ಭಾರತ-ಪಾಕಿಸ್ತಾನದ ನಡುವೆ ನಿನ್ನೆ ಏಷ್ಯಾಕಪ್ ಕ್ರಿಕೆಟ್ ಪಂದ್ಯ ನಡೆದಿದೆ. ಭಾರತ ಪಾಕ್ ಅನ್ನು 8 ವಿಕೆಟ್ ಗಳಿಂದ ಮಣಿಸಿದೆ. ಈ ನಡುವೆ ಭಾರತವನ್ನು ಟ್ರೋಲ್ ಮಾಡಲು ಹೋದ ಪಾಕಿಸ್ತಾನ ನಗೆಪಾಟಿಲಿಗೆ ಗುರಿಯಾಗಿ, ತಾನೇ ಟ್ರೋಲ್ ಆಗುತ್ತಿದೆ.
ನಿನ್ನೆ ಪಂದ್ಯಕ್ಕೂ ಮುನ್ನ ಪಿಸಿಬಿ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ‘ 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಮ್ಯಾಚ್ ನ ವೀಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿ, ಭಾರತ ಸೋತ ಬಗ್ಗೆ ಕಾಲೆಯಳಲು ಪ್ರಯತ್ನಿಸಿದೆ. ತಾನು ಮಾಡಿದ ಟ್ವೀಟ್ ನಲ್ಲಿನ ಸ್ಪೆಲಿಂಗ್ ತಪ್ಪಿನಿಂದ ಟ್ರೋಲ್ ಆಗುತ್ತಿದೆ.
Happened ಎಂದು ಬರೆಯುವ ಬದಲಾಗಿ ಪಿಸಿಬಿ Hepoened ಎಂದು ಬರೆದು ಮುಜುಗರ ಅನುಭವಿಸುತ್ತಿದೆ. ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಸೇರಿದಂತೆ ಬಹುತೇಕರು ಪಿಸಿಬಿ ಕಾಲೆಳೆಯುತ್ತಿದ್ದಾರೆ.