`ಹುಟ್ಟು ಒಂದು ದಿನ, ಸಾವು ಒಂದು ದಿನ, ನಡುವೆ ಪ್ರೀತಿ ತುಂಬಿದ ಈ ಜೀವನ’ ಎಂಬ ಅತ್ಯದ್ಭುತ ಸಾಲುಗಳನ್ನು ಡಿಸೆಂಬರ್ 31 ರಂದು ಸಂಜೆ ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಯುವಕ. ಆ ಸಮಯಕ್ಕೆ ಆ ಪೋಸ್ಟ್ ಗೆ 100 ಲೈಕ್, 20ರಿಂದ 25 ಕಮೆಂಟ್, 10 ಶೇರ್ ಬಂದಿದ್ದವು ಅನ್ನಿಸುತ್ತದೆ. ಆದರೆ 1 ನೇ ತಾರೀಕಿನಂದು ಆ ಪುಟ ಇದ್ದಕ್ಕಿದ್ದಂತೆ ವೈರಲ್ ಆಯಿತು. ಆ ಪೋಸ್ಟ್ ಹಾಕಿದ ಯುವಕ ಫೇಮಸ್ ಆದ. ಆದರೆ ಅದನ್ನು ನೋಡಲು ಆತನೇ ಇರಲಿಲ್ಲ..!
ಆತ ಮ್ಯಾಥ್ಯೂ ಡೆರೆಮೆರ್. ವಯಸ್ಸು 31. ಅಮೆರಿಕಾದ ಫ್ಲೊರಿಡಾ ಪ್ರಾಂತದ ಸೆಮಿನೋಲ್ ನ ನಿವಾಸಿ. ಇದೇ ಡಿಸೆಂಬರ್ 31ರಂದು ಹೊಸ ವರ್ಷ ಆಚರಿಸುವ ಮುನ್ನ ಆತ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಹಾಕಿದ್ದ. ಹೀಗೆ ಆ ಪೋಸ್ಟ್ ಬರೆದು ಹೊರಗೆ ಹೋದವ ಮತ್ತೇ ಮನೆ ಸೇರಲಿಲ್ಲ. ಆದರೆ, ಆತ ಬರೆದ ಸಾಲುಗಳು ಮಾತ್ರ ಅಸಂಖ್ಯಾತ ಮಂದಿಗೆ ಸ್ಪೂರ್ತಿಯ ಚಿಲುಮೆಯಾಗಿವೆ.
ಜೀವನ, ಪ್ರೀತಿ, ಸ್ನೇಹ, ಸಂಬಂಧ ಮೊದಲಾದ ಭಾವನಾತ್ಮಕ ವಿಚಾರಗಳ ಬಗ್ಗೆ ಈತ ಬರೆದ ಸಾಲುಗಳು ಸಖತ್ ಇಂಪ್ರೆಸ್ ಮಾಡುವಂತಿದ್ದು, ವಿಪರ್ಯಾಸವೆಂದರೆ ಈ ಸ್ಪೂರ್ತಿದಾಯಕ ಸಾಲುಗಳನ್ನು ಬರೆದ ಮ್ಯಾಥ್ಯೂ ಅಂದು ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ. ಬೈಕ್ ನಲ್ಲಿ ಆತ ಹೋಗುತ್ತಿದ್ದ ವೇಳೆ ಹೊಸ ವರ್ಷದ ಕುಡಿತದ ಅಮಲಿನಲ್ಲಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬ ಮ್ಯಾಥ್ಯೂವಿನ ಬೈಕ್ ಗೆ ಗುದ್ದಿದ್ದಾನೆ. ಇದರಿಂದ ಮ್ಯಾಥ್ಯೂ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಾರ ಸಂಖ್ಯೆಯ ಜನ ಕಂಬನಿ ಮಿಡಿದಿದ್ದಾರೆ. ಇಲ್ಲಿಯವರೆಗೆ ಮ್ಯಾಥ್ಯೂವಿನ ಪೋಸ್ಟನ್ನು ಬರೋಬ್ಬರಿ 25450 ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು, 75 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಇನ್ನು ನೂರಾರು ಜನ ಕಮೆಂಟ್ ಮಾಡಿದ್ದು, ಮ್ಯಾಥ್ಯೂವಿನ ಸಾವಿಗೆ ಸಂತಾಪ ಸೂಚಿಸಿದ್ದಾರೆ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?
ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!
6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!
ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!
ಕನ್ನಡ ಸಿನಿಮಾಗಳಿಗೇಕೆ ಥಿಯೇಟರ್ ಗಳಸಮಸ್ಯೆ..?! -ಕಿರಿಕ್ ಕೀರ್ತಿ
`ಹಾವು ಕಚ್ಚಿತಲ್ಲೋ ತಮ್ಮಾ ಹೋಗುತೈತೆ ಜೀವಾ..’ Kannada Folk Song
ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!
ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!
ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!
ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!