ಪ್ರಧಾನಿ ನರೇಂದ್ರ ಮೋದಿ ಸೇನೆಗೆ ಸೇರುವ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಮಹಿಳೆಯರಿಗೆ ಭೂ ಸೇನೆಯಲ್ಲೂ ಪರ್ಮನೆಂಟ್ ಕಮೀಷನ್ (ಕಾಯಂ ಸೇವೆ) ನೀಡುವ ಬಗ್ಗೆ ಪ್ರಧಾನಿ ಘೋಷಿಸಿದ್ದಾರೆ.
ಭೂಸೇನೆಯಲ್ಲಿ ಇದುವರೆಗೆ ಮಹಿಳೆಯರಿಗೆ ಶಾರ್ಟ್ ಸರ್ವೀಸ್ ಕಮೀಷನ್ ನಲ್ಲಿ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇನ್ಮುಂದೆ ದೇಶದ ದೈರ್ಯವಂತ ಹೆಣ್ಣುಮಕ್ಕಳಿಗೂ ಪರ್ಮನೆಂಟ್ ಕಮೀಷನ್ ನೀಡಲಾಗುವುದು ಎಂದು ಸ್ವಾತಂತ್ರ್ರೋತ್ಸವ ಭಾಷಣದಲ್ಲಿ ಘೋಷಣೆ ಮಾಡಿದರು. ಈ ನೀತಿಯನ್ನು ಸರ್ಕಾರ ಸದ್ಯದಲ್ಲೇ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.