ಟೀಂ ಇಂಡಿಯಾದ ಆಟಗಾರರು ಹಾಂಕಾಂಗ್ ಡ್ರೆಸ್ಸಿಂಗ್ ರೂಂಗೆ ಹೋಗಿದ್ದಾರೆ.
ಹಾಂಕಾಂಗ್ ಡ್ರೆಸ್ಸಿಂಗ್ ರೂಂ ನಲ್ಲಿ ಟೀಂ ಇಂಡಿಯಾಕ್ಕೆ ಏನ್ ಕೆಲಸ? ಅವರು ಅಲ್ಲಿಗೆ ಹೋಗಿ ಮಾಡಿದ್ದೇನು? ಎಂಬ ಪ್ರಶ್ನೆ ಹುಟ್ಟೋದು ಸಹಜ.
ಸೆ. 18 ರಂದು ನಡೆದ ಏಷ್ಯಾಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವು ಪಡೆದಿತ್ತು.
ಪ್ರಬಲ ಭಾರತದ ವಿರುದ್ಧ ವಿರೋಚಿತ ಸೋಲುಂಡ ಹಾಂಕಾಂಗ್ ನ ಕೆಚ್ಚೆದೆಯ ಹೋರಾಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ತಲೆಬಾಗಿದೆ.
ಅಂತೆಯೇ ಟೀಂ ಇಂಡಿಯಾದ ಆಟಗಾರರು ಕೂಡ ಹಾಂಕಾಂಗ್ ಆಟಕ್ಕೆ ಮನಸೋತು ಅವರನ್ನು ಹುರಿದುಂಬಿಸಿದ್ದಾರೆ.
ಹಾಂಕಾಂಗ್ ಆಟಗಾರರ ಡ್ರೆಸ್ಸಿಂಗ್ ರೂಂಗೆ ತೆರಳಿದ ಟೀಂ ಇಂಡಿಯಾ ಆಟಗಾರರು ಅವರ ಜೊತೆ ಕಾಲಕಳೆದಿದ್ದಾರೆ. ಸೋಲಿನ ಬೇಸರದಲ್ಲಿದ್ದ ಹಾಂಕಾಂಗ್ ಪಡೆಗೆ ವಿಶ್ವದ ಬಲಿಷ್ಠ ತಂಡ ಭಾರತದ ವರ್ತನೆ ಇಷ್ಟವಾಗಿದೆ. ಅವರೂ ಸಹ ಭಾರತೀಯರೊಂದಿಗೆ ಸಂಭ್ರಮಿಸಿದ್ದಾರೆ.
ಧವನ್, ಧೋನಿ, ರೋಹಿತ್, ಕಾರ್ತಿಕ್ ಹಾಗೂ ಭುವನೇಶ್ವರ್ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಭುವನೇಶ್ವರ್, ಧೋನಿ ಹಾಗೂ ರೋಹಿತ್ ಹಾಂಕಾಂಗ್ನ ಯುವ ಆಟಗಾರರಿಗೆ ಕೆಲವೊಂದು ಟಿಪ್ಸ್ ನೀಡಿದರು.