ಐಪಿಎಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೂ ಗಾಯದ ಸಮಸ್ಯೆಯಿಂದ ಹೊಡೆತ ತಿಂದಿದೆ.
ಮೊದಲ ಪಂದ್ಯದಲ್ಲಿ ಕೇದರ್ ಜಾದವ್ ಗಾಯಗೊಂಡಿದ್ದರು. ಈಗಾಗಲೇ ಅವರು ಪಂದ್ಯದಿಂದ ದೂರ ಸರಿದ್ದಾರೆ. ಇದೀಗ ಗಾಯಾಳು ಪಟ್ಟಿಗೆ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರ ಸೇರ್ಪಡೆಯಾಗಿದೆ.
ಕಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದವೇಳೆ ರೈನಾ ಗಾಯಗೊಂಡಿದ್ದರು. ಅವರಿನ್ನೂ ಚೇತರಿಸಿಕೊಳ್ಳದ ಕಾರಣ ಮುಂದಿನ ಎರಡು ಪಂದ್ಯಗಳಿಗೆ ತಂಡದಿಂದ ದೂರ ಉಳಿಯುತ್ತಾರೆ.
ಏಪ್ರಿಲ್ 15ರಂದು ಕಿಂಗ್ಸ್ ಇಲೆವೆಲ್ ಪಂಜಾಬ್ , ಏಪ್ರಿಲ್ 20ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುವ ಪಂದ್ಯಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಗೆ ರೈನ ಸೇವೆ ಸಿಗುವುದಿಲ್ಲ.