ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!

Date:

ಗಡಿ ಕಾಯುವ ವೀರ ಯೋಧರಿಗೆ ಒಂದು ಲೈಕ್ ಕೊಡಿ, ಕಮೆಂಟ್ ಮಾಡಿ ಅಂತ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡುವ ಯುವಕರೆ ಇಲ್ಲಿದೆ ನೋಡಿ ವೀರ ಯೋಧರ ನಿಜವಾದ ಜೀವನ ಶೈಲಿ..! ಭಾರತೀಯ ಯೋಧರಿಗೆ ಎಲ್ಲಾ ರೀತಿಯ ಸೌಕರ್ಯಗಳು ಇರುತ್ತೆ ಅಂತ ಜಂಭ ಕೊಚ್ಕೊಳ್ಳೊರತ್ರ ಈ ವಿಡಿಯೋ ತೋರ್ಸಿ ಉತ್ತರ ಕೇಳ್ಬೇಕು..! ಯಾಕಂದ್ರೆ ವೀರ ಯೋಧರಿಗೆ ನೀಡ್ತಾ ಇರೋದು ಕಳಪೆ ಆಹಾರ..! ಹಾಗಂತ ನಾವು ಹೇಳ್ತಾ ಇಲ್ಲ ಸ್ವತಃ ಬಿಎಸ್‍ಎಫ್ ಯೋಧರೊಬ್ಬರು ಅಲ್ಲಿನ ಕರಾಳ ಸತ್ಯವನ್ನು ವೀಡಿಯೋ ಮೂಲಕ ತೋರ್ಸಿದ್ದಾರೆ ನೋಡಿ..! ತೇಜ್ ಬಹದ್ದೂರ್ ಯಾದವ್ ಎಂಬ ಬಿಎಸ್‍ಎಫ್ ಯೋಧ ತಮಗೆ ನೀಡ್ತಾ ಇರೊ ಕಳಪೆ ಆಹಾರ ಮತ್ತು ಸೌಲಭ್ಯಗಳ ಕುರಿತು ವೀಡಿಯೋ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ..! ಈ ವಿಡಿಯೋ ನೋಡಿದ ಮೇಲೆ ಗಡಿ ಕಾಯುವ ವೀರನಿಗೆ ಇಂತಹ ಕಳಪೆ ಗುಣಮಟ್ಟದ ಸೌಕರ್ಯ ನೀಡ್ತಾರಾ..? ಅಂತ ನಿಮ್ಗೆ ಶಾಕ್ ಆಗ್ದೆ ಇರೊಲ್ಲ..! ಇನ್ನು ಈ ವಿಡಿಯೋ ಶೇರ್ ಮಾಡಿರೋ ಆ ಯೋಧ ತಾನು ಯಾಕೆ ಇದನ್ನು ಹಂಚಿಕೊಂಡಿದ್ದೇನೆ ಎಂಬುದನ್ನೂ ಸ್ಪಷ್ಟವಾಗಿ ಹೇಳಿದ್ದಾನೆ..! ಹಾಗಾದ್ರೆ ವೀಡಿಯೋದಲ್ಲಿರೊದಾದ್ರೂ ಏನು..? ನೀವೆ ನೋಡಿ..!
ವಿಡಿಯೋದಲ್ಲಿ ಯೋಧ ಹೇಳಿದ ಕಟು ಸತ್ಯ..!

https://www.youtube.com/watch?v=yadP0OF1D2s
ಭಾರತೀಯ ಪ್ರಜೆಗಳಿಗೆ ನನ್ನ ವಂದನೆಗಳು. ಈ ಮುಖಾಂತರವಾಗಿ ನಿಮ್ಮಲ್ಲಿ ಒಂದು ಮನವಿ ಮಾಡ್ಕೊಳ್ತಾ ಇದ್ದೀನಿ. ನಾನು ಬಿಎಸ್‍ಎಫ್-32 ಬೆಟಾಲಿನ್‍ನಲ್ಲಿ ಕಾರ್ಯ ನಿರ್ವಹಿಸ್ತಾ ಇದೀನಿ. ಇಲ್ಲಿ ನಾವು ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೂ ಕೊರೆಯುವ ಚಳಿಯ ಮಧ್ಯೆಯೂ ದೇಶ ಕಾಯೋ ಕಾರ್ಯ ಮಾಡ್ತೆವೆ. ಮಳೆ, ಚಳಿ ಬಿರುಗಾಳಿ ಅನ್ನದೆ ನಮ್ಮ ದೇಶ ಕಾಯೋ ಕೆಲಸ ನಿರಂತರವಾಗಿರುತ್ತೆ. ಇಲ್ಲಿರುವ ವಾತಾವರಣವನ್ನು ನೀವು ನೋಡಿದ ಕೂಡಲೆ ಖುಷಿಯಾಗಿ ಬಿಡಬಹುದು. ಆದ್ರೆ ಇಲ್ಲಿನ ಹವಾಮಾನವನ್ನು ಅನುಭವಿಸಿದಾಗಲೆ ಗೊತ್ತಾಗೋದು. ನಮ್ಮ ಕಷ್ಟವನ್ನ ಯಾವ ಮಾಧ್ಯಮಗಳಾಗಲಿ, ಅಥವಾ ರಾಜಕಾರಣಿಯಾಗಲಿ ಕೇಳೋದಿಲ್ಲ. ನಾನು ಕಳಿಸಿರುವ ವೀಡಿಯೋವನ್ನು ಮಾಧ್ಯಮಗಳಿಗೆ ಹಾಗೂ ರಾಜಕಾರಣಿಗಳಿಗೆ ಕಳುಹಿಸಬೇಕು. ಇಲ್ಲಿ ನಮ್ಮ ಅಧಿಕಾರಿಗಳು ನಮಗೆ ಯಾವ ರೀತಿಯಲ್ಲಿ ಅನ್ಯಾಯ ಮಾಡ್ತಾ ಇದ್ದಾರೆ ಅನ್ನೋದು ಎಲ್ಲರಿಗೂ ತಿಳಿಯಬೇಕು. ನಾನು ಸರ್ಕಾರವನ್ನು ಟೀಕೆ ಮಾಡಲು ಬಯಸುತ್ತಿಲ್ಲ. ಯಾಕಂದ್ರೆ ನಮಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಸರ್ಕಾರ ಪೂರೈಕೆ ಮಾಡ್ತಾ ಇದೆ. ಆದರೆ ಇಲ್ಲಿನ ಅಧಿಕಾರಿಗಳು ಮಾತ್ರ ಅವುಗಳನ್ನು ನಮಗೆ ತಲುಪಿಸುತ್ತಿಲ್ಲ. ಎಲ್ಲವನ್ನೂ ತಮ್ಮಲ್ಲೆ ಇಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ನಾವಿಷ್ಟು ಕಷ್ಟ ಅನುಭವಿಸ್ತಾ ಇದ್ರೂ ಯಾವುದೆ ಸೌಲಭ್ಯ ನೀಡ್ತಾ ಇಲ್ಲ. ಅಷ್ಟೆ ಅಲ್ಲ ಇಲ್ಲಿನ ಯೋಧರು ಅದೆಷ್ಟೋ ಬಾರಿ ಊಟ ಇಲ್ಲದೆ ಹಸಿವಿನಿಂದ ಮಲಗಿದ್ದಾರೆ..! ನಮಗೆ ಬೆಳಿಗ್ಗೆ ಕೊಡೋ ಊಟ ಎಷ್ಟು ಗೊತ್ತಾ..? ಒಂದೇ ಒಂದು ಒಣ ಪರೋಟಾ..! ಇದಕ್ಕೆ ಪಲ್ಯನೂ ಇಲ್ಲ ಉಪ್ಪಿನ ಕಾಯಿನೂ ಇಲ್ಲ. ಇನ್ನು ಮಧ್ಯಾಹ್ನ ನೀಡೋ ಊಟದಲ್ಲಿ ಬರೀ ಉಪ್ಪು ಬೇಳೆ ಅಷ್ಟೆ ಇರೋದು..! ಅದನ್ನೂ ಕೂಡ ನಿಮಗೆ ವೀಡಿಯೋ ಮಾಡಿ ಕಳುಹಿಸುತ್ತೀನಿ. ಇಲ್ಲಿನ ಸ್ಟೋರ್ ಮಾತ್ರ ತುಂಬಿ ತುಳುಕುತ್ತಾ ಇರುತ್ತೆ. ಆದ್ರೆ ಅದ್ಯಾವುದು ನಮಗೆ ಸಿಗೋದಿಲ್ಲ..! ಎಲ್ಲಾ ಮಾರುಕಟ್ಟೆ ಪ್ರವೇಶ ಮಾಡುತ್ತೆ..! ಇದನ್ನು ಯಾರು ಮಾರುಕಟ್ಟೆಗೆ ಮಾರಾಟ ಮಾಡ್ತಾ ಇದಾರೆ ಅನ್ನೋದು ನನಗೆ ಗೊತ್ತಿಲ್ಲ. ಮಾನ್ಯ ಪ್ರಧಾನಿ ಮಂತ್ರಿಗಳೆ ನಿಮ್ಮಲ್ಲಿ ಒಂದು ವಿನಂತಿ. ದಯವಿಟ್ಟು ಈ ಕುರಿತು ತನಿಖೆ ನಡೆಸಿ. ಗೆಳೆಯರೆ ಈ ವಿಡಿಯೋ ಹಾಕಿದ ಮೇಲೆ ನಾನು ಜೀವಂತವಾಗಿ ಇರ್ತಿನೋ ಇಲ್ವೋ ನನಗೆ ಗೊತ್ತಿಲ್ಲ..! ಯಾಕಂದ್ರೆ ಈ ದಂಧೆಯಲ್ಲಿ ಸಾಕಷ್ಟು ಅಧಿಕಾರಿಗಳ ಕೈವಾಡ ಇದೆ. ಇಲ್ಲಿ ಏನು ಬೇಕಾದ್ರೂ ನಡೆಯೋ ಸಾಧ್ಯತೆ ಇದೆ. ಅವರೆಲ್ಲಾ ನನಗೆ ಏನು ಬೇಕಾದ್ರೂ ಮಾಡಬಹುದು. ಹೀಗಾಗಿ ದಯವಿಟ್ಟು ಈ ವೀಡಿಯೋವನ್ನು ಸಾಕಷ್ಟು ಜನರಿಗೆ ಶೇರ್ ಮಾಡಿ. ಈ ಮೂಲಕ ಯೋಧರ ಕಷ್ಟವನ್ನು ಜನರಿಗೆ ತೋರಿಸಿ..

ಧನ್ಯವಾದಗಳು.. ಜೈ ಹಿಂದ್..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ

195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!

ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?

ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film

ದಂಪತಿಗಳಿಗೆ ಉಡುಗೊರೆಯಾಗಿ ಕಾಂಡೋಮ್ ನೀಡಲಿದೆ ಸರ್ಕಾರ..!

ಸ್ಯಾಂಡಲ್‍ವುಡ್ ಕ್ವೀನ್‍ನ ಹಿಂದಿಕ್ಕಿದ್ದಾಳಂತೆ ಈ ನಟಿಮಣಿ?

ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...