ನಿಮಗೂ ನೆನಪಿದೆ ಅಲ್ವಾ..? ನಾವು ಚಿಕ್ಕವರಿರುವಾಗ ನಮ್ಮ ಶಿಕ್ಷಕರು ನಮಗೆ ಹೇಳ್ತಾ ಇದ್ದ ಬುದ್ಧಿಮಾತುಗಳು, ಸಾಧಕರ ಕತೆಗಳು..! ಒಬ್ಬ ವ್ಯಕ್ತಿ ಸತ್ತ ಮೇಲೂ ಆತನ ಬಗ್ಗೆ ಜನ ಒಂದೆರಡು ಒಳ್ಳೇ ಮಾತುಗಳನ್ನು ಆಡ್ಬೇಕು..! ಅಂಥಾ, ವ್ಯಕ್ತಿಗಳು ನೀವಾಗ್ಬೇಕು ಮಕ್ಕಳಾ ಅಂತ ಪ್ರೀತಿಯಿಂದ ನಮಗೆ ಸ್ಪೂರ್ತಿ ತುಂಬ್ತಾ ಇದ್ರು..! ಕೆಲವರು ಶಿಕ್ಷಕರ ಮಾತನ್ನು ಆ ಕ್ಷಣಕ್ಕೆ ಸೀರಿಯಸ್ ಆಗಿ ತಗೊಂಡು, ದೃಡಸಂಕಲ್ಪ ಮಾಡಿ.. ನಾನೂ ಏನಾದರೂ ಸಾಧನೆ ಮಾಡೇ ಮಾಡ್ತೀನಿ ಎಂದು ನಿರ್ಧಾರ ಮಾಡಿಬಿಡ್ತಾ ಇದ್ವಿ..! ಆದರೆ, ಕ್ಲಾಸ್ರೂಂನಿಂದ ಮೇಸ್ಟ್ರು ಆಚೆ ಹೋದ್ಮೇಲೆ, ಅವರ ಹಿಂದೆಯೇ ಅವರು ಹೇಳಿದ್ದ ಒಳ್ಳೊಳ್ಳೆ ಮಾತುಗಳೂ ಕೂಡ ಹೋಗಿ ಬಿಡ್ತಾ ಇದ್ವು..! ಇದು ಒಂದು ಕಿವಿಯಲ್ಲಿ ಕೇಳಿ, ಇನ್ನೊಂದು ಕಿವಿಯಲ್ಲಿ ಸಂದೇಶವನ್ನು ಆಚೆ ಕಳಿಸ್ತಾ ಇದ್ದ ನನ್ನಂತವರ ಕತೆ..! ಇನ್ನು ಕೆಲವು ಸ್ನೇಹಿತರೂ ನನ್ನಂತವರಿಗಿಂತಲೂ ಬೆಟರ್..! ಯಾಕಂದ್ರೆ, ಮೇಸ್ಟ್ರು ಹೇಳಿದ್ದನ್ನು ಕೇಳಿಸಿಕೊಳ್ತಾ ಇರ್ಲಿಲ್ಲ..! ಆದರೆ, ಈ ಎರಡು ಕೆಟಗರಿ ವಿದ್ಯಾರ್ಥಿಗಳಿಗಿಂತ ಇನ್ನೊಂದು ಕೆಟಗರಿ ವಿದ್ಯಾರ್ಥಿಗಳು ಇರ್ತಾರಲ್ಲಾ..? ಅವ್ರು ಗುರು ವಾಕ್ಯ ಪರಿಪಾಲಕರು.! ಅವರು, ಗುರುಗಳಾಡಿದ ಮಾತುಗಳನ್ನು ಸೀರಿಯಸ್ ಆಗಿ ತಗೊಳ್ತಾ ಇದ್ರು..! ಅದೇ ಕಾರಣಕ್ಕೆ ಸಾಧನೆಯ ಶಿಖರವನ್ನೇರಿ ಪ್ರಜ್ವಲಿಸುತ್ತಿದ್ದಾರೆ..! ಹಂಗಂತ, ಚಿಕ್ಕಂದಿನಲ್ಲಿಯೇ ಲೈಫನ್ನು ಸೀರಿಯಸ್ ಆಗಿ ತಗೊಂಡವರು ಮಾತ್ರವೇ ಯಶಸ್ಸು ಕಾಣ್ತಾರೆ ಅಂತಲ್ಲ..! ಆದ್ರೆ, ಈ ವಿಷಯವನ್ನು ಹೇಳೋಕೆ ಕಾರಣ, ಬಾಲಾಜಿ..!
