ಭಾರತ ಮತ್ತು ಪಾಕಿಸ್ತಾನದ ನಡುವೆ ಏಷ್ಯಾಕಪ್ ನ 4ರ ಘಟ್ಟದ ಎರಡನೇ ಪಂದ್ಯ ಇಂದು ನಡೆಯಲಿದೆ.
ಕೇವಲ 4ದಿನದ ಅಂತರದಲ್ಲಿ ಭಾರತ-ಪಾಕ್ ಎರಡನೇ ಬಾರಿಗೆ ಮುಖಾಮುಖಿ ಆಗಲಿವೆ.
ಸರಣಿಯಲ್ಲಿ ಹಾಕಾಂಗ್, ಪಾಕಿಸ್ತಾನ , ಬಾಂಗ್ಲಾ ವಿರುದ್ಧ ಸತತ ಗೆಲುವು ಪಡೆದಿರುವ ಭಾರತ ಇಂದಿನ ಪಂದ್ಯದಲ್ಲೂ ಜಯದಾಖಲಿಸುವ ಆತ್ಮವಿಶ್ವಾಸದಲ್ಲಿದೆ. ಪಾಕಿಸ್ತಾನ ಈ ಪಂದ್ಯ ಗೆದ್ದು ಕಳೆದ ಪಂದ್ಯದ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.
ಏಷ್ಯಾ ಕಪ್ ನಲ್ಲಿ ಭಾರತ ಮತ್ತು ಪಾಕ್ ತಂಡಗಳು ಇದುವರೆಗೆ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 7 ಪಂದ್ಯಗಳನ್ನು, ಪಾಕ್ 5 ಪಂದ್ಯಗಳನ್ನು ಗೆದ್ದಿದ್ದು 1 ಪಂದ್ಯದ ಫಲಿತಾಂಶವಿಲ್ಲ. .
ಇಂದಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 5ಗಂಟೆಗೆ ಆರಂಭವಾಗಲಿದೆ.