12ನೇ ಆವೃತ್ತಿ ಐಪಿಎಲ್ ಗೆ ಕ್ಷಣಗಣನೆ ಆರಂಭವಾಗಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೊದಲ ಪಂದ್ಯ ನಡೆಯಲಿದೆ.
ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡೂ ತಂಡಗಳ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ ಇದೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಇದುವರೆಗೆ 23 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿಆರ್ ಸಿಬಿ ಕೇವಲ 7 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಚೆನ್ನೈ 15 ಪಂದ್ಯದಲ್ಲಿ ಗೆದ್ದಿದ್ದು, 1 ಪಂದ್ಯದ ಫಲಿತಾಂಶ ಬಂದಿಲ್ಲ.
ಇದುವರೆಗೆ ಚೆನ್ನೈ 3 ಬಾರಿ ಚಾಂಪಿಯನ್ ಆಗಿದೆ. ಬೆಂಗಳೂರು ಮೂರು ಬಾರಿ ರನ್ನರ್ ಅಪ್ ಆಗಿದೆ.
ಅಂಕಿ ಅಂಶ ದಾಖಲೆಗಳ ಪ್ರಕಾರ ಚೆನ್ನೈ ಮುಂದಿದ್ದರೂ ಬೆಂಗಳೂರು ಪ್ರಬಲ ತಂಡ. ರನ್ ಮಿಷನ್ ನಾಯಕ ವಿರಾಟ್ ಕೊಹ್ಲಿ, ಎ.ಬಿ ಡಿವಿಲಿಯರ್ಸ್ , ಶ್ರೀಮಾನ್ ಹೆಟ್ಮಾಯೆರ್, ಟಿಮ್ ಸೌಥಿ ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ.
ಸಿಎಸ್ ಕೆ ಗೆ ನಾಯಕ ಮಹೇಂದ್ರ ಸಿಂಗ್ ಧೋನಿ, ಶೇನ್ ವ್ಯಾಟ್ಸನ್, ಡ್ವೇನ್ ಬ್ರಾವೋ , ಸುರೇಶ್ ರೈನಾ ಸೇರಿದಂತೆ ಅನುಭವಿಗಳೇ ಆಧಾರ.
ಇಂದಿನಿಂದ ಐಪಿಎಲ್ ಕಲರವ…
Date: