟ್ಟಿದ್ದಾಳೆ. ಚಾಲಕನ ವಿರುದ್ಧ ಸಾಹೇಬ್ ನಗರ sಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ನಿರ್ಲಕ್ಷ ವಹಿಸಿದ ಶಾಲೆಯ ವಿರುದ್ಧ ಅಂಜಲಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.