ನೀವು ಬೆಂಗಳೂರಲ್ಲೇ ಇದ್ದೀರ….? ಆರ್ ಸಿಬಿ ಮ್ಯಾಚ್ ನೋಡೋಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗ್ತೀರ…? ಹಾಗಾದ್ರೆ ಈ ಶಾಕಿಂಗ್ ನ್ಯೂಸ್ ನೀವು ಓದಲೇ ಬೇಕು.
ಕಳ್ಳರ ಕಾಟ ಶುರುವಾಗಿದೆ…! ಚಿನ್ನಸ್ವಾಮಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಬಂದ ಪ್ರೇಕ್ಷಕರ 15 ಬೈಕ್ ಗಳನ್ನು ಕದ್ದಿದ್ದಾರೆ…!
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ವೇಳೆ ಕಬ್ಬನ್ ಪಾರ್ಕ್ ನಲ್ಲಿ 15 ಬೈಕ್ ಗಳು ಕಳವಾಗಿವೆ. ಕಬ್ಬನ್ ಪಾರ್ಕ್ ನಲ್ಲಿ ಪಾರ್ಕಿಂಗ್ ಮಾಡಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಹೋದಾಗ ಕಳ್ಳರು ಕೈಚಳಕ ತೋರಿಸಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.