ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಐಪಿಎಲ್ ಸೀಸನ್ 5 ರಲ್ಲಿ ಗೆಲುವಿನ ಖಾತೆ ತೆರೆದಿದೆ.
ತಮ್ಮ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೋಲನುಭಿಸಿ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದ್ದ ವಿರಾಟ್ ನೇತೃತ್ವದ ತಂಡ ಇಂದು ಮನೆಯಂಗಳದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಅನ್ನು ನಾಲ್ಕು ವಿಕೆಟ್ ಗಳಿಂದ ಮಣಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಅಶ್ವಿನ್ ನೇತೃತ್ವದ ಕಿಂಗ್ಸ್ ಇಲೆವೆಲ್ 19.2 ಓವರ್ ಗಳಲ್ಲಿ 155 ರನ್ ಗಳಿಸಲಷ್ಟೇ ಶಕ್ತವಾಗಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಕನ್ನಡಿಗರಾದ ರಾಹುಲ್ 47, ಕರುಣ್ ನಾಯರ್ 29 ಹಾಗೂ ನಾಯಕ ಅಶ್ವಿನ್ 33 ರನ್ ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಆಟ ಪಂಜಾಬ್ ಗೆ ಸಿಗಲಿಲ್ಲ.
ಗುರಿ ಬೆನ್ನತ್ತಿದ ಬೆಂಗಳೂರು ಡಿಕಾಕ್ 45, ಡಿವಿಲಿಯರ್ಸ್ 57 ಮಂದೀಪ್ 22 , ನಾಯಕ ಕೊಹ್ಲಿ 21 ರನ್ ಗಳ ಬಲದಿಂದ 19.3 ಓವರ್ ಗಳಲ್ಲಿ ಗುರಿಮುಟ್ಟಿತು.