ದ್ರಾವಿಡ್ ಗರಡಿಯಲ್ಲಿ ಬೆಳೆಯುತ್ತಿರುವ ಜೂನಿಯರ್ ವಿರಾಟ್ ಕೋಹ್ಲಿ..!

Date:

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿಗೆ ಸರಿಸಾಟಿ ಯಾರು ಇಲ್ಲ. ವಿರಾಟ್ ಆರ್ಭಟಕ್ಕೆ ವಿಶ್ವ ಕ್ರಿಕೆಟ್ ತಲೆಬಾಗಿದೆ. ವಿರಾಟ್ ವೀರಾವೇಶಕ್ಕೆ ಎದುರಾಳಿಗಳು ತತ್ತರಿಸಿದ್ದಾರೆ. ಕ್ರಿಕೆಟ್ ದಿಗ್ಗಜರ ಒಂದೊಂದೇ ದಾಖಲೆಗಳನ್ನು ಅಳಿಸಿ ತನ್ನ ಹೆಸರನ್ನು ದಾಖಲೆ ಪುಸ್ತಕದಲ್ಲಿ ಬರೆಸಿಕೊಳ್ಳುತ್ತಿರುವ ಪ್ರಸ್ತುತ ಕ್ರಿಕೆಟ್ ಜಗತ್ತಿನ ಮಿನುಗುತಾರೆ ವಿರಾಟ್ ಕೋಹ್ಲಿ. ವಿಶ್ವದ ಪ್ರತಿಯೊಂದು ಕ್ರಿಕೆಟ್ ಸಂಸ್ಥೆಗಳು ಇಂತಹ ಆಟಗಾರ ತಮ್ಮ ತಂಡಕ್ಕೂ ಬೇಕಿತ್ತು ಎಂದುಕೊಳ್ಳುವಷ್ಟರ ಮಟ್ಟಿಗೆ ವಿರಾಟ್ ಕ್ರಿಕೆಟ್ ಕ್ಷೇತ್ರದ ಚಕ್ರವರ್ತಿಯಾಗಿ ಸಿಂಹಾಸನದಲ್ಲಿ ರಾರಾಜಿಸುತ್ತಿದ್ದಾರೆ.


ವಿರಾಟ್ ಕೋಹ್ಲಿ ಅವರಂತಹ ಆಟಗಾರ ಇನ್ನೊಬ್ಬ ಇಲ್ಲ ನಿಜ. ಆದರೆ, ಕೋಹ್ಲಿಯ ರೀತಿಯಲ್ಲೇ ಸ್ಟಾರ್ ಆಟಗಾರನಾಗಿ ಬೆಳೆಯಬಲ್ಲ ಆಟಗಾರ ಒಬ್ಬ ಭಾರತದಲ್ಲಿಯೇ ಇದ್ದಾನೆ! ರಾಹುಲ್ ದ್ರಾವಿಡ್ ಗರಡಿಯಲ್ಲಿ ಆತ ಕ್ರಿಕೆಟ್ ಪಾಠ ಕಲಿಯುತ್ತಿದ್ದಾನೆ. ಸದ್ಯದಲ್ಲೇ ಭಾರತ ಕ್ರಿಕೆಟ್ ತಂಡಕ್ಕೆ ಲಗ್ಗೆ ಹಿಡುವ ಸಾಧ್ಯತೆಯೂ ಇದೆ. ಹಾಗಾದರೆ ವಿರಾಟ್ ಕೋಹ್ಲಿಯಂತೆ ಬ್ಯಾಟ್ ಬೀಸಬಲ್ಲ ಆ ಆಟಗಾರನ ಪರಿಚಯ ಇಲ್ಲಿದೆ.


ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಬೆಳೆಯುತ್ತಿರುವ ಜೂನಿಯರ್ ವಿರಾಟ್ ಕೋಹ್ಲಿ ಹೆಸರು ಶುಬ್‍ಮನ್ ಗಿಲ್. ಪಂಜಾಬ್‍ನ ಈ ಯುವ ಆಟಗಾರನ ಬ್ಯಾಟಿಂಗ್ ಸಾಮಥ್ರ್ಯ, ಅಗ್ರೆಸಿವ್‍ನೆಸ್ ಎಲ್ಲವೂ ವಿರಾಟ್ ಕೋಹ್ಲಿಯನ್ನೇ ಹೋಲುತ್ತೆ…!
19 ವರ್ಷದೊಳಗಿನ ಕ್ರಿಕೆಟ್‍ನಲ್ಲಿ ಅಬ್ಬರಿಸಿ, ಸಂಚಲನವನ್ನುಂಟು ಮಾಡಿರುವ ಶುಬ್‍ಮನ್ ಗಿಲ್ ಇದೀಗ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 6ರಿಂದ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನೀಗ ಇವರು ಎದುರು ನೋಡುತ್ತಿದ್ದಾರೆ.


ವಿರಾಟ್ ಕೋಹ್ಲಿಯಂತೆ ರನ್ ಗಳಿಕೆಯಲ್ಲಿ ಎತ್ತಿದ ಕೈ ಇವರದ್ದು. ಈ ಯುವ ರನ್ ಮಿಷನ್ ಭಾರತದಲ್ಲಿ ನಡೆದ 19 ವರ್ಷದೊಳಗಿನ ತಂಡದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಮಿಂಚಿದ್ದರು. ಆ ಸರಣಿಯಲ್ಲಿ 117 ರನ್ ಸರಾಸರಿಯಲ್ಲಿ 351 ರನ್ ಮಾಡಿದ್ದರು.
ಬಳಿಕ ಮತ್ತೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 4 ಇನ್ನಿಂಗ್ಸ್‍ಗಳಲ್ಲಿ 93 ರನ್ ಸರಾಸರಿಯಲ್ಲಿ 108ಸ್ಟ್ರೈಕ್ ರೇಟ್‍ನಲ್ಲಿ 278 ರನ್ ಚಚ್ಚಿದ್ದಾರೆ. 147 ಗರಿಷ್ಠ ಸ್ಕೋರ್.


ಹೀಗೆ ಅದ್ಬುತ ಆಟದ ಮೂಲಕ ನಿಧಾನಕ್ಕೆ ಭಾರತ ಕ್ರಿಕೆಟ್ ತಂಡದ ಬಾಗಿಲು ಬಡಿಯುತ್ತಿರುವ ಶುಬ್‍ಮನ್ ಗಿಲ್ ಅವರ ಗುರು ಮೊದಲೇ ಹೇಳಿರುವಂತೆ ರಾಹುಲ್ ದ್ರಾವಿಡ್. ಇವರ ಮಾರ್ಗದರ್ಶನದಲ್ಲಿ ಬೆಳೆಯುತ್ತಿರುವ ಹುಡುಗ ಅಂದ್ರೆ ಅನುಮಾನವೇ ಬೇಡ..ಒಬ್ಬ ಒಳ್ಳೆಯ ಆಟಗಾರನಾಗಿ ಹೊರಹೊಮ್ಮುತ್ತಾನೆ. ದ್ರಾವಿಡ್ ಮಾತನ್ನು ಚಾಚುತಪ್ಪದೇ ಕೇಳುವ ಈ ಆಟಗಾರ ಮುಂದೆ ಭಾರತ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡು ವಿಶ್ವಕ್ರಿಕೆಟ್‍ನಲ್ಲಿ ಸದ್ದು ಮಾಡುವುದರಲ್ಲಿ ಅನುಮಾನವೇ ಇಲ್ಲ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...