ಅಜಯ್ ಠಾಕೋರ್ ನೇತೃತ್ವದ ಭಾರತ ಕಬ್ಬಡಿ ತಂಡ ಏಷ್ಯನ್ ಗೇಮ್ಸ್ ಗೆ ಭರ್ಜರಿ ತಯಾರಿ ನಡೆಸಿದ್ದು, ದುಬೈ ಮಾಸ್ಟರ್ಸ್ ಕಬ್ಬಡಿ ಟೂರ್ನಿಯಲ್ಲಿ ಮತ್ತೊಂದು ಸಮರಕ್ಕೆ ಸಿದ್ಧವಾಗಿದೆ.
ಈಗಾಗಲೇ ಆಡಿರುವ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ದುಬೈ ಮಾಸ್ಟರ್ಸ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನವನ್ನು 36-20 ಅಂಕಗಳಿಂದ ಮಣಿಸಿದ್ದ ಭಾರತ, ನಂತರ ಕೀನ್ಯಾ ವಿರುದ್ಧ ಗೆದ್ದಿತ್ತು. ಇಂದು ಮತ್ತೊಮ್ಮೆ ಪಾಕ್ ವಿರುದ್ಧ ಸೆಣೆಸಲಿದೆ.