ಬಾಲಾಜಿ, ತುಮಕೂರು ಜಿಲ್ಲೆಯ ಕೊರಟಗೆರೆ ಎಂಬ ಊರಿನವರು..!ಎಸ್.ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದು, ಶೇ.93.76 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದವರು,..! ಎಸ್ಸಲ್ಸಿಯಲ್ಲಿ ಅಷ್ಟೊಂದು ಅಂಕ ಪಡೆದ ಅವರು ವಿಜ್ಞಾನ ವಿಷಯದಲ್ಲಿ ಮುಂದುವರೀತಾರಂತ ಎಲ್ಲರೂ ಭಾವಿಸಿದ್ರು,..! ಆದರೆ, ಅವರುಗಳ ಆಲೋಚನೆ ತಪ್ಪಾಗಿತ್ತು..! ಬಾಲಾಜಿ, ಮಾನವಶಾಸ್ತ್ರ ವಿಷಯವನ್ನು ಪಿಯುಸಿಯಲ್ಲಿ ಆಯ್ಕೆ ಮಾಡಿಕೊಂಡ್ರು..! ಅದಕ್ಕೆ ಕಾರಣ, ಈ ಬರಹದ ಪೀಠಿಕೆಯಲ್ಲಿರುವ ಸಂಗತಿಗಳು..! ಬಾಲಾಜಿಗೆ, ಅವರ ಮೇಸ್ಟ್ರು ಹೇಳುತ್ತಿದ್ದ ಸಾಧಕರ ಕತೆಗಳು..! ಅವರ ಕತೆಗಳನ್ನು ಕೇಳ್ತಾ ಇದ್ದ ಬಾಲಾಜಿ ಅವತ್ತೇ ಡಿಸೈಡ್ ಮಾಡಿಬಿಟ್ಟಿದ್ರು ನಾನೂ ಐಎಎಸ್ ಅಧಿಕಾರಿ ಆಗ್ತೀನಿ ಅಂತ,..!
ಪಿಯುಸಿಯಲ್ಲಿ ಮಾನವಶಾಸ್ತ್ರ ಅಧ್ಯಯನ ಮಾಡಿದ ಅವರು, ನಂತರ ಮಾಡಿದ್ದು, ಬಿಬಿಎಂ, ಎಂಬಿಎ.,.! ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಬಿಯ ಪದವಿಯನ್ನು ನಾಲ್ಕನೇ ರ್ಯಾಂಕ್ನೊಂದಿಗೆ ಪಾಸ್ ಮಾಡಿಡ್ರು..!
ಬಾಲಾಜಿ, ವಿದ್ಯಾಭ್ಯಾಸದಲ್ಲಿ ಇಷ್ಟೆಲ್ಲಾ ಚುರುಕಾಗಿದ್ರೂ ಅವರಿಗೆ ಆರಂಭದಲ್ಲಿ ಇಂಗ್ಲೀಷ್ ಬಿಡಿಸಲಾಗದ ಸಮಸ್ಯೆಯಾಗಿ ಕಾಡತೊಡಗಿತ್ತು..! ಆದರೆ, ಐಎಎಸ್ ಮಾಡಬೇಕೆಂದು ಹಠಕ್ಕೆ ಬಿದ್ದಿದ್ದ ಅವರು ಇಂಗ್ಲೀಷ್ ಅನ್ನು ಕಲಿತೇ ಕಲಿತೀನಿ ಎಂದು ಗಟ್ಟಿ ಮನಸ್ಸು ಮಾಡಿದ್ರು..! ಹಠ ಹಿಡಿದ್ರು, 3-4ತಿಂಗಳು ಸತತ ಪ್ರಯತ್ನ ಮಾಡಿ ಆ ಇಂಗ್ಲೀಷ್ ಭೂತವನ್ನು ತನ್ನ ಹಿಡಿತಕ್ಕೆ ತಗೊಂಡ್ರು,.!
ಊರು ಕೊರಟಗೆರೆಯಿಂದ 26 ಕಿ.ಮೀ ದೂರದ ತುಮಕೂರಲ್ಲಿ ಪಿಯುಸಿಗೆ ಸೇರಿದಾಗಲೇ ಇಂಗ್ಲೀಷ್ ಮ್ಯಾಗಜಿನ್ ಓದೋಕೆ ಶುರುಮಾಡಿದ್ರು..! ಅರ್ಥವಾಗದೇ ಇದ್ದಿದ್ದನ್ನು ಶಿಕ್ಷಕರ ಹತ್ತಿರ ಕೇಳಿ ಅರ್ಥಮಾಡಿಕೊಂಡ್ರು,.! ಕನ್ನಡದಿಂದ ಇಂಗ್ಲೀಷ್ ಭಾಷಾಂತರ ಮಾಡ್ತಾ ಇದ್ರು..!ಕನ್ನಡ, ತೆಲುಗು ಸಿನಿಮಾಗಳ ಡೈಲಾಗ್ಗಳನ್ನು ಇಂಗ್ಲೀಷ್ಗೆ ಟ್ರಾನ್ಸಲೇಟ್ ಮಾಡ್ತಾ ಇದ್ರು..! ತಿನ್ನುವಾಗ, ಸ್ನಾನ ಮಾಡುವಾಗಲೂ ಇಂಗ್ಲೀಷ್ನಲ್ಲಿಯೇ ಯೋಚನೆ, ಚಿಂತನೆ ಮಾಡಲಾರಂಭಿಸಿ ಇಂಗ್ಲೀಷ್ ಅನ್ನು ಕರಗತ ಮಾಡಿಕೊಂಡ್ರು..!
ಎಂಬಿಎ ಪದವಿ ನಂತರ ಐಎಎಸ್ ಪರೀಕ್ಷೆ ಬರೆದು 36ನೇ ರ್ಯಾಂಕ್ನೊಂದಿಗೆ ಐಎಎಸ್ ಅಧಿಕಾರಿಯೂ ಆದ್ರು..! ಈಗ ಬಾಲಾಜಿ ಐಎಎಸ್ ಬಾಲಾಜಿ..! ಕನ್ನಡದ ಮನೆಮಗ ಬಾಲಾಜಿ ಬಗ್ಗೆ ಹೆಮ್ಮೆಪಡಿ, ಅವರು ಯುವಕರಿಗೆ ಸ್ಪೂರ್ತಿ..!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!
ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!
ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!