ನಮ್ಮ ಮೊದಲ ಭೇಟಿಯಲ್ಲಿ ತಿಳಿದಿರಲಿಲ್ಲ ನಾವಿಬ್ಬರು ಪ್ರೀತಿ ಮಾಡ್ತೀವಿ ಅಂತ..! ವರ್ಷಗಟ್ಟಲೆ ನೋಡದಿದ್ದರು ಹರೆಯದ ಪ್ರೀತಿಗೆ ಕುಂದುಂಟಾಗಲಿಲ್ಲ..!

Date:

ನಾನು ಎಲ್ ಎಲ್ ಬಿ ಕಲಿತಿಯುತ್ತಿದ್ದ ವಿದ್ಯಾರ್ಥಿನಿ.. ಅವರು ಸೈನ್ಯಕ್ಕೆ ಸೇರೋಕೆ ಸಿದ್ಧತೆಯಲ್ಲಿದ ವಿದ್ಯಾರ್ಥಿ.. ನಮ್ಮ ಪರಿಚಯವಾದ ಬಗ್ಗೆ ಹೇಳಿದ್ರೆ ನಿಮಗೆ ನಿಜವಾಗಿಯೂ ನಗು ಬರಬಹುದು.. ಯಾಕಂದ್ರೆ ನಾನು ಹಾಗೆ ನನ್ನ ಫ್ರೆಂಡ್ ವೀಕೆಂಡ್ ಸಂದರ್ಭ ಗಳಲ್ಲಿ ಅವರಿದ್ದ ಕ್ಯಾಂಟಿನ್ ಗೆ ಊಟಕ್ಕೆ ಹೋಗ್ತಿದ್ವಿ.. ಯಾಕಂದ್ರೆ ಅಲ್ಲಿ ಬೇರೆಲ್ಲ ಕಡೆಗಳಿಗಿಂತ ಅತೀ ಕಡಿಮೆ ವೆಚ್ಚದಲ್ಲಿ ನಮ್ಮ ಊಟ ಮುಗಿತಿತ್ತು.. ಈ ಮೂಲಕ ನಾವಿಬ್ಬರು ಸ್ನೇಹಿತರಾಗಿ ಬದಲಾದ್ವಿ.. ಅದ್ರೆ ತುಂಬ ದಿನಗಳ ಕಾಲ ನಾವು ಹೀಗೆ ಜೊತೆಯಲ್ಲಿ ಇರೋಕೆ ಸಾಧ್ಯವಾಗಿಲ್ಲ ಯಾಕಂದ್ರೆ ದೆಹ್ರಾದೂನ್ ಗೆ ಪೋಸ್ಟಿಂಗ್ ಸಿಕ್ಕಿ ಹೊರಟು ಬಿಟ್ರು.. ಆಗಿನ್ನೂ ನಾವಿಬ್ಬರು ಬರಿ ಸ್ನೇಹಿತರಷ್ಟೆ.. ಅಲ್ಲಿಗೆ ಹೋದ ಮೇಲೆ ನಮ್ಮಿಬ್ಬರ ಭೇಟಿ ಸಾಧ್ಯವಾಗಲಿಲ್ಲ.. ಆ ಸಂದರ್ಭದಲ್ಲಿ ನಮಗೆ ಮೇಘಧೂತನ ಹಾಗೆ ಕೆಲಸ ಮಾಡಿದ್ದು ಪತ್ರಗಳು…ಯಾಕಂದ್ರೆ 2002ರ ಸಂದರ್ಭದಲ್ಲಿ ಮೊಬೈಲ್ ಫೋನ್ ಗಳ ಬಳಕೆ ಶುರುವಾಗಿತ್ತು.. ನಮ್ಮ ಆರು ವರ್ಷಗಳು ಹೀಗೆ ಕಳೆದು ಹೋಯ್ತು..

