“ಐಸಿಸ್” ಎಂದ ತಕ್ಷಣ ಯಾರದ್ದೇ ಆದ್ರೂ ಎದೆ ನಡುಗದಿರೋಲ್ಲ. ಐಸಿಸ್ ಅಂದ್ರೆ ಅಮೇರಿಕಾ, ರಷ್ಯಾ ಇಂಗ್ಲೆಂಡ್ ಗಳಂತಹ ಬಲಿಷ್ಠ ರಾಷ್ಟ್ರಗಳೇ ಬೆಚ್ಚಿಬೀಳುತ್ತೆ. ಕೇವಲ ಹಿಂಸೆಯನ್ನೇ ತನ್ನ ಮೂಲಮಂತ್ರವನ್ನಾಗಿಸಿಕೊಂಡಿರುವ ಭಯಾನಕ ಉಗ್ರ ಸಂಘಟನೆಯೇ ಐಸಿಸ್. ಇಸ್ಲಾಂ ಹೆಸರಿನಲ್ಲಿ ಅಮಾಯಕರ ಜೀವಗಳನ್ನ ಬಲಿ ತೆಗೆದುಕೊಳ್ಳುವ ಇಂಟರ್ನ್ಯಾಶನಲ್ ಮೋಸ್ಟ್ ಕ್ರಿಮಿನಲ್ ಟೆರರಿಸ್ಟ್ ಗ್ರೂಪ್ ಇದು. ಜಗತ್ತನ್ನೇ ಬೆಚ್ಚಿಬೀಳಿಸೋ ಐಸಿಸ್ ಉಗ್ರರಿಗೆ ಜೀವದ ಹಂಗಿಲ್ಲ. ಅದು ಯಾವ ರಾಷ್ಟ್ರಕ್ಕೂ ಜಗ್ಗಲ್ಲ ಬಗ್ಗಲ್ಲ. ಈಗಾಗಲೇ ಇಸಿಸ್ ಉಗ್ರರನ್ನು ಮಟ್ಟ ಹಾಕೋದಕ್ಕೆ ಹಲವು ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಅನೇಕ ವೈಮಾನಿಕ ದಾಳಿಗಳು ನಡೆದಿವೆ. ಇತ್ತೀಚೆಗಷ್ಟೆ ಉಗ್ರ ಸಂಘನಟೆಗೆ ಬೆಂಬಲಿಸುವ, ಅವರ ಜೊತೆ ಸೇರಿ ವಿದ್ವಂಸಕ ಕೃತ್ಯಕ್ಕೆ ನೆರವಾಗುವ ಯುವಕರನ್ನು ಗುರುತಿಸಿ ಕಂಡಲ್ಲಿ ಗುಂಡು ಹೊಡೆಯುವ ಪಡೆಯನ್ನು ಬ್ರಿಟನ್ ನೇಮಿಸಿದೆ.
ಉಗ್ರರಿಗೆ ಕಡಿಮೆಯೆಂದರೂ ನಲವತ್ತು ರಾಷ್ಟ್ರಗಳು ಆರ್ಥಿಕವಾಗಿ ಸಹಕರಿಸುತ್ತಿವೆ. ವೆಪನ್ಸ್ ಪೂರೈಸುತ್ತಿದೆ. ಹಾಗಾಗಿ ಅವರ ಬಳಿ ಅತ್ಯಾಧುನಿಕ ಅಸ್ತ್ರಗಳಿವೆ. ಮೊದಲು ಈ ಮೂಲದಲ್ಲಿ ಸುಧಾರಣೆಯಾಗಬೇಕು ಎಂದಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್. ಒಟ್ಟಿನಲ್ಲಿ ಐಸಿಸ್ ಉಗ್ರರು ಇಡೀ ಜಗತ್ತಿಗೆ ನುಂಗಲಾದ ತುತ್ತಾಗಿದ್ದಾರೆ. ಆದರೆ ಆ ಒಬ್ಬ ಗಂಡಿನ ಮುಂದೆ ಮಾತ್ರ ಐಸಿಸ್ ಉಗ್ರರ ಆಟ ನಡೆಯುತ್ತಿರಲಿಲ್ಲ. ಅವನ ಹೆಸ್ರು ಅಬೂ ಅಜ್ರೇಲ್.
