ಏಷ್ಯಾಕಪ್ ನ ತನ್ನ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಕೂಸು ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವು ಪಡೆದು, ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ದಾಖಲಿಸಿರುವ ಭಾರತ ಇಂದು ತನ್ನ ಮೂರನೇ ಪಂದ್ಯದಲ್ಲಿ ಬಾಂಗ್ಲ ತಂಡವನ್ನು ಎದುರಿಸಲಿದೆ.
ಇದು ಸೂಪರ್ ಫೋರ್ ಹಂತದ ಪಂದ್ಯ. ಈ ಹಂತದಲ್ಲಿ ಭಾರತ ಬಾಂಗ್ಲಾ ಅಲ್ಲದೆ ಪಾಕ್ ಮತ್ತು ಅಫ್ಘಾನ್ ವಿರುದ್ಧವೂ ಸೆಣೆಸಲಿದೆ.
ಇಂದಿನ ಪಂದ್ಯದಲ್ಲಿ ಗೆದ್ದರೆ ರೋಹಿತ್ ಪಡೆಗೆ ಮುಂದಿನ ಹಾದಿ ಸುಗಮವಾಗಲಿದೆ.
ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಗುಳಿದಿರುವುದು ಭಾರತದ ಪಾಲಿಗೆ ಕಹಿ. ಪಾಂಡ್ಯ ಬದಲು ಎಡಗೈ ವೇಗಿ ಖಲೀಲ್ ಅಹಮ್ಮದ್ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 5 ಗಂಟೆಗೆ ಪಂದ್ಯ ಆರಂಭವಾಗಲಿದೆ.