ಡೇಟಿಂಗ್ , ಈ ಹೆಸರು ಕೇಳಿದ್ರೆ ಸಾಕು ಕೆಲವರು ಮಾಡೋ ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ಇದರ ಹಿಂದೆ ಬೀಳ್ತಾರೆ. ಈಗಂತೂ ಇದಕ್ಕಾಗಿಯೇ ಡೇಟಿಂಗ್ ಆ್ಯಪ್ ಸಹ ಬಂದಿದೆ. ಇಲ್ಲಿ ಚಂದದ ಹುಡುಗಿಯರನ್ನು ಪರಿಚಯ ಮಾಡಿಕೊಂಡು ಅವರ ಹಿಂದೆ ಬಿದ್ದು , ಡೇಟಿಂಗ್ ಜಪ ಮಾಡೋ ಹುಡುಗರು ಸುಖಾಸುಮ್ಮನೇ ತಮ್ಮ ಜೀವನ ಹಾಳು ಮಾಡಿಕೊಳ್ತಾರೆ.
ಭಾರತ ಮೂಲದ 25ವರ್ಷದ ಮೌಲಿನ್ ರಾಥೋಡ್ ಎಂಬ ಯುವಕ ಡೇಟಿಂಗ್ ಹಿಂದೆ ಬಿದ್ದು ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಈತ ಓದೋಕೆಂದು ಆಸ್ಟ್ರೇಲಿಯಾಕ್ಕೆ ಹೋದವ. ಸ್ನೇಹಿತರು ಹೇಳುವಂತೆ ಓದಿನಲ್ಲಿಯೂ ಚುರುಕಾಗಿದ್ದ. ಆದರೆ, ಡೇಟಿಂಗ್ ಹಿಂದೆ ಬಿದ್ದು ತಪ್ಪು ಮಾಡಿದ…!
ಡೇಟಿಂಗ್ ಆ್ಯಪ್ ನಲ್ಲಿ 19ವರ್ಷದ ಹುಡುಗಿಯೊಬ್ಬಳ ಪರಿಚಯ ಮಾಡಿಕೊಂಡಿದ್ದ ಈತ ಕಳೆದ ಸೋಮವಾರ ರಾತ್ರಿ ಸುಮಾರು 9ಗಂಟೆಗೆ ಸನ್ಬರಿಯ ರೋಸ್ ಕೋರ್ಟ್ ನಲ್ಲಿನ ಆಕೆಯ ಮನೆಗೆ ಹೋಗಿದ್ದಾನೆ.
ನಂತರ ಅಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಯುವತಿ ಏಕಾಂಗಿಯಾಗಿ ಮನೆಯಲ್ಲಿ ವಾಸವಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಉದ್ದೇಶ ಪೂರ್ವಕವಾಗಿಯೇ ಯುವಕನಿಗೆ ಥಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಯುವತಿ ಮೇಲೆಯೇ ಆರೋಪ ಕೇಳಿಬಂದಿದ್ದು, ಆಕೆಯ ವಿರುದ್ಧ ಕೊಲೆ ಪ್ರಕಣ ದಾಖಲಾಗುವ ಸಾಧ್ಯತೆ ಇದೆ.