ನೀವು ಎಂಬಿಎ ಮಾಡಬೇಕೆಂದುಕೊಂಡಿದ್ದೀರ…? ನಿಮ್ಮ ಅಣ್ಣ, ಅಕ್ಕ, ತಮ್ಮ, ತಂಗಿ, ಮಗ ,ಮಗಳು ಅಥವಾ ನಿಮ್ಮ ಸ್ನೇಹಿತರು, ಸಂಬಂಧಿಕರು ಯಾರಾದರೂ ಎಂಬಿಎ ಮಾಡಬೇಕೆಂದು ಆಸೆಪಟ್ಟಿದ್ದಾರ…? ಕಂಡ ಕನಸುಗಳನ್ನು, ಪಟ್ಟ ಆಸೆಯನ್ನು ಈಡೇರಿಸಿಕೊಳ್ಳಲೇ ಬೇಕು. ನಿಮ್ಮ ಎಂಬಿಎ ಕನಸಿಗೆ ನೀರೆರದು ನಿಮ್ಮ ನ್ನು ಸಮರ್ಥ ಬ್ಯುಸ್ ನೆಸ್ ಅಡ್ಮಿಸ್ಟ್ರೇಟರ್, ಉತ್ತಮ ವ್ಯವಸ್ಥಾಪಕರನ್ನಾಗಿ ಮಾಡಬಲ್ಲ ಅತ್ಯುತ್ತಮ ಸಂಸ್ಥೆ IBMR-IBS.
ಹೌದು ಬೆಂಗಳೂರಿನ ಕೋರಮಂಗಲದಲ್ಲಿರುವ ಈ ಸಂಸ್ಥೆ ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಬೆಂಗಳೂರು ಮಾತ್ರವಲ್ಲದೆ ಹುಬ್ಬಳ್ಳಿ, ಅಹಮ್ಮದಾಬಾದ್, ಗುರ್ಗಾಂವ್ ನಲ್ಲಿಯೂ ತನ್ನ ಶಾಖೆಯನ್ನು ಹೊಂದಿದೆ.
1999ರಲ್ಲಿ ಈ ಸಂಸ್ಥೆಯು ಆರಂಭವಾಗಿದ್ದು ಇಲ್ಲಿಯವರೆಗೆ ತನ್ನ 19ವರ್ಷದ ಸುದೀರ್ಘ ಪಯಣದಲ್ಲಿ ಸುಮಾರು 5,600 ಮಂದಿ ಈ ಸಂಸ್ಥೆಯಿಂದ ಎಂಬಿಎ ಪದವಿ ಪಡೆದಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಪದವಿ ಬಳಿಕ ನೂರಕ್ಕೆ ನೂರಷ್ಟು ಕೆಲಸ ಗ್ಯಾರಂಟಿ. ಇಲ್ಲಿತನಕ ಇಲ್ಲಿ ಕಲಿತವರೆಲ್ಲಾ ಒಳ್ಳೆಯ ಕಡೆಗಳಲ್ಲಿ, ಉತ್ತಮ ಸಂಬಳಕ್ಕೆ ಕೆಲಸ ಮಾಡ್ತಿದ್ದಾರೆ.
ಯುಕೆ , ಫ್ರಾನ್ಸ್, ಮಲೇಷ್ಯಾ, ಇಟಲಿ, ಆಸ್ಟ್ರೇಲಿಯಾದ ಪ್ರಮುಖ ಯೂನಿವರ್ಸಿಟಿಗಳು ಈ ಸಂಸ್ಥೆಯ ಪಾರ್ಟನರ್ ಆಗಿವೆ.
ಯಾವುದೇ ಒಂದು ವಿಷಯದಲ್ಲಿ ಪದವಿ ಪಡೆಯೋದು ಅಂದ್ರೆ ಕೇವಲ ಥಿಯರಿಯನ್ನು ಗೀಚೋದಲ್ಲ. ಪ್ರಾಯೋಗಿಕ ಜ್ಞಾನ ಬೇಕು. ನೀವು ಬೇರೆ ಸಂಸ್ಥೆಗಳಲ್ಲಿ ಪಡೆಯುವ ಪ್ರಾಯೋಗಿಕ ಅನುಭವಕ್ಕಿಂತ ಇಲ್ಲಿ ಹೆಚ್ಚಿನ ಅನುಭವ, ತರಬೇತಿ ಪಡೆಯುತ್ತೀರಿ. ಇದು ನಿಮ್ಮಮುಂದಿನ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿಕೊಡುತ್ತದೆ.
