IPL 2020 : 8 ಟೀಮ್ 8 ಮಂದಿ ಗೇಮ್ ಚೇಂಜರ್ಸ್..!

Date:

IPL 2020 : 8 ಟೀಮ್ 8 ಮಂದಿ ಗೇಮ್ ಚೇಂಜರ್ಸ್..!

13 ನೇ ಆವೃತ್ತಿ ಐಪಿಎಲ್ಗೆ ದಿನಗಣನೆ ಶುರುವಾಗಿದೆ. ನಾಡಿದ್ದು ಶನಿವಾರದಿಂದ ಯು ಎಇನಲ್ಲಿ ಐಪಿಎಲ್ 2020 ಹಬ್ಬದ ಆರಂಭ. ಕಳೆದ 12 ಆವೃತ್ತಿಗಳಲ್ಲಿ ಸಾಕಷ್ಟು ಕುತೂಹಲಕಾರಿ ಮ್ಯಾಚ್ ಗಳಲ್ಲಿ ನೋಡಿದ್ದೇವೆ. ಕೆಲವು ಆಟಗಾರರು ಗೇಮ್ ಚೇಂಜರ್ಸ್ ಆಗಿ ಮಿಂಚಿದ್ದಾರೆ. ಪಂದ್ಯ ಇನ್ನೇನು ಎದುರಾಳಿ ತೆಕ್ಕೆಗೆ ಹೋಯ್ತು ಅನ್ನುವಷ್ಟರಲ್ಲಿ ವಿರೋಚಿತ ಆಟದ ಮೂಲಕ ಗೆಲುವನ್ನು ತಮ್ಮತ್ತ ಸೆಳೆಯುವ ಆಟಗಾರರು ಎಲ್ಲಾ ತಂಡದಲ್ಲೂ ಇದ್ದಾರೆ. ಈ ಬಾರಿಯ 8 ತಂಡಗಳಲ್ಲಿ ಯಾರ್ಯಾರು ಗೇಮ್ ಚೇಂಜರ್ಸ್ ಅನ್ನೋದನ್ನು ನೋಡೋಣ.


ಆರ್ ಸಿ ಬಿ : ಮೊದಲನೆಯದಾಗಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೇಮ್ ಚೇಂಜರ್ ಯಾರು ಎಂಬುದನ್ನು ನೋಡೋಣ. ದಕ್ಷಿಣ ಆಫ್ರಿಕಾದ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಆರ್ ಸಿ ಬಿಯ ಪ್ರಮುಖ ಗೇಮ್ ಚೇಂಜರ್. ಯಾರೂ ಊಹಿಸದ ರೀತಿಯಲ್ಲಿ, ಕ್ಷಣಮಾತ್ರದಲ್ಲಿ ಪಂದ್ಯದ ಗತಿಯನ್ನು ಬದಲಾಯಿಸುತ್ತಾರೆ.


ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡದ ಹಾಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅದ್ಭುತ ಗೇಮ್ ಚೇಂಜರ್ ಅನ್ನೋದ್ರಲ್ಲಿ ಡೌಟಿಲ್ಲ. ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್ ಎದುರಾಳಿಗಳನ್ನು ಇನ್ನಿಲ್ಲದಂತೆ ಕಾಡುವುದು ಗ್ಯಾರೆಂಟಿ.

ಕೆಕೆಆರ್ : ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಂಡ್ರೆ ರಸೆಲ್ ಗೇಮ್ ಚೇಂಜರ್. ನಿಮಗೆ ಗೊತ್ತಿರಬಹುದು 2019ರ ಟೂರ್ನಿಯಲ್ಲಿ ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಕೋಲ್ಕತ್ತಾಕ್ಕೆ ಗೆಲ್ಲಲು 3 ಓವರ್ ಗಳಲ್ಲಿ 52 ರನ್ ಬೇಕಿತ್ತು. ಆಗ ರಸೆಲ್ 13 ಬಾಲ್ ಗಳಲ್ಲಿ 48 ರನ್ ಬಾರಿಸಿ, ಇನ್ನೂ 5 ಬಾಲ್ ಗಳು ಬಾಕಿ ಇರುವಂತೆಯೇ ಕೋಲ್ಕತ್ತಾವನ್ನು ಗೆಲುವಿನ ದಡ ಸೇರಿಸಿದ್ದರು..!