ಇಬ್ಬರು ಒಬ್ಬರ ಬಗ್ಗೆ ಒಬ್ಬರು ಮಾತಾಡುತ್ತ ಪತ್ರಗಳಲ್ಲಿ ಆರೋಗ್ಯದ ಬಗ್ಗೆ ವಿಚಾರಿಸುತ್ತ ಕಾಲದೊಂದಿಗೆ ನಾವು ‌ಸಾಗಿದ್ವಿ.. ಅದ್ರೆ ಒಂದು ದಿನ ‘I really feel for you and I would like to be with’ ಇಂತಹದೊಂದು‌ ಮಸೇಜ್ ನ ನನಗೆ ಕಳುಸಿದ್ರು.. ೬ವರ್ಷಗಳ ಬಳಿಕ ತನ್ನೊಳಗಿದ್ದ ಮಾತನ್ನು ಮುಚ್ಚಿಡದೆ ಹೇಳಿಕೊಂಡಿದ್ರು ನಾನು ಅವರ ಬಗ್ಗೆ ತಿಳಿದಿದ್ರಿಂದ ಒಪ್ಪಿಕೊಂಡೆ.. ನಂತರ ಇಬ್ಬರು ಮದುವೆಯಾದ್ವಿ.. ನನ್ನದು ಲಾಯರ್ ವೃತ್ತಿ ಅವರು ದೇಶ ಕಾಯೋ ಯೋಧ ಹೀಗಾಗೆ ಎರಡು ವರ್ಷಕ್ಕೊಮ್ಮೆ ಒಂದೆಡೆಯಿಂದ ಮತ್ತೊಂದು ಕಡೆಗೆ ಕೆಲಸದ ಮೇಲೆ ಹೋಗಿ ಬಿಡ್ತಿದ್ರು.. ಆದ್ರೆ ಪ್ರತಿ ಬಾರಿಗು ಅವರೊಂದಿಗೆ ನಾನು ಹೋಗಲು ಸಾಧ್ಯವಾಗ್ತ ಇರಲಿಲ್ಲ.. ಈ ಸಂದರ್ಭದಲ್ಲಿ ನಾವು ಬಾಂಬೆಯಲ್ಲಿ ನೆಲೆಸಿದೆವು..ನಾಲ್ಕು ತಿಂಗಳಿಗೊಮ್ಮೆ 15ದಿನ ಅವರು ಮನೆಗೆ ಬರ್ತಾರೆ.. ಈ ದಿನಗಳೆ ನನಗೆ ಎಲ್ಲ.. ನಮ್ಮ ಇಬ್ಬರ ಪ್ರೀತಿಗೆ ಪ್ರತೀಕವಾಗಿ ಮುದ್ದದ ಮಗಳಿದ್ದಾಳೆ..ಈಗ ಲೆಟರ್ ಗೆ ಜಾಗವಿಲ್ಲ.. ಏನಿದ್ರು ವಾಟ್ಸ್ ಅಪ್ ನಲ್ಲಿ ಚಾಟ್..

ನನ್ನ‌ ಪತಿ ಆರ್ಮಿಯಲ್ಲಿ ಇದ್ದಾರೆ ಅನ್ನೋದೆ ನನಗೆ ಹೆಮ್ಮೆ.. ಅವರಿಗೆ ತಾನು ದೇಶ ಕಾಯೋ ಸೈನಿಕ ಅನ್ನೋ ಹೆಮ್ಮೆ.. ಕೆಲವು ಬಾರಿ ಅವರು ಫೋನ್ ಗೆ ಕೂಡ ಸಿಕ್ಕಲ್ಲ.. ಯಾಕಂದ್ರೆ ಅವರಿರೋ ಪ್ರದೇಶಗಳು ಹಾಗಿರುತ್ತೆ.. ಒಮ್ಮೊಮ್ಮೆ 10ರಿಂದ15 ದಿನಗಳೆ ಕಳೆದರು ಅವರ ಬಗ್ಗೆ ಸುಳಿವಿರೋದೆಲ್ಲ.. ಏನಾಗಿದೆ ಅನ್ನೋ ಆತಂಕ ನನ್ನ ಆವರಿಸಿರುತ್ತೆ.. ಅವರ ಒಂದು ಮೆಸೇಜ್ ಗಾಗಿ ಒಂದು ಕಾಲ್ ಗಾಗಿ ನಾನು ನನ್ನ ಮಗಳು ಕಾದಿರ್ತೆವೆ..

ಈಗಾಗ್ಲೇ ಅವರೊಂದಿಗಿದ್ದ ಅದೆಷ್ಟೋ ಸೈನಿಕರು ತಮ್ಮ ಕುಟುಂಬಗಳ ದೂರ ಮಾಡಿ ದೇಶಕ್ಕಾಗಿ‌ ಪ್ರಾಣ ಬಿಟ್ಟಿದ್ದಾರೆ.. ಹೀಗೆ ಮನಸ್ಸಲ್ಲಿ ಏನೋ ಒಂದು ಆತಂಕ ಸದ ಕಾಡುತ್ತೆ.. ನನ್ನವರಿಗೆ ದೇಶ ಕಾಯೋ ಕಾಯಕ ಎಲ್ಲದಕ್ಕಿಂತ ಖುಷಿ ಕೊಟ್ಟಿದೆ.. ನನಗು ನನ್ನ ಪತಿ ದೇಶ ಪುತ್ರನೊಬ್ಬ ಹೆಮ್ಮೆ ಇದೆ.. ಅವ್ರು ಪ್ರತಿದಿನ ನಗುತ್ತ ಎದ್ದೇಳ್ತಾರೆ ಯಾಕಂದ್ರೆ ಅವರಿಗೆ ದೇಶಕ್ಕಾಗಿ ದುಡಿತರೋ ಖುಷಿ ಇದೆ..

  • ಅಶೋಕ್ ರಾಜ್

courtesy : ಹ್ಯೂಮೆನ್ಸ್ ಆಫ್ ಬಾಂಬೆ

Like us on Facebook  The New India Times

POPULAR  STORIES :

ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!

ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!

ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!

ವಿದ್ಯಾರ್ಥಿಯ ಮೇಲೆ ಲೇಡಿ ಕಂಡಕ್ಟರ್‍ನ ಗೂಂಡಾಗಿರಿ..! Lady Conductor Fight

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...