ರಾಹುಲ್ ದ್ರಾವಿಡ್ ಶಿಷ್ಯರು ಭಾರತಕ್ಕೆ 4ನೇ ವಿಶ್ವಕಪ್ ತಂದುಕೊಟ್ಟಿದ್ದಾರೆ.
ನ್ಯೂಜಿಲೆಂಡ್ ನ ಬೇ ಓವೆಲ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ 8 ವಿಕೆಟ್ ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ಭಾರತ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸೀಸ್ 216 ರನ್ ಗಳಿಗೆ ಆಲ್ ಔಟ್ ಆಯಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ಮನ್ ಜೋತ್ ಕಾಲ್ರ ಅವರ ಅಮೋಘ ಶತಕದ ನೆರವಿನಿಂದ ಗೆಲುವಿನ ನಗೆ ಬೀರಿತು.
ಆರಂಭಿಕ ಬ್ಯಾಟ್ಸ್ ಮನ್ ಜೋತ್ ಕಾಲ್ರಾ ಅಜೇಯ 102 ರನ್ ಗಳನ್ನು ಬಾರಿಸಿ ಗೆಲುವಿನ ರುವಾರಿಯಾದರು. ನಾಯಕ ಪೃಥ್ವಿ ಶಾ ( 29) ,ಶುಭ್ ಮನ್ ಗಿಲ್ (31) , ಹಾರ್ವಿಕ್ ದೇಸಾಯಿ ಅಜೇಯ 42 ರನ್ ಕೊಡುಗೆ ನೀಡಿದರು. ಭಾರತದ ಪರ ಆಟಗಾರನಾಗಿ 3 ವಿಶ್ವಕಪ್ ಆಡಿದ್ದ ದ್ರಾವಿಡ್ ಗೆ ವಿಶ್ವಕಪ್ ಎತ್ತಿ ಹಿಡಿಯಲು ಸಾಧ್ಯವಾಗಿರಲಿಲ್ಲ. ಆಟಗಾರನಾಗಿ ನನಸಾಗದ ಕನಸು ಕೋಚ್ ಆಗಿ ನನಸಾಗಿದೆ.