ಜಗತ್ತಿನ ಬಹುತೇಕ ರಾಷ್ಟ್ರಗಳು ದೊಡ್ಡಣ್ಣ ಅಮೆರಿಕಾದ ಮುಂದೆ ತಲೆ ಬಾಗುತ್ತವೆ. ಕೆಲವು ರಾಷ್ಟ್ರಗಳಿಗೆ ಇಗೋ ಸಮಸ್ಯೆ ಇರುವುದರಿಂದ ಮೇಲ್ನೋಟಕ್ಕೆ ಚೆನ್ನಾಗಿದ್ದಂತೆ ನಟಿಸುತ್ತವೆ. ಆದರೆ ಅಮೆರಿಕಾ ಅದೆಂತಹ ದೈತ್ಯ ಶಕ್ತಿಯಾದರೂ ಸದ್ದಾಂ ಹುಸೇನ್ ಕ್ಯಾರೇ ಎನ್ನಲಿಲ್ಲ. ಸದ್ದಾಂ ಮುಗಿಸದ ಹೊರತು ಮಿಡಲ್ ಈಸ್ಟ್ ನಲ್ಲಿ ಪಾರುಪತ್ಯ ಸಾಧಿಸಲು ಸಾಧ್ಯವಿಲ್ಲ ಅನ್ನೋದು ಅಮೆರಿಕಾಕ್ಕೆ ಗೊತ್ತಿತ್ತು. ಹಾಗಾಗಿಯೇ ಸದ್ದಾಂ ಅಂತ್ಯಕ್ಕೆ ಇರಾಕಿನಲ್ಲಿ ಷಿಯಾ ಮುಸ್ಲೀಮರನ್ನು ಎತ್ತಿಕಟ್ಟಿ ಕಡೆಗೂ ಸದ್ದಾಂನನ್ನು ನೇಣಿಗೇರಿಸುವುದರಲ್ಲಿ ಅಮೆರಿಕಾದ ಅಜೆಂಡಾ ಈಡೇರಿತ್ತು. ಆದರೆ ಇಡೀ ವಿಶ್ವಕ್ಕೆ ಕಗ್ಗಂಟಾಗಿ ಪರಿಣಮಿಸಿರೋ ಐಸಿಸ್ ಟೆರ್ರರಿಸ್ಟ್ ಗಳ ಹುಟ್ಟಿಗೆ ಅಮೆರಿಕಾ ಕಾರಣವಾಗಿತ್ತು. ನಿಜ, ಸದ್ದಾಂ ಅಂತ್ಯದ ನಂತರ ಐಸಿಸ್ ಹುಟ್ಟಿಕೊಂಡಿತ್ತು. ಯಾವಾಗ ಅಮೇರಿಕಾ ತಮ್ಮ ನಾಯಕನನ್ನೇ ಟಾರ್ಗೇಟ್ ಮಾಡಿ ಮುಗಿಸಿಹಾಕಿತ್ತೋ ಆಗಲೇ ಉಗ್ರರಿಗೆ ರಕ್ತ ಕುದಿಯಲು ಪ್ರಾರಂಭಿಸಿತ್ತು. ಇದರ ಪರಿಣಾಮವೇ ಇರಾಕ್ ಸಿರಿಯಾ ಹಾಗೂ ಲಿಬಿಯಾ ದೇಶಗಳಲ್ಲಿ ಪ್ರಭುತ್ವ ಸಾಧಿಸಿಕೊಂಡ ಉಗ್ರರು ಐಸಿಸ್ ಸಂಘಟನೆಯನ್ನ ಹುಟ್ಟುಹಾಕಿದ್ರು.
ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನ ತೋರಿಸಲು ಜೊತೆಗೆ ಜಗತ್ತಿಗೆ ತನ್ನ ಶಕ್ತಿ ಪ್ರದರ್ಶಿಸೋ ಉದ್ದೇಶದಿಂದ ಬೇರೆ ಬೇರೆ ರಾಷ್ಟ್ರವನ್ನು ಟಾರ್ಗೆಟ್ ಮಾಡಿ ಅಮಾಯಕ ಜೀವಿಗಳ ಬಲಿ ಪಡೆದುಕೊಂಡರು. ಇವತ್ತಿಗೂ ಕೂಡಾ ಐಸಿಸ್ ಅಟ್ಟಹಾಸದಿಂದ ಮಾರಣಹೋಮ ನಡೆಯುತ್ತಲೇ ಇದೆ. ಇಲ್ಲಿ ಪ್ರಮುಖ ಅಂಶವೊಂದನ್ನು ಗಮನಿಸಲೇಬೇಕು. ತನ್ನ ಅತ್ಯಾಧುನಿಕ ಹಾಗೂ ಬಲಾಢ್ಯ ಮಿಲಿಟರಿ ಪಡೆಯಿಂದಲೇ ದೊಡ್ಡಣ್ಣ ಅನಿಸಿಕೊಂಡಿರೋ ಅಮೇರಿಕಾ, ಅಣುಶಕ್ತಿ ಹೇರಳವಾಗಿರಿಸಿಕೊಂಡ ಮತ್ತೊಂದು ಪ್ರಬಲ ರಾಷ್ಟ್ರ ರಷ್ಯಾ ದೇಶಗಳಿಗೂ ಕ್ಯಾರೇ ಎನ್ನದೇ ಉಗ್ರರು ದಾಳಿ ನಡೆಸುತ್ತಿದ್ದಾರೆ. ಇದು ಬಲಾಡ್ಯ ರಾಷ್ಟ್ರಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ ಈ ಎಲ್ಲಾ ರಾಷ್ಟ್ರಗಳು ಉಗ್ರರ ದಮನಕ್ಕೆ ಒಂದಾಗಿ ತೊಡೆತಟ್ಟಿನಿಂತಿವೆ. ಇಂತಹ ಪ್ರಬಲ ರಾಷ್ಟ್ರಗಳಿಗೆ ಸವಾಲಾಗಿರುವ ಉಗ್ರ ಸಂಘಟನೆಗಳ ಕ್ರೌರ್ಯ ಎಷ್ಟರ ಮಟ್ಟಿಗಿದೆ ಅನ್ನೋದನ್ನ ನೀವೇ ಊಹಿಸಿಕೊಳ್ಳಬಹುದು.
ಮುಳ್ಳನ್ನ ಮುಳ್ಳಿನಿಂದಲೇ ತೆಗೀಬೇಕು ಅನ್ನೋ ಗಾದೆ ಮಾತಿದೆ. ಅದರಂತೆ ವ್ಯಕ್ತಿಯೊಬ್ಬ ಸಂಘಟನೆಯೊಂದನ್ನ ಕಟ್ಟಿ ಐಸಿಸ್ ಉಗ್ರರ ದಮನಕ್ಕೆ ಪಣತೊಟ್ಟಿದ್ದ. ಸದ್ಯಕ್ಕೆ ಯಾರಿಗೂ ಬೆದರದ ಐಸಿಸ್ ಈತನಿಗೆ ಹೆದರುತ್ತಿತ್ತು. ಆತನೇ ಇರಾಕಿ ರ್ಯಾಂಬೋ. ಇದು ಆತನ ನಿಜವಾದ ಹೆಸರೇನಲ್ಲ. ಅವ್ನ ಹೆಸರು ಅಬು ಅಜ್ರೇಲ್. ಇರಾಕ್ ದೇಶದ ಓರ್ವ ಯೋಧನೀತ. ಐಸಿಸ್ ಉಗ್ರರ ದೌರ್ಜನ್ಯಗಳನ್ನ ಮಟ್ಟಹಾಕಲು ತೊಡೆತಟ್ಟಿ ನಿಂತಿದ್ದು ಇರಾಕ್ ನಲ್ಲಿ ದೊಡ್ಡ ಸಂಘಟನೆಯೊಂದನ್ನು ಕಟ್ಟಿಕೊಂಡಿದ್ದ. ಇರಾಕ್ ನ ಶಿಯಾ ಮುಸ್ಲೀಮರ ಪಾಲಿಗೆ ಐಕಾನ್ ಆಗಿದ್ದ. ಇರಾಕಿ ರ್ಯಾಂಬೋ ಅಂತಾನೇ ಫೇಮಸ್ ಆದ ಅಬು ಅಜ್ರೇಲ್ ಕಟ್ಟಿದ ಸಂಘಟನೆಯ ಹೆಸರು ದಿ ಇಮಾಮ್ ಆಲಿ ಬ್ರಿಗೇಡ್. ಅದಕ್ಕಾಗಿಯೇ ಇರಾಕೀ ರ್ಯಾಂಬೋ ಇರಾಕ್ ಪ್ರಜೆಗಳ ಪಾಲಿಗೆ ದೇವರು ಎನಿಸಿಕೊಂಡಿದ್ದ.