 ಎಸ್ ಆರ್ ಎಸ್ ನಲ್ಲಿ ಕನ್ನಡಿಗ : ಸನ್ ರೈಸರ್ಸ್ ಹೈದರಾಬಾದ್ನಲ್ಲಿ ಗೇಮ್ ಚೇಂಜರ್ ಕನ್ನಡಿಗ ಮನೀಶ್ ಪಾಂಡೆ. ಕಷ್ಟದ ಪರಿಸ್ಥಿತಿಯಲ್ಲಿ ತಂಡಕ್ಕೆ ನೆರವಾಗಬಲ್ಲರು.

ಕಿಂಗ್ಸ್ ಇಲೆವೆನ್ ಪಂಜಾಬ್ : ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಎಕ್ಸ್ ಫ್ಯಾಕ್ಟರ್ ಪ್ಲೇಯರ್ ಗ್ಲೇನ್ ಮ್ಯಾಕ್ಸ್ವೆಲ್. ಅಂತೆಯೇ ನಾಯಕ ರಾಹುಲ್ ಕೂಡ ಗೇಮ್ ಚೇಂಜರ್ರೇ…


ಡೆಲ್ಲಿ ಕ್ಯಾಪಿಟಲ್ಸ್ : ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರೂ ಐಪಿಎಲ್ ನಲ್ಲಿ ರಿಷಭ್ ಪಂತ್ ಮೇಲೆ ನಿರೀಕ್ಷೆ ಭಾರವಿದೆ. 54 ಐಪಿಎಲ್ ಪಂದ್ಯಗಳನ್ನು ಆಡಿರುವ ರಿಷಭ್ 162.69 ಸ್ಟ್ರೈಕ್ ರೇಟ್ನಲ್ಲಿ 1736ರನ್ ಬಾರಿಸಿದ್ದಾರೆ. ಅವರು ಯಾವ ಸಂದರ್ಭದಲ್ಲಿ ಬೇಕಾದರೂ ಪಂದ್ಯದ ಗತಿ ಬದಲಿಸ ಬಲ್ಲರು.

ರಾಜಸ್ಥಾನ ರಾಯಲ್ಸ್ : ಈ ಹಿಂದೆ ಕಿಂಗ್ಸ್ ಇಲೆವೆಲ್ ಪಂಜಾಬ್ ನಲ್ಲಿದ್ದ ಮ್ಯಾಚ್ ವಿನ್ನರ್ ಡೇವಿಡ್ ಮಿಿಿಿಲ್ಲಲ್ಲರ್್ ರಾಜಸ್ಥಾನ ರಾಯಲ್ಸ್ ತಂಡದ ಗೇಮ್ ಚೇಂಜರ್. ಕ್ಷಣ ಮಾತ್ರದಲ್ಲಿ ಪಂದ್ಯದ ಗತಿಯನ್ನು ಬದಲಾಯಿಸಬಲ್ಲ ಮಿಲ್ಲರ್ ಕಿಲ್ಲರ್ ಎಂದೇ ಜನಪ್ರಿಯರಾಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ : ಇನ್ನು ಚೆನ್ನೈ ಸೂಪರ್ ಕಿಂಗ್ಸ್ ನ ಗೇಮ್ ಚೇಂಜರ್ ಯಾರು ಅಂತ ಎಲ್ಲರಿಗೂ ಗೊತ್ತೇ ಇದೆ. ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ತಂಡದ ಗೇಮ್ ಚೇಂಜರ್ ಆಗಿದ್ದಾರೆ.

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...