ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಡ್ರಾಪ್ ಆಗಿರುವ ಬಗ್ಗೆ ಸ್ಪೋಟರ ಬ್ಯಾಟ್ಸಮನ್ ಕೊನೆಗೂ ಬಾಯ್ಬಿಟ್ಟು, ಸತ್ಯವನ್ನು ಬಿಚ್ಚಿಟ್ಟಿದ್ದಾರೆ….!
ಆರ್ ಸಿಬಿ ಯ ಆಯ್ಕೆಗಾರರು ಐಪಿಎಲ್ 11ನೇ ಆವೃತ್ತಿಗೆ ತನ್ನನ್ನು ಉಳಿಸಿಕೊಳ್ಳುವ ಬಗ್ಗೆ ಮೊದಲು ಮಾಹಿತಿ ನೀಡಿದ್ದರು. ಆದರೆ ನಂತರ ನನ್ನ ಸಂಪರ್ಕಿಸಿಲ್ಲ. ಇದರಿಂದ ನನಗೆ ನಿರಾಸೆಯಾಗಿತ್ತು ಎಂದು ಗೇಲ್ ಮನದ ನೋವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಆರ್ ಸಿ ಬಿ ನನ್ನ ಕೈ ಬಿಟ್ಟ ಬಗ್ಗೆ ಯಾರನ್ನೂ ಹೊಣೆಯಾಗಿಸಲು ಬಯಸುವುದಿಲ್ಲ. ತಾನು ಹಿಂದಿನ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ.
ಅಚ್ಚರಿ ಎಂಬಂತೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆರಂಭದಲ್ಲಿ ನನ್ನ ಯಾರೂ ಆಯ್ಕೆ ಮಾಡಿರಲಿಲ್ಲ. ಮೂರನೇ ಬಾರಿ ಸೆಹ್ವಾಗ್ ಕಿಂಗ್ಸ್ ಇಲೆವೆನ್ ಪರ ಆಡುವ ಅವಕಾಶ ನೀಡಿದರು. ಇದು ತನಗೆ ಅಚ್ಚರಿ ಮೂಡಿಸಿತ್ತು.
ಈ ಮೊದಲು ತಾನು ಟೂರ್ನಿಗೆ ಅಗತ್ಯವಿಲ್ಲ ‘ಇಟ್ಸ್ ಫೈನ್’ ಎಂದು ಸಮಾಧಾನಗೊಂಡಿದ್ದೆ ಎಂದು ಗೇಲ್ ಮನದ ಮಾತನ್ನಾಡಿದರು .
ಪಂಜಾಬ್ ಗೆ ಕಪ್ ಗೆಲ್ಲಿಸಿಕೊಡೋದು ನನ್ನ ಗುರಿ. ಬಳಿಕ 2019ರ ವಿಶ್ವಕಪ್ ಅನ್ನು ತನ್ನ ದೇಶ ವೆಸ್ಟ್ ಇಂಡೀಸ್ ಗೆ ಗೆಲ್ಲಿಸಿಕೊಡುವ ಗುರಿ ಹೊಂದಿರುವುದಾಗಿ ಹೇಳಿದರು.