IBMR-IBS ನಲ್ಲಿ ಶೇ.60 ರಷ್ಟು ಪ್ರಾಕ್ಟಿಕಲ್ ಹಾಗೂ ಶೇ. 40ರಷ್ಟು ಥಿಯರಿ ಶಿಕ್ಷಣ ಕೊಡುತ್ತಾರೆ. ನೀವಿಲ್ಲಿ ಕೇವಲ ಕೇಳಿಸಿಕೊಳ್ಳೋದಕ್ಕಿಂತ ಸ್ವತಃ ಕೆಲಸ ಮಾಡಿ ಅನುಭವ ಪಡೆಯುತ್ತೀರಿ.
ಮೊದಲ ಸೆಮಿಸ್ಟರ್ ನಲ್ಲಿಯೇ ನಿಮಗೆ ಫಾರಿನ್ ಇಂಟರ್ನಿಶಿಪ್ ಪ್ರೋಗ್ರಾಂ ಇರುತ್ತದೆ. ನಿಮ್ಮನ್ನು ಸಿಂಗಾಪುರ್, ಮಲೇಷ್ಯಾಕ್ಕೆ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಪಾಸ್ ಪೋರ್ಟ್ ಕಡ್ಡಾಯ.
ಹಾಗಾಂತ ತೀರ ಹೆಚ್ಚಿನ ಶುಲ್ಕ ಇರುವುದಿಲ್ಲ. ಇವೆಲ್ಲವೂ ಕೈಗೆಟಕುವ ಶುಲ್ಕದಲ್ಲೇ ಸಿಗುತ್ತದೆ. ಉಚಿತ ಲ್ಯಾಪ್ ಟಾಪ್ ಕೂಡ ನೀಡುತ್ತಾರೆ. ವಿವಿಧ ಕಂತುಗಳಲ್ಲಿ ಶುಲ್ಕ ಪಾವತಿಸುವ ಅವಕಾಶವಿದೆ. ಬ್ಯಾಂಕಿನಿಂದ ಸಾಲ ಸೌಲಭ್ಯವೂ ಕೂಡ ಇದೆ.
ಈ ಸಂಸ್ಥೆಯು ಇಂಡಸ್ಟ್ರಿ ಅಲೈನ್ಡ್ ಪ್ರೋಗ್ರಾಂ ನಡೆಸುವ ಭಾರತದ ಮೊಟ್ಟಮೊದಲ ಬಿ ಸ್ಕೂಲ್ ಆಗಿದೆ. ಪ್ರತಿಷ್ಠಿತ SAP ಅಕಾಡೆಮಿ ಜೊತೆ ಕೈ ಜೋಡಿಸಿ ತರಬೇತಿ ನೀಡುತ್ತಿದ್ದಾರೆ. ಸ್ಪೆಷಲ್ ಓರಿಯಂಟೇಷನ್ ಪ್ರೋಗ್ರಾಂ ಸಹ ಇರುತ್ತದೆ.
ಟ್ಯಾಲೆಂಟ್ ಎಕ್ಸ್ ಚೇಂಜ್ ಪ್ರೋಗ್ರಾಂ ಆಯೋಜಿಸುತ್ತಾರೆ. ನಾಲ್ಕನೇ ಸೆಮಿಸ್ಟರ್ ನಲ್ಲಿ ಕಲಿಕೆ ಜೊತೆಗೆ ಉದ್ಯೋಗದ ಅವಕಾಶವಿದೆ. ರಾಷ್ಟ್ರ , ಅಂತರರಾಷ್ಟ್ರೀಯ ದರ್ಜೆಯ ಪ್ರಾದ್ಯಾಪಕರಿಂದ ತರಬೇತಿ, ನಿಯತಕಾಲಿಕವಾಗಿ ಉದ್ಯಮ ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತದೆ.
ಇದು ಮಹಿಳೆಯೊಬ್ಬರು ನಡೆಸುತ್ತಿರುವ ಸಂಸ್ಥೆ. ಬೆಂಗಳೂರಿನವರೇ ಆದ ಅಮ್ರಿತ ಅವರು ಸಂಸ್ಥೆಯ ನಿರ್ದೇಶಕಿ.
ಹೆಚ್ಚಿನ ಮಾಹಿತಿಗಾಗಿ
ಮೊ.ಸಂ 9019819191/9964328303
ವಿಳಾಸ : ನಂ1, 2nd ಕ್ರಾಸ್, 80ಫೀಟ್ ರೋಡ್, ಕೆ.ಆರ್ ಗಾರ್ಡನ್ ,ಕೋರಮಂಗಲ-560095