ಕನ್ನಡಿಗ ರಾಹುಲ್ ಅವರ ವೇಗದ ಅರ್ಧ ಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಡೆಲ್ಲಿ ಡೇರ್ ಡೆವಿಲ್ಸ್ ಅನ್ನು6 ವಿಕೆಟ್ ಗಳಿಂದ ಮಣಿಸಿದೆ.
ಮೊಹಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಡೇರ್ ಡೆವಿಲ್ಸ್ ನಾಯಕ ಗೌತಮ್ ಗಂಭೀರ್ ಅವರ ಆಕರ್ಷಕ ಅರ್ಧಶತಕದ ಬಲದಿಂದ ನಿಗಧಿತ 20 ಓವರ್ ಗಳಲ್ಲಿ 7ವಿಕೆಟ್ ಗೆ 166ರನ್ ಗಳಿಸಿತು.
ಸವಾಲಿನ ಗುರಿ ಬೆನ್ನಟ್ಟಿದ ಡೆಲ್ಲಿಗೆ ಆರಂಭಿಕ ಆಟಗಾರ ಕನ್ನಡಿಗ ರಾಹುಲ್ ಆರಂಭದಲ್ಲೇ ಗೆಲುವಿನ ದಾರಿ ತೋರಿಸಿದರು. ಪೆವಿಲಿಯನ್ ದಾರಿ ಹಿಡಿಯುವ ಮುನ್ನ ಕೇವಲ. 16 ಎಸೆತಗಳಲ್ಲಿ 51 ರನ್ ಗಳಿಸಿದರು.
ಅಂತಿಮವಾಗಿ ಪಂಜಾಬ್ 18.5 ಓವರ್ ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆಬೀರಿತು.