ಈ ವರ್ಣಚಿತ್ರ ಮತ್ತು ಶಿಲ್ಪಕಲೆಗಳನ್ನು ನೋಡಿ, ಇದು ಕಲಾಗಾರ ಕೈಗಳು ಮಾಡಿದ ಜಾದು ಎಂದು ಯಾರು ಬೇಕಾದರೂ ಹೇಳುತ್ತಾರೆ..! ಆದರೆ ನಂಬಿ, ಬಿಡಿ ಈ ಅಸಾಧಾರಣ ಕಲೆಯ ಸೃಷ್ಟಿಯಾಗಿದ್ದು ಕೈಗಳೇ ಇಲ್ಲದ ಕಲಾವಿದೆ ಇಂದ..!
ಸರಿತಾ ದ್ವಿವೇದಿ, ಅಲಹಬಾದ್ ವಿಶ್ವವಿದ್ಯಾಲಯದ ಫೈನ್ ಆರ್ಟ್ ನ ವಿದ್ಯಾರ್ಥಿನಿ. ಆಕೆಯ ಸೃಷ್ಟಿಯೇ ಈ ಮಾಸ್ಟರ್ ಪೀಸ್ ಗಳು..! ಇದನ್ನು ಆಕೆ ಚಿತ್ರಿಸಿದ್ದು ಕೈಗಳಿಂದಲ್ಲ ಹಲ್ಲು ಮತ್ತು ಕಾಲ್ಬೆರಳುಗಳಿಂದ..!
ಸರಿತಾ ದ್ವಿವೇದಿ ಕೇವಲ ನಾಲ್ಕು ವರ್ಷದವರಿರ ಬೇಕಾದರೇ ಒಂದು ಗಂಭೀರ ವಿದ್ಯುತ್ ಅಪಘಾತದಲ್ಲಿ ತನ್ನ ಎರಡು ಕೈಗಳನ್ನು, ಒಂದು ಕಾಲನ್ನೂ ಕಳೆದುಕೊಳ್ತಾರೆ..! ಈಕೆ ನಾಲ್ಕು ಜನ ಒಡಹುಟ್ಟಿದವರಲ್ಲಿ ಎಲ್ಲರಿಗಿಂತಲೂ ಚಿಕ್ಕವರು (ಒಬ್ಬ ಅಣ್ಣ, ಮೂವರು ಸೋದರಿಯರು). ತನ್ನ ಕುಟುಂಬದೊಂದಿಗೆ ಫತೇಪುರ್ನಲ್ಲಿ ವಾಸವಾಗಿದ್ದಾರೆ. ತಂದೆ ವಿಜಯಕಾಂತ್ರವರು ನಿವೃತ್ತ ಸೇನಾ ಸಿಬ್ಬಂದಿ.
ಇಪ್ಪತ್ನಾಲ್ಕು ವರ್ಷ ಸರಿತಾ, ಮೊದಲೇ ಹೇಳಿದಂತೆ 24 ವರ್ಷದ ಸರಿತಾ ಕೈಗಳಿಲ್ಲದೇ ಇದ್ದರೂ ಹಲ್ಲುಗಳ ನಡುವೆ, ಕಾಲ್ಬೆರಳಿನ ನಡುವೆ ಬ್ರೆಶ್ ಸಿಕ್ಕಿಸಿಕೊಂಡು ಚಿತ್ರ ಬರೆಯುತ್ತಾರೆ..! ಇದು ನಿಜಕ್ಕೂ ಅಸಾಧಾರಣ. ಈ ಅಸಾಧಾರಣ ಕಲಾವಿದೆಗೆ ಡಜನ್ ಗಟ್ಟಲೆ ಶೌರ್ಯಪ್ರಶಸ್ತಿಯನ್ನು, ಬಹಳಷ್ಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಸ್ವತಃ ಅವರಿಗೇ ನಿರ್ದಿಷ್ಟವಾಗಿ ಎಷ್ಟೊಂದು ಪ್ರಶಸ್ತಿಗಳು ಬಂದಿವೆ ಅಂತ ಗೊತ್ತಿಲ್ವಂತೆ..! ಹಾಗಾದ್ರೆ ನೀವೇ ಯೋಚಿಸಿ, ಎಷ್ಟೊಂದು ಪ್ರಶಸ್ತಿಗಳನ್ನು ಈ ಸಾಧಕಿ, ಅಸಾಧಾರಣ ಪ್ರತಿಭೆ ಪಡೆದಿರಬಹುದೆಂದು..!
2005ರಲ್ಲಿ ರಾಷ್ಟ್ರಪತಿಗಳಿಂದ `ಬಾಲಶ್ರೀ’ಪ್ರಶಸ್ತಿಯನ್ನು, ವಿಕಲಚೇತನರ ಸಬಲೀಕರಣಕ್ಕೆ ಪ್ರೋತ್ಸಾಹಿಸಿ ನೀಡುವ ಪ್ರಶಸ್ತಿಯನ್ನು ಉಪರಾಷ್ಟ್ರಪತಿಗಳಿಂದ, ಗಾಡ್ಫ್ರೆ ಪಿಲಿಪ್ಸ್ ಶೌರ್ಯಪ್ರಶಸ್ತಿ (2010) ಸೇರಿದಂತೆ ಅರ್ಹವಾಗಿಯೇ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ..!
“ಅಂಗವೈಕಲ್ಯತೆಯಿಂದ ಸಿಂಪತಿಗಿಟ್ಟಿಸಿಕೊಳ್ಳುವದರಲ್ಲಿ ಅರ್ಥವಿಲ್ಲ..! ಬೇರೆಯವರು ನಮ್ಮ ಬಗ್ಗೆ ಸಿಂಪತಿ ತೋರಿಸಿದಾಗ ನಮಗೆ ಕೆಟ್ಟ ಅನುಭವವಾಗುತ್ತೆ..! ಅವರು ನಮ್ಮೊಡನೆ ಅವರ ನಡೆತೆ ಬದಲಾಯಿಸಿಕೊಳ್ಳಬೇಕೆಂದು ನಾನು ಯಾವಾಗಲೂ ಅಂತ ಜನರಿಗೆ ಹೇಳುತ್ತಲೇ ಇರುತ್ತೇನೆ..! ಅಂಗವೈಕಲ್ಯತೆ ಶಿಕ್ಷೆಯಲ್ಲ..! ಯಾವುದೋ ಘಟನೆಯಿಂದ ನಮಗೆ ಈ ಪರಿಸ್ಥಿತಿ ಬಂದಿರುತ್ತೆ..! ಜನರ ವರ್ತನೆ ಅಂಗವೈಕಲ್ಯರ ಬಗ್ಗ ಬದಲಾಗಬೇಕೆಂದು” ಸರಿತಾ ಕಿವಿ ಮಾತು ಹೇಳುತ್ತಾರೆ..! ಸರಿತಾ ಅವರ ಆಸೆಯಂತೆಯೇ ಅವರಿನ್ನೂ ದೊಡ್ಡಮಟ್ಟಕ್ಕೆ ಬೆಳೆಯಲಿ, ಇವರು ಇವರಂಥವರಿಗೆ ಮಾತ್ರವಲ್ಲ, ಎಲ್ಲರಿಗೂಮಾದರಿಯೇ.
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video
ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!
20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?