ಐಸಿಸ್ ಸಂಘಟನೆ ಶಿಯಾ ಮುಸ್ಲೀಂರನ್ನ ಟಾರ್ಗೆಟ್ ಮಾಡಿದೆಯಲ್ಲದೇ ಶಿಯಾ ಮುಸ್ಲೀಂ ವಾಸಿಸುತ್ತಿರೋ ದೇಶಗಳ ಮೇಲೆ ವಾಯು ದಾಳಿಮಾಡಿ ಸಾವಿರಾರು ಜನರನ್ನ ಬಲಿ ತೆಗೆದುಕೊಂಡಿತ್ತು. ಈ ರೀತಿ ಸುಖಾಸುಮ್ನೆ ಅಮಾಯಕರನ್ನು ಬಲಿಪಡೆಯುತ್ತಿರೋದನ್ನು ನಾವು ಸಹಿಸೋದಿಲ್ಲ. ಹೀಗಾಗಿ ಶಿಯಾ ನಿರಾಶ್ರಿತರೆಲ್ಲಾ ಒಗ್ಗೂಡಿದ್ದೇವೆ. ಇನ್ನು ನಮ್ಮ ಮುಂದೆ ನಿಮ್ಮ ಆಟಗಳೆಲ್ಲಾ ನಡೆಯೋದಿಲ್ಲಾ ಎಂದು ಇರಾಕಿ ರ್ಯಾಂಬೋ ಸ್ಟ್ರಾಂಗ್ ವಾರ್ನಿಂಗ್ ನೀಡಿದ್ದ. ಸೌದಿ ಅರೇಬಿಯಾ ನಿಮಗೆಲ್ಲಾ ಸಪೋರ್ಟ್ ಮಾಡ್ತಿದೆ ಅನ್ನೋದು ಬಹಿರಂಗವಾಗಿದೆ. ನೋಡ್ತಾ ಇರಿ ನಾವು ಏನೇನ್ ಮಾಡ್ತೀವಿ ಅಂತ ಇರಾಕೀ ರ್ಯಾಂಬೋ ಹಾಗೂ ಆತನ ಬೆಂಬಲಕ್ಕೆ ನಿಂತ ಹಲವರು ಆವಾಜ್ ಹಾಕಿದ್ದರು. ಅಮೇರಿಕಾ ರಷ್ಯಾದಂತಹ ರಾಷ್ಟ್ರಗಳೇ ಐಸಿಸ್ ಉಗ್ರರಿಗೆ ಓಪನ್ ಚಾಲೆಂಜ್ ಹಾಕಲು ಹಿಂದೆ ಮುಂದೇ ನೋಡ್ತಾ ಇರುವಾಗ ಆ ಸಾಮಾನ್ಯ ಇರಾಕಿ ಯೋಧನೊಬ್ಬನ ಗುಂಡಿಗೆ ಎಷ್ಟು ಗಟ್ಟಿ ಇರಬೇಕು. ಮೂಲಗಳ ಪ್ರಕಾರ ಅಬು ಅಜ್ರೇಲ್ ಆಂಡ್ ಟೀಮ್ 1500 ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿತ್ತು. ಒಟ್ಟಿನಲ್ಲಿ ಇರಾಕ್ ನಲ್ಲೆಲ್ಲಾ ಅಬು ಅಜ್ರೇಲ್ನದ್ದೇ ಮಾತಾಗುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಈ ಇರಾಕೀ ರ್ಯಾಂಬೋನದ್ದೇ ಸುದ್ದಿ ಹರಿದಾಡುತ್ತಿತ್ತು.
ಅಂದಹಾಗೆ, ಅಸಲಿಗೆ ಅಬು ಅಜ್ರೇಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕನಾಗಿದ್ದ. ಅದೇ ಶಿಕ್ಷಕ ಇರಾಕ್ ನ ರಿಯಲ್ ಹೀರೋ ಒಟ್ನಲ್ಲಿ ರಕ್ತಬೀಜಾಸುರರಂತೇ ತಲೆ ಎತ್ತಿರೋ ಐಸಿಸ್ ಉಗ್ರರನ್ನ ಹೊಡೆದುರುಳಿಸಲು ಅಬು ಅಜ್ರೆಲ್ ನೇತ್ರತ್ವದ ತಂಡ ಸಜ್ಜಾಗಿ ನಿಂತಿತ್ತು. ಆದರೆ ಇದೀಗ ಅದೇ ಇರಾಕಿ ರ್ಯಾಂಬೋನನ್ನು ಐಸಿಸ್ ಉಗ್ರರು ಕೊಂದು ಹಾಕಿದ್ದಾರೆ ಎಂಬ ಸುದ್ದಿ ಬಂದಿದೆ. ಅದು ಎಷ್ಟು ನಿಜವೋ ಗೊತ್ತಿಲ್ಲ.
- ರಿಪೋರ್ಟರ್.
POPULAR STORIES :
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!